ಕೆಜಿಎಫ್ 2 ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಸುರಿದಿರುವುದು ಕೆಲವು ಕೋಟಿಗಳಲ್ಲ!
ಕೆಜಿಎಫ್ ಸಿನಿಮಾ ಸರಣಿ ಕರ್ನಾಟಕದ ಅತ್ಯಂತ ದೊಡ್ಡ ಬಜೆಟ್‌ನ ಸಿನಿಮಾ. ಕೆಜಿಎಫ್ ಮೊದಲ ಚಾಪ್ಟರ್‌ಗಿಂತಲೂ ಹೆಚ್ಚು ಹಣವನ್ನು ಕೆಜಿಎಫ್ 2 ಸಿನಿಮಾಕ್ಕಾಗಿ ಖರ್ಚು ಮಾಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರ್.
ಕೆಜಿಎಫ್ 2 ಸಿನಿಮಾವು ಕೆಜಿಎಫ್ ಸರಣಿಯ ಕೊನೆಯ ಸಿನಿಮಾ ಆಗಿದ್ದು, ಭಾರಿ ಅದ್ಧೂರಿಯಾಗಿಯೇ ಸಿನಿಮಾವನ್ನು ಪ್ರೆಸೆಂಟ್ ಮಾಡಲು ನಿರ್ಣಯಿಸಿ ಭಾರಿ ಅದ್ಧೂರಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.
ಕೆಜಿಎಫ್ ಚಾಪ್ಟರ್ 1 ಗೆ ಹೋಲಿಸಿದರೆ ಕೆಜಿಎಫ್ 2 ನಲ್ಲಿ ದೊಡ್ಡ ಸ್ಟಾರ್ ನಟರ ದಂಡೇ ಇದೆ. ಸ್ಟಾರ್ ನಟರು ಮಾತ್ರವೇ ಅಲ್ಲದೆ, ಸಿನಿಮಾದ ಮೇಕಿಂಗ್, ಸೆಟ್‌ಗಳಿಗೂ ಸಹ ಭಾರಿ ಬಂಡವಾಳ ಹೂಡಲಾಗಿದೆ.'
ಕೆಜಿಎಫ್ 2 ಸಿನಿಮಾದ ಅತ್ಯಂತ ಪ್ರಮುಖ ಅಂಶ ಅಧೀರ v/s ರಾಕಿ ಭಾಯ್. ಈ ಇಬ್ಬರೂ ಸಿನಿಮಾದ ಕೊನೆಯಲ್ಲಿ ಮುಖಾ-ಮುಖಿ ಆಗುತ್ತಿದ್ದು, ಸಿನಿಮಾದ ಅತ್ಯಂತ ಪ್ರಮುಖ ಆಕ್ಷನ್ ಸನ್ನಿವೇಶ ಇದಾಗಿರಲಿದೆ.

ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ 12 ಕೋಟಿ ಖರ್ಚು
ಹಾಗಾಗಿಯೇ ಅತಿ ಹೆಚ್ಚು ಹಣವನ್ನು ಈ ಕೊನೆಯ ದೃಶ್ಯಕ್ಕಾಗಿ ಖರ್ಚು ಮಾಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು. ಮೂಲಗಳ ಪ್ರಕಾರ ರಾಕಿ ಭಾಯ್- ಅಧೀರನ ನಡುವಿನ ಒಂದು ಫೈಟ್ ದೃಶ್ಯಕ್ಕಾಗಿ ಸುಮಾರು 12 ಕೋಟಿ ಹಣ ಖರ್ಚು ಮಾಡಲಾಗಿದೆಯಂತೆ.

ಭಾರಿ ಬೃಹತ್ ಸೆಟ್‌ಗಳನ್ನು ಹಾಕಲಾಗಿತ್ತು
ಭಾರಿ ಬೃಹತ್ ಸೆಟ್‌ಗಳು, ಸಾಕಷ್ಟು ಮಂದಿ ಜ್ಯೂನಿಯರ್ ಆರ್ಟಿಸ್ಟ್‌ಗಳು ಡ್ಯೂಪ್‌ಗಳು, ವಾಹನಗಳು, ಪರ್ಫೆಕ್ಷನ್‌ಗಾಗಿ ಹಲವಾರು ಬಾರಿ ಚಿತ್ರೀಕರಣ ಮಾಡಿ ಈ ದೃಶ್ಯವನ್ನು ಚಿತ್ರೀಕರಣ ಮಾಡಲಾಗಿದೆ. ಸಂಜಯ್ ದತ್ ಹಾಗೂ ಯಶ್ ನಡುವಿನ ಫೈಟ್ ದೃಶ್ಯ ಸಿನಿಮಾದ ಹೈಲೇಟ್ ಆಗಿದೆ.

ಕೆಜಿಎಫ್ 1 ನಲ್ಲಿಯೂ ಅದ್ಧೂರಿ ಕ್ಲೈಮ್ಯಾಕ್ಸ್ ಇತ್ತು
ಕೆಜಿಎಫ್ ಮೊದಲ ಚಾಫ್ಟರ್‌ನಲ್ಲೂ ಸಹ ಕ್ಲೈಮ್ಯಾಕ್ಸ್ ದೃಶ್ಯವನ್ನು ಭಾರಿ ಅದ್ಧೂರಿಯಾಗಿ ಚಿತ್ರೀಕರಿಸಲಾಗಿತ್ತು. ಆದರೆ ಕೆಜಿಎಫ್2 ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯ ಅದಕ್ಕಿಂತಲೂ ಹತ್ತು ಪಟ್ಟು ಬೆಸ್ಟ್ ಆಗಿರುವ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.
Recommended Video

ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪ್ರಗತಿಯಲ್ಲಿದೆ
ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿವೆ. ಡಬ್ಬಿಂಗ್, ವಿಎಫ್‌ಎಕ್ಸ್, ಹಾಡುಗಳ ರೆಕಾರ್ಡ್, ಹಿನ್ನೆಲೆ ಸಂಗೀತ, ಸಂಕಲನ ಇನ್ನೂ ಹಲವು ಕಾರ್ಯಗಳು ನಡೆಯುತ್ತಿವೆ. ಕೆಲವೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











