KGF 2 advance booking report: ಹಿಂದಿಯಲ್ಲಿ KGF 2 ಸಾಲು, ಸಾಲು ದಾಖಲೆ, RRR ರೆಕಾರ್ಡ್ ಪುಡಿ, ಪುಡಿ!
ಕೆಜಿಎಫ್ 2 ಚಿತ್ರ ಈ ವಾರ ಏಪ್ರಿಲ್ 14ಕ್ಕೆ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ. ಸಿನಿಮಾ ಪ್ರಿಯರು ವರ್ಷಗಳಿಂದ ಕಾಯುತ್ತಿದ್ದ ದಿನ ಹತ್ತಿರ ಬಂದು ಬಿಟ್ಟಿದೆ. ಇನ್ನೇನಿದ್ದರು ಚಿತ್ರ ರಿಲೀಸ್ ಬಳಿಕ ಯಾವ ಮಟ್ಟಿಗೆ ಧೂಳೆಬ್ಬಿಸುತ್ತದೆ ಎನ್ನುವುದನ್ನು ನೋಡುವುದಷ್ಟೇ ಬಾಕಿ. ಹೆಚ್ಚಿನ ನಿರೀಕ್ಷೆ ಜೊತೆಗೆ ಬರುತ್ತಾ ಇರುವು ಈ ಚಿತ್ರ ಮತ್ತೊಂದು ದಾಖಲೆ ಮಾಡುದರಲ್ಲಿ ಅನುಮಾನ ಇಲ್ಲ.
ರಿಲೀಸ್ ಬಳಿಕ ಮಾಡುವ ದಾಖಲೆ ಹಾಗಿರಲಿ. 'ಕೆಜಿಎಫ್ 2' ರಿಲೀಸ್‌ಗೂ ಮುನ್ನವೇ ಸಾಲು, ಸಾಲು ದಾಖಲೆ ಬರೆದು ಅಚ್ಚರಿ ಮೂಡಿಸುತ್ತಾ ಇದೆ. ದಿನಕ್ಕೊಂದು ದಾಖಲೆ ಬರೆದು ಕೆಜಿಎಫ್ ಮತ್ತಷ್ಟು ನಿರೀಕ್ಷೆ ಕುತೂಹಲಗಳನ್ನು ಹೆಚ್ಚು ಮಾಡುತ್ತಲೇ ಇದೆ. ಅಷ್ಟಕ್ಕೂ ಈಗ ಮತ್ತೊಂದು ದಾಖಲೆ ಮಾಡಿದೆ. ದಾಖಲೆ ಮಾಡಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಈ ಹಿಂದಿನ ದಾಖಲೆಯನ್ನು ಮುರಿದಿದೆ ಎನ್ನಬಹುದು.
ಹೌದು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗ ಭಾರತೀಯ ಚಿತ್ರಂಗದ ದೊಡ್ಡ ಸಿನಿಮಾ ಅಂದರೆ ಅದು ರಾಜಮೌಳಿ ನಿರ್ದೇಶನದ RRR. ಈ ಚಿತ್ರದ ದಾಖಲೆಯನ್ನು ಕನ್ನಡದ 'ಕೆಜಿಎಫ್ 2' ಮುರಿಯುತ್ತಿದೆ. ಈಗ ಕೆಜಿಎಫ್ 2 ಮಾಡಿರುವ ಆ ದಾಖಲೆ ಏನು? ಎನ್ನುವ ಬಗ್ಗೆ ಮುಂದೆ ಓದಿ...

ಹಿಂದಿಯಲ್ಲಿ RRR ಹಿಂದಿಕ್ಕಿದ KGF 2!
ಕೆಜಿಎಫ್ 2 ಚಿತ್ರದ ಕ್ರೇಜ್ ವಿಶ್ವದಾದ್ಯಂತ ಇದೆ. ಅದರಲ್ಲೂ ಹಿಂದಿಯಲ್ಲಿ ಅಂದರೆ ದಕ್ಷಿಣ ಭಾರತದಲ್ಲಿ ಕೊಂಚ ಹೆಚ್ಚಾಗಿಯೇ ಇದೆ ಎಂದು ಹೆಳಬಹುದು. 'ಕೆಜಿಎಫ್' ಭಾಗ ಒಂದು ಚಿತ್ರವನ್ನು ನೋಡಿದ ಮಂದಿ ಈ ಚಿತ್ರಕ್ಕಾಗಿ ಕಾಯುತ್ತಾ ಇದ್ದಾರೆ. ರಾಕಿ ಭಾಯ್ ಸಾಮ್ರಾಜ್ಯವನ್ನು ಭಾಗ ಎರಡರಲ್ಲಿ ನೋಡಲು ಹೆಚ್ಚು ಕಾತರರಾಗಿದ್ದರೆ. ಈ ಹಿಂದೆ ರಿಲೀಸ್ ಆದ RRR ಚಿತ್ರದ ಹಿಂದಿ ಅವತರಣಿಕೆಯ ಮುಂಗಡ ಟಿಕೆಟ್ ಬುಕ್ಕಿಂಗ್ ದಾಖಲೆ ಮಾಡಿತ್ತು. ಈಗ ಆ ದಾಖಲೆ ಮುದಿರಿದೆ 'ಕೆಜಿಎಫ್ 2'. ಈ ಚಿತ್ರದ ಹಿಂದಿ ಅವತರಣಿಕೆ ಮುಂಗಡ ಬುಕ್ಕಿಂಗ್ ದಾಖಲೆ ಮಟ್ಟದಲ್ಲಿ ಆಗಿದೆ.

ಮುಂಗಡ ಟಿಕೆಟ್ ಬುಕ್ಕಿಂಗ್‌ನಲ್ಲಿ ಕೆಜಿಎಫ್ ದಾಖಲೆ!
RRR ಚಿತ್ರದ ಹಿಂದಿ ಅವತರಣಿಕೆಗೆ ಹೆಚ್ಚಿನ ಬೇಡಿಕೆ ಇತ್ತು. ಹಿಂದಿಯಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮೂಲಕ ಚಿತ್ರ ದಾಖಲೆ ಮಾಡಿತ್ತು. ಈಗ RRR ಚಿತ್ರದ ದಾಖಲೆಯನ್ನು ಮೀರಿಸುತ್ತಿದೆ ಕೆಜಿಎಫ್ 2. ರಿಲೀಸ್‌ಗೂ ಮುನ್ನ RRR ಹಿಂದಿ ಅವತರಣಿಕೆಯ ಮುಂಗಡ ಟಿಕೆಟ್ ಬುಕ್ಕಿಂಗ್ ಲೆಕ್ಕಾ ಸುಮಾರು 5 ಕೋಟಿ ಎಂದು ಅಂದಾಜಿಸಲಾಗಿತ್ತು. ನಂತರ ರಿಲೀಸ್ ಆದ ಮೊದಲ ದಿನ ಚಿತ್ರದ ಕಲೆಕ್ಷನ್ 16 ರಿಂದ 20 ಕೋಟಿ ಕಲೆಕ್ಷನ್ ಆಗಿತ್ತು. ಆದರೆ ಕೆಜಿಎಫ್ 2 ಹಿಂದಿ ಅವತರಣಿಕೆಯ ಮುಂಗಡ ಬುಕ್ಕಿಂಗ್ ಅಂದಾಜು 10 ಕೋಟಿ ಆಗಿದೆ. ಇದು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಓಪನಿಂಗ್ ಡೇ ಇದು ದುಪ್ಪಟ್ಟು ಆಗಲಿದೆ.
Recommended Video


ಹಿಂದಿ ಹೊರತು ಪಡಿಸಿ ಟಿಕೆಟ್ ಬುಕ್ಕಿಂಗ್‌ನಲ್ಲಿ ಕೆಜಿಎಫ್ ಮುಂದು!
ಹಿಂದಿ ಅವತರಣಿಕೆ ಒಂದು ಕಡೆ ಆದರೆ, ಮತ್ತೊಂದು ಕಡೆ ಒಟ್ಟಾರೆ ಮುಂಗಡ ಟಿಕೆಟ್ ಬುಕ್ಕಿಂಗ್‌ನಲ್ಲೂ ಕೆಜಿಎಫ್ ಮುಂದಿದೆ. 'RRR' ಸಿನಿಮಾದ ಒಟ್ಟು ಅಡ್ವಾನ್ಸ್ ಬುಕಿಂಗ್ಸ್ ದಾಖಲೆಯನ್ನು 'ಕೆಜಿಎಫ್ 2 ಕೇವಲ ಎರಡೇ ದಿನದಲ್ಲಿ ನುಂಗಿ ಹಾಕಿದೆ. 'RRR' ಸಿನಿಮಾ ಬಿಡುಗಡೆ ಆಗುವ ಐದು ದಿನದ ಮುನ್ನಾ ಟಿಕೆಟ್ ಬುಕಿಂಗ್ ಪ್ರಾರಂಭವಾಗಿತ್ತು. ಮುಂಬೈನಲ್ಲಿ ಐದು ದಿನದಲ್ಲಿ ಆದ 'RRR' ಸಿನಿಮಾದ ಮುಂಗಡ ಟಿಕೆಟ್ ಅನ್ನು 'ಕೆಜಿಎಫ್ 2' ಕೇವಲ ಎರಡೇ ದಿನದಲ್ಲಿ ಮಾಡಿ ಮುಗಿಸಿದೆ. 'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ಇನ್ನೂ ಐದು ದಿನ ಬಾಕಿ ಇದ್ದು, ಇನ್ನಷ್ಟು ಟಿಕೆಟ್‌ಗಳು ಮಾರಾಟವಾಗುವ ಸಾಧ್ಯತೆ ದಟ್ಟವಾಗಿದೆ.

ಹಿಂದಿಯಲ್ಲಿ 'ವಾರ್' ಚಿತ್ರದ ದಾಖಲೆಯೇ ದೊಡ್ಡದು!
ಇನ್ನು ಹಿಂದಿಯಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿ, ಬಿಗ್ ಓಪನಿಂಗ್ ಪಡೆದುಕೊಂಡ ಹೆಗ್ಗಳಿಕೆ 'ವಾರ್' ಚಿತ್ರಕ್ಕಿದೆ. ಈ ಚಿತ್ರ ಮೊದಲ ದಿನ 53 ಕೋಟಿ ಹಣ ಗಳಿಸಿ ದಾಖಲೆ ಮಾಡಿದೆ. ಇದು ಬಿಟ್ಟರೆ ಹಿಂದಿಯ 'ಥಗ್ಸ್ ಆಫ್ ಹಿಂದುಸ್ತಾನ್' ಚಿತ್ರ 50 ಕೋಟಿ ಕಲೆ ಹಾಕಿದೆ. ಈ ಎರಡು ಚಿತ್ರಗಳ ದಾಖಲೆಯನ್ನು ಮುರಿದರೆ ಹಿಂದಿಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪಡೆದ ಏಕೈಕ ಚಿತ್ರ ಕೆಜಿಎಫ್ 2 ಆಗಲಿದೆ.


Click it and Unblock the Notifications











