Don't Miss!
- Sports
ಈ ಕ್ರಿಕೆಟಿಗರು ಕ್ರಿಕೆಟ್ನಲ್ಲಿ ಮಿಂಚಿದ್ದು ಮಾತ್ರವಲ್ಲದೇ ಸಿನಿಮಾಗಳಲ್ಲಿ ಅಭಿನಯಿಸಿ ನಟರಾದದ್ದು ನಿಮಗೆ ಗೊತ್ತಾ?
- Lifestyle
ನಿಯಮಿತವಾಗಿ ಅಣಬೆ ಸೇವನೆಯಿಂದ ಮಧುಮೇಹ ತಡೆಗಟ್ಟಬಹುದು
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- News
ಪೊಲೀಸರಿಗೆ ತಾಯಿ-ಮಗಳ ಚಾಟಿಂಗ್ ಹಿಸ್ಟರಿ ಕೊಟ್ಟ ಫೇಸ್ಬುಕ್; ಭಾರತದಲ್ಲೂ ಗೌಪ್ಯತೆ ಬಹಿರಂಗ?
- Automobiles
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
'ಕೆಜಿಎಫ್ 2' ನಟನ ಬೆಂಜ್ ಕಾರು ಅಪಘಾತ: ನಟ ಜಸ್ಟ್ ಮಿಸ್!
'ಕೆಜಿಎಫ್ 2' ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದ ನಟ ಬಿಎಸ್ ಅವಿನಾಶ್ ಕಾರು ಅಪಘಾತಗೊಂಡಿದೆ. 'ಕೆಜಿಎಫ್ 2' ಸಿನಿಮಾದ ಎರಡೂ ಸರಣಿಯಲ್ಲಿ ಆಂಡ್ರೂವ್ ಪಾತ್ರದಲ್ಲಿ ಅವಿನಾಶ್ ನಟಿಸಿ ಜನಮನ ಗೆದ್ದಿದ್ದಾರೆ. ಇವರ ಬೆಂಜ್ ಕಾರು ಅಪಘಾತಕ್ಕೀಡಾಗಿದೆ.
ಇಂದು (ಜೂನ್ 29) ಬೆಳಗ್ಗೆ 'ಕೆಜಿಎಫ್ 2' ನಟ ಬಿ ಎಸ್ ಅವಿನಾಶ್ ಪ್ರಯಾಣಿಸುತ್ತಿದ್ದ ವೇಳೆ ಕಾರು ಅಪಘಾತ ಸಂಭವಿಸಿದೆ. ಅವರು ಕಾರು ಜಖಂಗೊಂಡಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅರ್ಧ
ವರ್ಷ
ಮುಗಿದೇ
ಹೋಯ್ತು:
'ಜೇಮ್ಸ್',
'ಕೆಜಿಎಫ್
2',
'777
ಚಾರ್ಲಿ'
ಜೊತೆ
ಗೆದ್ದೋರು
ಯಾರು?!
ಅನಿಲ್ ಕುಂಬ್ಳೆ ಸರ್ಕಲ್ನಲ್ಲಿ ಅಪಘಾತ

ಇಂದು (ಜೂನ್ 29) ಬೆಳ್ಳಂಬೆಳಗ್ಗೆ 6 ಗಂಟೆ ಸುಮಾರಿಗೆ ಅವಿನಾಶ್ ಅನಿಲ್ ಕುಂಬ್ಳೆ ಸರ್ಕಲ್ ಬಳಿ ತೆರಳುತ್ತಿದ್ದರು. ಎಂ ರಸ್ತೆಗೆ ತೆರಳುತ್ತಿದ್ದರು. ಈ ವೇಳೆ ಅವರ ಬೆಂಜ್ ಕಾರಿಗೆ ಗೂಡ್ಡ್ ಲಾರಿ ಡಿಕ್ಕಿ ಹೊಡೆದಿತ್ತು. ಈ ಪರಿಣಾಮ ಅವರ ಕಾರು ಜಖಂಗೊಂಡಿತ್ತು.
ಗೂಡ್ಸ್ ಲಾರಿ ಚಾಲಕ ಶಿವಗೌಡನನ್ನು ಕಬ್ಬನ್ ಪೇಟೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಅಪಘಾತದಲ್ಲಿ ಸ್ಯಾಂಡಲ್ವುಡ್ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
'ಕೆಜಿಎಫ್' ಸಿನಿಮಾ ಬಳಿಕ ಹೆಚ್ಚಿದ ಬೇಡಿಕೆ
'ಕೆಜಿಎಫ್' ಸಿನಿಮಾದಲ್ಲಿ ಮಿಂಚಿದ ಖಳನಾಯಕ ಬಿಎಸ್ ಅವಿನಾಶ್ ಬೆಳಗ್ಗೆ ಆರು ಗಂಟೆಗೆ ಜಿಮ್ಮಿಗೆ ಹೊರಟಿದ್ದರು ಎನ್ನಲಾಗಿದೆ ಈ ವೇಳೆ ಗೂಡ್ಸ್ ಚಾಲಕ ಅಜಾರೂಕತೆಯಿಂದ ಗೂಡ್ಸ್ ಲಾರಿ ಬೆಂಜ್ ಕಾರಿಗೆ ಬಂದು ಗುದ್ದಿದೆ ಎನ್ನಲಾಗಿದೆ.

ಕೆಜಿಎಫ್ ಎರಡೂ ಸಿರೀಸ್ನಲ್ಲಿ ಆಂಡ್ರೂವ್ ಪಾತ್ರದಲ್ಲಿ ಬಿಎಸ್ ಅವಿನಾಶ್ ಕಾಣಿಸಿಕೊಂಡಿದ್ದರು. ಅವಿನಾಶ್ ಖಳನಾಯಕನ ಲುಕ್ಗೆ ಸಿನಿಪ್ರೇಮಿಗಳು ಮೆಚ್ಚುಗೆ ಸೂಚಿಸಿದ್ದರು. ಈ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಕನ್ನಡದಲ್ಲಿ ಮತ್ತೊಬ್ಬ ಸ್ಟಾರ್ ಖಳನಾಯಕ ಹುಟ್ಟಿಕೊಂಡು ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯಿಂದಲೂ ಆಫರ್ಗಳು ಬರುತ್ತಿವೆಯಂತೆ.