KGF 2 Day 3 Box Office Collection : 'ಕೆಜಿಎಫ್ 2' 3ನೇ ದಿನದ ಕಲೆಕ್ಷನ್ ಎಷ್ಟು? ಇಳಿಕೆಯೋ ಏರಿಕೆಯೊ?

'ಕೆಜಿಎಫ್ 2' ಸಿನಿಮಾ ಬಿಡುಗಡೆ ಆಗಿ ಮೂರು ದಿನಗಳು ಪೂರ್ಣವಾಗಿವೆ. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ಸತತ ರಜೆಗಳಿರುವುದು ಸಿನಿಮಾಕ್ಕೆ ವರವಾಗಿ ಪರಿಣಮಿಸಿದೆ.

ಎಲ್ಲಾ ದಾಖಲೆಗಳನ್ನು ಪುಡಿ ಮಾಡುತ್ತಾ ಬಾಕ್ಸ್ ಆಫೀಸ್ ಸುಲ್ತಾನನಾಗಿ 'ಕೆಜಿಎಫ್ 2' ಸಿನಿಮಾ ಮೆರೆಯುತ್ತಿದೆ. ಸಿನಿಮಾ ಮೊದಲೆರಡು ದಿನ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದ್ದು, ಮೂರನೇಯ ದಿನ ಸಹ ಅದೇ ಕಮಾಲ್ ಅನ್ನು ಮುಂದುವರೆಸಿದೆ.

ಅದರಲ್ಲಿಯೂ ಹಿಂದಿ ಭಾಷಿಕ ಏರಿಯಾಗಳಲ್ಲಿ ಅಂತೂ ಮ್ಯಾಜಿಕ್ ಅನ್ನೇ ಮಾಡಿದೆ 'ಕೆಜಿಎಫ್ 2'. ದಕ್ಷಿಣ ಭಾರತದ ಕಲೆಕ್ಷನ್‌ನ ದುಪ್ಪಟ್ಟು ಹಣವನ್ನು ಬಾಲಿವುಡ್‌ ಪ್ರದೇಶಗಳಲ್ಲಿ ಈ ಸಿನಿಮಾ ಗಳಿಸುತ್ತಿದೆ.

KGF Chapter 2 day 3 worldwide box office collection report

'ಕೆಜಿಎಫ್ 2' ನಿರ್ಮಾಪಕ ವಿಜಯ್ ಕಿರಗಂದೂರು ಹಂಚಿಕೊಂಡಿದ್ದ ಮಾಹಿತಿಯಂತೆ 'ಕೆಜಿಎಫ್ 2' ಸಿನಿಮಾ ಭಾರತದಲ್ಲಿ ಮೊದಲ ದಿನ 134 ಕೋಟಿ ರುಪಾಯಿ ಗಳಿಸಿದರೆ, ಎರಡನೇ ದಿನಕ್ಕೆ ದೇಶದಾದ್ಯಂತ ಒಟ್ಟು 240 ಕೋಟಿ ರುಪಾಯಿ ಗಳಿಸಿತ್ತು. ಅಲ್ಲಿಗೆ ಎರಡನೇ ದಿನ ಮಾತ್ರವೇ 106 ಕೋಟಿ ರುಪಾಯಿ ಗಳಿಸಿತ್ತು.

ಮೂರನೇ ದಿನ ಶನಿವಾರ ಸಹ ಸಿನಿಮಾವು ಭಾರಿ ಕಲೆಕ್ಷನ್ ಅನ್ನೇ ಮುಂದುವರೆಸಿದ್ದು. ಹಿಂದಿ ಪ್ರದೇಶದಲ್ಲಿ ಮೂರನೇ ದಿನ ಅಂದರೆ ಶನಿವಾರ 'ಕೆಜಿಎಫ್ 2' ಸಿನಿಮಾ ಬರೋಬ್ಬರಿ 42.90 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. ಭಾನುವಾರ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

ಕೆಜಿಎಫ್ 2 ಸಿನಿಮಾವು ಮೊದಲ ದಿನ ಬಾಲಿವುಡ್‌ನಲ್ಲಿ 53 ಕೋಟಿ ರುಪಾಯಿ ಗಳಿಸಿ ದಾಖಲೆ ಬರೆದಿತ್ತು, ಇದೀಗ ಭಾನುವಾರ ಅಂದರೆ ಏಪ್ರಿಲ್ 17 ರಂದು ಸಹ ಬಹುತೇಕ ಅದೇ ಮೊತ್ತದ ಕಲೆಕ್ಷನ್ ಅನ್ನು ಬಾಲಿವುಡ್ ಪ್ರದೇಶದಲ್ಲಿ 'ಕೆಜಿಎಫ್ 2' ಮಾಡಲಿದೆ ಎಂದು ಸಿನಿಮಾ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನು ಹಿಂದಿ ಭಾಷಿಕ ಪ್ರದೇಶದಲ್ಲಿ ಸಿನಿಮಾದ ಕಲೆಕ್ಷನ್ 150 ಕೋಟಿ ಸಮೀಪಿಸಿದ್ದು, ಭಾನುವಾರ ಇನ್ನೂರು ಕೋಟಿ ಕಲೆಕ್ಷನ್ ಅನ್ನು ದಾಟಲಿದೆ. ಸಿನಿಮಾವು ದಕ್ಷಿಣ ಭಾರತದಲ್ಲಿಯೂ ಬಹಳ ಒಳ್ಳೆಯ ಕಲೆಕ್ಷನ್ ಮಾಡಿದ್ದು, ದಕ್ಷಿಣ ಭಾರತದಲ್ಲಿ ಸಹ 150 ಕೋಟಿ ಕಲೆಕ್ಷನ್‌ನ ಹತ್ತಿರದಲ್ಲಿದೆ ಸಿನಿಮಾ.

ಇನ್ನು ಅಮೆರಿಕದಲ್ಲಿಯೂ 'ಕೆಜಿಎಫ್ 2' ಸಿನಿಮಾ ಬಹಳ ಒಳ್ಳೆಯ ಕಲೆಕ್ಷನ್ ಮಾಡುತ್ತಿದ್ದು, ಬಿಡುಗಡೆ ಆದ ಕೇವಲ ಮೂರು ದಿನಗಳಲ್ಲಿ ಮೂರು ಮಿಲಿಯನ್ ಡಾಲರ್ ಅನ್ನು ಸಿನಿಮಾ ಗಳಿಸಿದೆ. ಭಾರತೀಯ ರುಪಾಯಿ ಮೌಲ್ಯದಲ್ಲಿ ಈ ಸಿನಿಮಾವು ಕೇವಲ ಮೂರು ದಿನಕ್ಕೆ ಅಮೆರಿಕದಲ್ಲಿ 22.80 ಕೋಟಿ ರುಪಾಯಿ ಹಣ ಗಳಿಸಿದೆ. ಅಮೆರಿಕದಲ್ಲಿ ಇಷ್ಟು ದೊಡ್ಡ ಮೊತ್ತ ಗಳಿಸಿದ ಏಕೈಕ ಕನ್ನಡ ಸಿನಿಮಾ 'ಕೆಜಿಎಫ್ 2' ಎನಿಸಿಕೊಂಡಿದೆ.

More from Filmibeat

English summary
KGF 2 movie collects good money of day three of its release. Movie collects more than 42 crore rs in Bollywood region.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X