'ಅಮೇಜಾನ್ ಪ್ರೈಮ್'ನಲ್ಲಿ ಇತಿಹಾಸ ಬರೆದ ಯಶ್ ಕೆಜಿಎಫ್

Recommended Video

2019 ರಲ್ಲಿ ಯಾವ ಸಿನಿಮಾ ಕೂಡಾ ಈ ದಾಖಲೆ ಮಾಡಿಲ್ಲ | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ತೆರೆಕಂಡು ಒಂದು ವರ್ಷ ಆಗಿದೆ. ಕಳೆದ ವರ್ಷ ಡಿಸೆಂಬರ್ 20ಕ್ಕೆ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಾಪ್ಟರ್ 1 ಬಿಡುಗಡೆಯಾಗಿತ್ತು.

ಐದು ಭಾಷೆಯಲ್ಲಿ ಸೂಪರ್ ಸಕ್ಸಸ್ ಕಂಡ ಕೆಜಿಎಫ್ ಭಾರತೀಯ ಚಲನಚಿತ್ರ ರಂಗದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿತ್ತು. ಇದೀಗ, 2019ನೇ ವರ್ಷದಲ್ಲಿ ಕೆಜಿಎಫ್ ಹೊಸ ದಾಖಲೆಯೊಂದನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ.

ಸದ್ಯ ಡಿಜಿಟಲ್ ದುನಿಯಾ ಆಳುತ್ತಿರುವ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಕೆಜಿಎಫ್ ಸಿನಿಮಾ ವಿಶೇಷ ದಾಖಲೆ ಬರೆದಿದೆ. ಏನದು? ಮುಂದೆ ಓದಿ....

ಅತಿ ಹೆಚ್ಚು ವೀಕ್ಷಣೆ ಕಂಡ ಸಿನಿಮಾ

ಅತಿ ಹೆಚ್ಚು ವೀಕ್ಷಣೆ ಕಂಡ ಸಿನಿಮಾ

2019ನೇ ಸಾಲಿನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್ ಚಾಪ್ಟರ್ 1 ಪಾತ್ರವಾಗಿದೆ. ಐದು ಭಾಷೆಯಲ್ಲಿ ತೆರೆಕಂಡಿದ್ದ ಕೆಜಿಎಫ್ ಚಿತ್ರವನ್ನು ಅಮೇಜಾನ್ ವೀಕ್ಷಕರು ಹೆಚ್ಚು ನೋಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ವಿಷಯವನ್ನು ದಕ್ಷಿಣ ಭಾರತದ ಖ್ಯಾತ ಚಿತ್ರ ವಿಶ್ಲೇಷಕ ರಮೇಶ್ ಬಾಲ ಹಂಚಿಕೊಂಡಿದ್ದಾರೆ.

ಐದು ಭಾಷೆಯ ವೀಕ್ಷಣೆ

ಐದು ಭಾಷೆಯ ವೀಕ್ಷಣೆ

ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಐದು ಭಾಷೆಯಲ್ಲಿ ಸೇರಿ 2019ರಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿರುವ ಭಾರತೀಯ ಸಿನಿಮಾ ಕೆಜಿಎಫ್ ಆಗಿದೆ. ಐದು ಭಾಷೆಯ ಡಿಜಿಟಲ್ ಹಕ್ಕು ಅಮೇಜಾನ್ ಪ್ರೈಮ್ ಖರೀದಿ ಮಾಡಿತ್ತು. ಈ ಮೂಲಕ ಈ ವರ್ಷದಲ್ಲಿ ತೆರೆಕಂಡಿದ್ದ ಕೆಲವು ಸೂಪರ್ ಹಿಟ್ ಚಿತ್ರಗಳನ್ನು ಹಿಂದಿಕ್ಕಿದೆ.

50 ದಿನದ ಬಳಿಕ ರಿಲೀಸ್ ಆಗಿತ್ತು

50 ದಿನದ ಬಳಿಕ ರಿಲೀಸ್ ಆಗಿತ್ತು

ಅಂದ್ಹಾಗೆ, ಬಿಡುಗಡೆಯಾದ 50 ದಿನದ ಬಳಿಕ ಕೆಜಿಎಫ್ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಿತ್ತು. 2018ರ ಡಿಸೆಂಬರ್ 20 ರಂದು ಸಿನಿಮಾ ಅಧಿಕೃತವಾಗಿ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಆದರೆ 2019 ಫೆಬ್ರವರಿ 5 ರಂದು ಕೆಜಿಎಫ್ ಸಿನಿಮಾ ಅಮೇಜಾನ್ ನಲ್ಲಿ ಬಿಡುಗಡೆಯಾಗಿತ್ತು. ಆದರೂ ಅತಿ ಹೆಚ್ಚು ವೀಕ್ಷಕರು ಸಿನಿಮಾ ನೋಡಿರುವುದು ದಾಖಲೆ.

ಚಾಪ್ಟರ್ 2ಗೆ ಬೇಡಿಕೆ ಜಾಸ್ತಿ

ಚಾಪ್ಟರ್ 2ಗೆ ಬೇಡಿಕೆ ಜಾಸ್ತಿ

ಕೆಜಿಎಫ್ ಚಾಪ್ಟರ್ 1 ಸಕ್ಸಸ್ ಕಂಡ ಮೇಲೆ ಚಾಪ್ಟರ್ 2 ಮೇಲೆ ಸಹಜವಾಗಿ ನಿರೀಕ್ಷೆ ಹೆಚ್ಚಿದೆ. ಅಮೇಜಾನ್ ಪ್ರೈಮ್ ವಿಡಿಯೋ ವಿಚಾರದಲ್ಲೂ ಈ ಬೇಡಿಕೆ ಹೆಚ್ಚಿರುತ್ತೆ. ಮೊದಲ ಭಾಗದಲ್ಲಿ ಇಷ್ಟು ದೊಡ್ಡ ಯಶಸ್ಸು ಕಂಡ ಸಿನಿಮಾದ ಮುಂದುವರಿದ ಭಾಗದ ಹಕ್ಕು ಖರೀದಿಸಲು ಅಮೇಜಾನ್ ಎಲ್ಲ ರೀತಿಯಲ್ಲೂ ಸಜ್ಜಾಗಿರುತ್ತೆ.

ಧಮ್ ಹೆಚ್ಚಿಸಿದ ಸಂಜಯ್ ದತ್

ಧಮ್ ಹೆಚ್ಚಿಸಿದ ಸಂಜಯ್ ದತ್

ಬೇರೆ ಇಂಡಸ್ಟ್ರಿಗಳಲ್ಲಿ ಅಷ್ಟಾಗಿ ಪರಿಚಯವಿಲ್ಲದ ಯಶ್ ನಾಯಕರಾಗಿದ್ದರೂ ಕೆಜಿಎಫ್ ಭಾರಿ ಯಶಸ್ಸು ಕಂಡಿತ್ತು. ಈಗ ಸಂಜತ್ ದತ್, ರವೀನಾ ಟಂಡನ್ ಆಗಮನವಾಗಿದೆ. ಇದು ಮತ್ತಷ್ಟು ಕಿಕ್, ಬೇಡಿಕೆ ಹೆಚ್ಚಾಗುವಂತೆ ಮಾಡಿದೆ. ಹಾಗಾಗಿ, ಡಿಜಿಟಲ್ ಹಕ್ಕು, ವಿತರಣೆ ಹಕ್ಕು ಈ ಸಲ ಡಬಲ್ ಆದರೂ ಅಚ್ಚರಿ ಇಲ್ಲ.

More from Filmibeat

English summary
Rocking Star Yash starrer KGF in all languages is the Most Viewed Indian Movie on Amazon Prime in 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X