Don't Miss!
- News
ಇಂಡಿಯಾ ಗೇಟ್ ಮುಂದಿನ ಹುತಾತ್ಮರ ಸ್ಮರಣಾ ಚಿಹ್ನೆ ಸ್ಥಳಾಂತರ
- Technology
ಮೂರು ಹೊಸ JioFi ರೀಚಾರ್ಜ್ ಪ್ಲ್ಯಾನ್ ಲಾಂಚ್: ಏನೆಲ್ಲಾ ಪ್ರಯೋಜನಗಳು ಲಭ್ಯ?
- Education
CUK Recruitment 2022 : 61 ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಮೇ.28: ಕಚ್ಚಾತೈಲ ದರ ಏರಿಕೆ: ನಿಮ್ಮ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಇಲ್ಲಿದೆ
- Sports
IPL 2022: ಕ್ವಾಲಿಫೈಯರ್ ಪಂದ್ಯದಲ್ಲಿ ಕೊಹ್ಲಿ ಆರ್ಸಿಬಿಗೆ ಕೈಕೊಟ್ಟು ಫ್ಲಾಪ್ ಆದದ್ದು ಇದು ಮೂರನೇ ಬಾರಿ!
- Lifestyle
ಮಂಕಿಪಾಕ್ಸ್ vs ಕೊರೊನಾವೈರಸ್: ಈ ಎರಡು ವೈರಸ್ನಲ್ಲಿ ಮೈ ಮೇಲೆ ಏಳುವ ಗುಳ್ಳೆಗಳು ಹೇಗೆ ಭಿನ್ನವಾಗಿವೆ?
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕೆಜಿಎಫ್ 2' 28ನೇ ದಿನ ಕಲೆಕ್ಷನ್: ರಾಕಿಬಾಯ್ಗೆ ಮಹೇಶ್ ಬಾಬು ಟಕ್ಕರ್!
ಯಾವುದೇ ಸಿನಿಮಾ ಬಿಡುಗಡೆಯಾದ ಒಂದು ವಾರ ಬಾಕ್ಸಾಫೀಸ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತೆ. ಆ ಬಳಿಕ ವೀಕೆಂಡ್ನಲ್ಲಿ ಮಾತ್ರ ಸಿನಿಮಾಗಳಿಗೆ ಕಲೆಕ್ಷನ್ ಇರುತ್ತೆ. ಆದರೆ 'ಕೆಜಿಎಫ್ 2' ವಿಷಯದಲ್ಲಿ ಹಾಗಾಗಿಲ್ಲ. ಕಳೆದ 25 ದಿನಗಳಿಂದ ಈ ಸಿನಿಮಾ ಬಾಕ್ಸಾಫೀಸ್ನಿಂದ ಜಗ್ಗಲೇ ಇಲ್ಲ. ಪ್ರತಿ ದಿನವೊ ಒಂದೊಂದು ಸರ್ಪ್ರೈಸ್ ನೀಡುತ್ತಲೇ ಮುನ್ನುಗುತ್ತಿದೆ.

ಬಾಲಿವುಡ್, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್ ಅಷ್ಟೆ ಯಾಕೆ ಮಾಲಿವುಡ್ನಲ್ಲೂ 'ಕೆಜಿಎಫ್ 2' ದಾಖಲೆ ಬರೆಯುತ್ತಿದ್ದೆ. ತಮಿಳುನಾಡಿನಲ್ಲಿ 'ಕೆಜಿಎಫ್ 2' ಸಿನಿಮಾ ಇನ್ನೂ 350 ಸ್ಕ್ರೀನ್ನಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಬ್ಯಾಕ್ ಟು ಬ್ಯಾಕ್ ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿರುವುದರಿಂದ 'ಕೆಜಿಎಫ್ 2' ಪೈಪೋಟಿ ನೀಡುತ್ತಿವೆ. ಇದರ ಹೊರತಾಗಿಯೂ 'ಕೆಜಿಎಫ್ 2' ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
25ನೇ
ದಿನದ
ಬಳಿಕ
ಮತ್ತೆ
ಚಿಗುರಿದ
'ಕೆಜಿಎಫ್
2'
ಕಲೆಕ್ಷನ್
:
26ನೇ
ದಿನವೂ
ಭರ್ಜರಿ
ಗಳಿಕೆ!
ಇಂದು (ಮೇ 12) 'ಸರ್ಕಾರು ವಾರಿ ಪಾಟ' ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಈ ಬೆನ್ನಲ್ಲೇ 'ಕೆಜಿಎಫ್ 2' ಸಿನಿಮಾ ಕಲೆಕ್ಷನ್ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ. ಆಂಧ್ರ-ತೆಲಂಗಾಣದಲ್ಲಿ 29ನೇ ದಿನ 'ಕೆಜಿಎಫ್ 2' ಎಷ್ಟು ಕಲೆಕ್ಷನ್ ಮಾಡುತ್ತೆ ಎಂದು ಲೆಕ್ಕಾಚಾರ ಶುರುವಾಗಿದೆ. ಸದ್ಯ 28ನೇ ದಿನದ 'ಕೆಜಿಎಫ್ 2' ಗಳಿಕೆ ಕೂಡ ಜೋರಾಗೇ ಇದೆ.

28ನೇ ದಿನ 'ಕೆಜಿಎಫ್ 2' ಗಳಿಕೆ ಎಷ್ಟು?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಥಿಯೇಟರ್ನಲ್ಲಿ ಈ ಮಟ್ಟಿಗೆ ಸದ್ದು ಮಾಡುತ್ತೆ ಎಂದು ಯಾರೂ ಊಹಿಸಿರಲಿಲ್ಲ. ವೀಕೆಂಡ್ ಅಷ್ಟೇ ಅಲ್ಲ. ವರ್ಕಿಂಗ್ ದಿನಗಳಲ್ಲೂ 'ಕೆಜಿಎಫ್ 2' ಸಿನಿಮಾದ ಕಲೆಕ್ಷನ್ ಜೋರಾಗಿಯೇ ಇದೆ. 28ನೇ ದಿನ ಸಿನಿಮಾ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಟ್ರೇಡ್ ಅನಲಿಸ್ಟ್ ಮನೊಬಾಲ ವಿಜಯಬಾಲನ್ ಪ್ರಕಾರ, 28ನೇ ದಿನ 'ಕೆಜಿಎಫ್ 2' ಸಿನಿಮಾ 6.84 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಿದ್ದಾರೆ.
ಯಶ್
ಬಾಕ್ಸಾಫೀಸ್
ಸುಲ್ತಾನ್
ಎಂದ
ಹೊಂಬಾಳೆ:
ತಿರುಗಿಬಿದ್ದ
ದರ್ಶನ್
ಫ್ಯಾನ್ಸ್

28 ದಿನಗಳಲ್ಲಿ 'ಕೆಜಿಎಫ್ 2' ಗಳಿಸಿದ್ದೆಷ್ಟು?
ಟ್ರೇಡ್ ಅನಲಿಸ್ಟ್ ಮನೊಬಾಲ ವಿಜಯಬಾಲನ್, 'ಕೆಜಿಎಫ್ 2' ಚಿತ್ರದ ವಿಶ್ವದಾದ್ಯಂತ 28 ದಿನಗಳ ಒಟ್ಟು ಕಲೆಕ್ಷನ್ 1169.71 ಎಂದು ಹೇಳಿದ್ದಾರೆ. ಆರಂಭದ ದಿನದಿಂದಲೂ 'ಕೆಜಿಎಫ್ 2' ಆಯಾ ಸನ್ನಿವೇಶಕ್ಕೆ ತಕ್ಕಂತೆ ಕಲೆಕ್ಷನ್ ಮಾಡುತ್ತಲೇ ಇದೆ. ಈ 28 ದಿನಗಳ ಕಲೆಕ್ಷನ್ ವಿವರ ಹೀಗಿದೆ.
ವಿಶ್ವದಾದ್ಯಂತ 'ಕೆಜಿಎಫ್ 2' ಬಾಕ್ಸಾಫೀಸ್ ಕಲೆಕ್ಷನ್
ಮೊದಲ
ವಾರ
₹
720.31
ಕೋಟಿ
ಎರಡನೇ
ವಾರ
₹
223.51
ಕೋಟಿ
ಮೂರನೇ
ವಾರ
₹
140.55
ಕೋಟಿ
4ನೇ ವಾರ
ಮೊದಲ
ದಿನ
₹
11.46
ಕೋಟಿ
ಎರಡನೇ
ದಿನ
₹
8.90
ಕೋಟಿ
ಮೂರನೇ
ದಿನ
₹
24.65
ಕೋಟಿ
ನಾಲ್ಕನೇ
ದಿನ
₹
25.42
ಕೋಟಿ
ಐದನೇ
ದಿನ
₹
08.07
ಕೋಟಿ
ಆರನೇ
ದಿನ
₹
06.84
ಕೋಟಿ
ಒಟ್ಟು ₹ 1169.71

'ಸರ್ಕಾರು ವಾರಿ ಪಾಟ' ಟಕ್ಕರ್ ಕೊಡುತ್ತಾ?
ಯಾರೇ ಬಂದರೂ 'ಕೆಜಿಎಫ್ 2' ಬಾಕ್ಸಾಫೀಸ್ನಲ್ಲಿ ಅಲ್ಲಾಡಿಲ್ಲ. ಆದರೆ, ಈ ವಾರ ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಸಿನಿಮಾ ಬಿಡುಗಡೆಯಾಗಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಈ ಸಿನಿಮಾ 'ಕೆಜಿಎಫ್ 2'ಗೆ ಟಕ್ಕರ್ ಕೊಡುವ ಸಾಧ್ಯತೆಯಿದೆ. ಒಂದು ವೇಳೆ ಮಹೇಶ್ ಬಾಬು ಸಿನಿಮಾ ಥಿಯೇಟರ್ನಲ್ಲಿ ಕಚ್ಚಿಕೊಂಡರೆ, 'ಕೆಜಿಎಫ್ 2' ಕಲೆಕ್ಷನ್ ಮೇಲೆ ಏಟು ಬೀಳಬಹುದು.
ಶಿವಮೊಗ್ಗದ
ಸಹ್ಯಾದ್ರಿ
ಕಾಲೇಜಿನಲ್ಲಿ
ಅತಿಥಿಯಾಗಿ
ಹೋಗಿದ್ದ
ಯಶ್:
ಆ
ದಿನ
ನೆನೆದ
ಹಳೇ
ವಿದ್ಯಾರ್ಥಿ!

'ಡಾಕ್ಟರ್ ಸ್ಟ್ರೇಂಜರ್' 100 ಕೋಟಿ ಕಲೆಕ್ಷನ್
'ಕೆಜಿಎಫ್ 2' ಜೊತೆ ಸೆಣೆಸಾಡುತ್ತಿರುವ ಹಾಲಿವುಡ್ ಸಿನಿಮಾ 'ಡಾಕ್ಟರ್ ಸ್ಟ್ರೇಂಜರ್' ಕೂಡ ಕಲೆಕ್ಷನ್ ವಿಚಾರದಲ್ಲಿ ಕೊಂಚ ಮಟ್ಟಿಗೆ ಏರಿಕೆಯಾಗಿದೆ. ಸದ್ಯ 6 ದಿನಗಳಲ್ಲಿ ಈ ಸಿನಿಮಾ ಭಾರತದ ಬಾಕ್ಸಾಫೀಸ್ನಲ್ಲಿ 100 ಕೋಟಿ ಲೂಟಿ ಮಾಡಿದೆ. ಹೀಗಾಗಿ ಎರಡು ಸಿನಿಮಾಗಳಿಂದ 'ಕೆಜಿಎಫ್ 2' ಕುಗ್ಗುತ್ತಾ? ಇಲ್ಲಾ ವೀಕೆಂಡ್ನಲ್ಲಿ ಸಿನಿಮಾದ ಕಲೆಕ್ಷನ್ನಲ್ಲಿ ಮತ್ತೆ ಏರಿಕೆಯಾಗುತ್ತಾ ಅನ್ನುವ ಕುತೂಹಲವಿದೆ.