'KGF 2' 2 Days Offical Collection: ಹೊಂಬಾಳೆ ಫಿಲ್ಮ್ಸ್ ಕೊಟ್ಟ 2 ದಿನಗಳ ಕಲೆಕ್ಷನ್ ಲೆಕ್ಕ!
ವಿಶ್ವದಾದ್ಯಂತ 'ಕೆಜಿಎಫ್ 2' ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಮೊದಲ ದಿನ ಕನ್ನಡದ ಪ್ಯಾನ್ ಇಂಡಿಯಾ ಚಿತ್ರ ದಾಖಲೆ ಮಟ್ಟದ ಗಳಿಕೆ ಮಾಡಿ ಇತಿಹಾಸ ಸೃಷ್ಟಿಸಿದೆ. 'ಕೆಜಿಎಫ್ 2' ರಿಲೀಸ್ ಆದಾಗಿನಿಂದಲೂ ಚಿತ್ರದ ಗಳಿಕೆ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ. ಮೊದಲ ದಿನದ ಕಲೆಕ್ಷನ್ ಮೂಲಕ 'ಕೆಜಿಎಫ್ 2' ಇತಿಹಾಸ ಬರೆದಿದೆ.
Recommended Video

ಮೊದಲ ದಿನದ ಕಲೆಕ್ಷನ್ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಈ ಚಿತ್ರ ಗಳಿಕೆ ಉತ್ತಮವಾಗಿಯೇ ಇದೆ. ಚಿತ್ರದಲ್ಲಿ ಅದರಲ್ಲೂ ಕನ್ನಡದ ಒಂದು ಚಿತ್ರ ಇಷ್ಟ ಮಟ್ಟಿಗೆ ದೊಡ್ಡ ಓಪನಿಂಗ್ ಪಡೆದುಕೊಂಡಿದ್ದು ಇದೇ ಮೊದಲು. ಹಾಗಾಗಿ ಕನ್ನಡದಲ್ಲೂ ಕೆಜಿಎಫ್ 2 ಒಂದು ದಾಖಲೆ ಆಗಿ ಉಳಿದಿದೆ.
ಮೊದಲ ದಿನದ ಗಳಿಕೆ ನಂತರ, ಎರಡನೇ ದಿನದ ಗಳಿಕೆ ಎಷ್ಟು ಎನ್ನುವ ಬಗ್ಗೆ ಕುತೂಹಲ ಹೆಚ್ಚಿತ್ತು. ಈಗ ಅದಕ್ಕೆ ನಿರ್ಮಾಣ ಸಂಸ್ಥೆ ಹೊಂಬಾಳೆ ಉತ್ತರ ಕೊಟ್ಟಿದೆ. 'ಕೆಜಿಎಫ್ 2' ಚಿತ್ರದ ಎರಡನೇ ದಿನದ ಕಲೆಕ್ಷನ್ ಎಷ್ಟು ಎನ್ನುವುದನ್ನು ಅಧಿಕೃತಕವಾಗಿ ಘೋಷಣೆ ಮಾಡಿದೆ.

KGF 2 ಎರಡನೇ ದಿನಕ್ಕೆ ಗಳಿಸಿದ್ದು 240 ಕೋಟಿ!
'ಕೆಜಿಎಫ್ 2' ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಎರಡು ದಿನದ ಕಲೆಕ್ಷನ್ ರಿಪೋರ್ಟ್ ರಿವೀಲ್ ಮಾಡಿದೆ. ಹೊಂಬಾಳೆ ನೀಡಿರುವ ಲೆಕ್ಕಾಚಾರದ ಪ್ರಕಾರ ಎರಡನೇ ದಿನಕ್ಕೆ 'ಕೆಜಿಎಫ್ 2' ಚಿತ್ರ ಸುಮಾರು 240 ಕೋಟಿ ರೂ. ಗಳಿಕೆಯಾಗಿದೆ ಎಂದು ಹೇಳಿದೆ. ಇದು ಭಾರತದಾದ್ಯಂತ ಕಲೆ ಹಾಕಿರುವ ಮೊತ್ತ. ಆದರೆ ವಿಶ್ವಾದ್ಯಂತ ಈ ಲೆಕ್ಕಾ ತೆಗೆದುಕೊಂಡರೆ ಇದು ಇನ್ನಷ್ಟು ಹೆಚ್ಚಾಗಲಿದೆ.

ಮೊದಲ ದಿನ 'ಕೆಜಿಎಫ್ 2' ಗಳಿಸಿದ್ದು 134.5 ಕೋಟಿ!
ಮೊದಲ ದಿನ 'ಕೆಜಿಎಫ್ 2' ಸಿನಿಮಾದ ಗಳಿಕೆ ಸುಮಾರು 130 ರಿಂದ 145 ಕೋಟಿ ಅಗಬಹುದು ಎಂದು ಅಂದಾಜಿಸಲಾಗಿತ್ತು. ಅಂತೆಯೇ ನಿರೀಕ್ಷೆಯನ್ನು ಹುಸಿ ಮಾಡದೇ, 134.5 ಕೋಟಿ ಗಳಿಕೆ ಮಾಡಿದೆ ಎಂದು ಹೊಂಬಾಳೆ ಫಿಲ್ಮ್ಸ್ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್ ಕೊಟ್ಟಿದೆ.

'KGF 2' ಹಿಂದಿಯಲ್ಲಿ ಭರ್ಜರಿ ಬೇಟೆ!
'ಕೆಜಿಎಫ್ 2' ಹಿಂದಿ ಮಾರ್ಕೆಟ್‌ನಲ್ಲಿ ಭರ್ಜರಿಯಾಗಿ ಓಡುತ್ತಿದೆ. ಮೊದಲ ದಿನ ಈ ಸಿನಿಮಾ 53.95 ಕೋಟಿ ಗಳಿಸಿತ್ತು. ಎರಡನೇ ದಿನ 45 ಕೋಟಿ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ವಿಶ್ಲೇಶಕರು ಹೇಳುತ್ತಿದ್ದಾರೆ. 'ಕೆಜಿಎಫ್ 2' ಮಾರ್ಕೆಟ್‌ನಲ್ಲಿ ಎರಡೇ ದಿನಕ್ಕೆ 100 ಕ್ಲಬ್ ಸೇರಿದೆ. ಬಾಲಿವುಡ್ ಚಿತ್ರಗಳನ್ನು ಹಿಂದಿಕ್ಕಿ 'ಕೆಜಿಎಫ್ 2' ದಾಖಲೆ ಮಾಡಿದೆ.

ವಿದೇಶದಲ್ಲೂ 'ಕೆಜಿಎಫ್' ಕಲೆಕ್ಷನ್ ಸೂಪರ್!
'ಕೆಜಿಎಫ್ 2' ಸಿನಿಮಾ ವಿಶ್ವದ ಹಲವೆಡೆ ರಿಲೀಸ್ ಆಗಿದೆ. ಎಲ್ಲೆಲ್ಲಿ ಚಿತ್ರ ರಿಲೀಸ್ ಆಗಿದೆಯೋ, ಅಲ್ಲೆಲ್ಲಾ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅಮೆರಿಕದಲ್ಲಿ 'ಕೆಜಿಎಫ್ 2' ಸಿನಿಮಾ ಗಳಿಕೆ ಜೋರಾಗೇ ಇದೆ. ಎರಡೇ ದಿನಕ್ಕೆ ಸಿನಿಮಾ ಸುಮಾರು 18 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಒಟ್ಟಾರೆ ದೇಶ, ವಿದೇಶದಲ್ಲಿ ಸೇರಿದರೆ ಈಗ ಇರುವ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.


Click it and Unblock the Notifications











