ಕೆಜಿಎಫ್ 2: ಒಟಿಟಗೆ ಬಂದ್ರೂ ಕಲೆಕ್ಷನ್ ಮಾತ್ರ ಕೋಟಿ ಲೆಕ್ಕದಲ್ಲಿ!
ಸಿನಿಮಾ ರಿಲೀಸ್ ಆಗಿ 100 ದಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ದಾಖಲೆ ಮಾಡುವ ಕಾಲ ಹೋಗಿದೆ. ಈಗೇನಿದ್ದರು 3 ದಿನದಲ್ಲಿ ಸಿನಿಮಾಗಳು ಭವಿಷ್ಯ ನಿರ್ಧಾರ ಆಗುವ ಕಾಲ. ಅದರೆ ಇದು ಎಲ್ಲಾ ಸಿನಿಮಾಗಳಿಗೆ ಅನ್ವಯ ಆಗುದಿಲ್ಲ ಎನ್ನುವುದನ್ನು ಕನ್ನಡದ ಕೆಜಿಎಫ್ 2 ಸಿನಿಮಾ ತೋರಿಸಿ ಕೊಟ್ಟಿದೆ.
'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳಿಯಿತು. 30 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಆದರೆ ವಿಶ್ವದಾದ್ಯಂತ 'ಕೆಜಿಎಫ್ 2' ಅಬ್ಬರ ಕಡಿಮೆ ಆಗಿಲ್ಲ. ಬಾಕ್ಸಾಫೀಸ್‌ನಲ್ಲಿ ಗಳಿಕೆಯ ಲೆಕ್ಕ ಇನ್ನೂ ಕೋಟಿಯಲ್ಲೇ ಇದೆ ಸಿನಿಮಾ ಆರನೇ ವಾರಕ್ಕೆ ಕಾಲಿಟ್ಟಿದೆ, ಒಟಿಟಿಯಲ್ಲಿ ರಿಲೀಸ್ ಆಗಿದೆ. ಆದರು ಸಿನಿಮಾ ಗಳಿಕೆ ದೃಢವಾಗಿದೆ.
'ಕೆಜಿಎಫ್ 2' ಬಾಕ್ಸಾಫೀಸ್ ವಿಚಾರದಲ್ಲಿ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿವೆ. ದಿನದಿಂದ ದಿನಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ಹೆಚ್ಚುತ್ತಲೇ ಇದೆ. ಈಗಿನ ಕಾಲಘಟ್ಟದಲ್ಲಿ ಸಿನಿಮಾ ಒಂದು ರಿಲೀಸ್ ಆಗಿ 6 ವಾರಗಳು ಆದರು ಕಲೆಕ್ಷನ್ ಮಾತ್ರ ಕೋಟಿ ಲೆಕ್ಕದಲ್ಲಿ ಇದೆ ಎಂದರೆ ಅದು ಕನ್ನಡ ಸಿನಿಮಾಕ್ಕೆ ಇರುವ ಗತ್ತು ತೋರಿಸುತ್ತದೆ.

34ನೇ ದಿನಕ್ಕೆ 'ಕೆಜಿಎಫ್ 2' ಗಳಿಕೆ?
ಕೆಜಿಎಫ್ 2 ಸಿನಿಮಾ ನೋಡ ನೋಡುತ್ತಿದ್ದಂತೆಯೇ ಬಾಕ್ಸಾಫೀಸ್ ಧೂಳಿಪಟ ಮಾಡಿದೆ. ಸಾವಿರ ಕೋಟಿಗೂ ಮೀರಿದ ಕಲೆಕ್ಷನ್ ಮುಂದುವರೆಸಿದೆ. ಸಿನಿಮಾ ರಿಲೀಸ್ ಆಗಿ 6ನೇ ವಾರಕ್ಕೆ ಕಾಲಿಟ್ಟಿದೆ. ಅದೆ ಈಗಲೂ ಸಿನಿಮಾದ ಕಲೆಕ್ಷನ್ ಮಾತ್ರ ಕೋಟಿ ಲೆಕ್ಕದಲ್ಲೇ ಇದೆ. ಈ ರೀತಿಯ ಹೆಚ್ಚು ಗಳಿಕೆಯ ಮೂಲಕ ಲಾಂಗ್ ರನ್ ಆಗುವ ಮೂಲಕ 'ಕೆಜಿಎಫ್ 2 'ದಾಖಲೆ ಮಾಡಿದೆ. 34ನೇ ದಿನಕ್ಕೆ 'ಕೆಜಿಎಫ್ 2' ಸಿನಿಮಾದ ಗಳಿಕೆ 1204.37 ಕೋಟಿ ರೂ. ಗಳಿಕೆ ಮಾಡಿದೆ.

ಒಟಿಟಿಯಲ್ಲಿ 'ಕೆಜಿಎಫ್ 2': ಗಳಿಕೆಗೆ ದಕ್ಕೆಯಾಗಿಲ್ಲ!
ಕೆಜಿಎಫ್ 2 ಸಿನಿಮಾ ಯಾವ ಮಟ್ಟಿಗೆ ಪ್ರೇಕ್ಷಕರನ್ನು ಸೆಳೆದಿದೆ ಎಂದರೆ, ಬೆರೆ ಯಾವ ದೊಡ್ಡ ಸಿನಿಮಾಗಳು ರಿಲೀಸ್ ಆದರೂ ಈ ಚಿತ್ರದ ಗಳಿಕೆಗೆ ದಕ್ಕೆ ಆಗಿಲ್ಲ. ಬಾಲಿವುಡ್‌ನಲ್ಲಂತೂ ಸ್ಟಾರ್ ಸಿನಿಮಾಗಳೇ ಕೆಜಿಎಫ್ 2 ಮುಂದೆ ಮಂಡಿಯೂರಿವೆ. ಅಷ್ಟೇ ಯಾಕೆ ಸ್ವತಃ ಕೆಜಿಎಫ್ 2 ಒಟಿಟಿಯಲ್ಲಿ ಲಭ್ಯವಿದೆ. ಅಮೇಜಾನ್ ಮೂವಿ ರೆಂಟಲ್ಸ್‌ನಲ್ಲಿ ಸಿನಿಮಾ ಲಭ್ಯವಿದೆ. ಆದರೂ ಕೂಡ ಜನ ಚಿತ್ರಮಂದಿರಕ್ಕೆ ಹೋಗಿ ದೊಡ್ಡ ಪರದೆ ಮೇಲೆ ಸಿನಿಮಾ ನೋಡುತ್ತಾ ಇದ್ದಾರೆ.

1204.37 ಕೋಟಿಯೊಂದಿಗೆ 6ನೇ ವಾರಕ್ಕೆ ಹೆಜ್ಜೆ!
ಮೊದಲ ವಾರ- ₹ 720.31 ಕೋಟಿ
ಎರಡನೇ ವಾರ- ₹ 223.51 ಕೋಟಿ
ಮೂರನೇ ವಾರ- ₹ 140.55 ಕೋಟಿ
ನಾಲ್ಕನೇ ವಾರ- ₹ 91.26 ಕೋಟಿ
ಐದನೇ ವಾರ-
ಮೊದಲ ದಿನ ₹ 05.20 ಕೋಟಿ
ಎರಡನೇ ದಿನ ₹ 04.34 ಕೋಟಿ
ಮೂರನೇ ದಿನ ₹ 06.07 ಕೋಟಿ
ನಾಲ್ಕನೇ ದಿನ ₹ 09.52 ಕೋಟಿ
ಐದನೇ ದಿನ ₹ 3.61 ಕೋಟಿ
ಒಟ್ಟು ₹ 1204.37 ಕೋಟಿ

RRR ಕೆಜಿಎಫ್ 2 ನಡುವೆ 150 ಕೋಟಿ ಅಂತರ!
ಕೆಜಿಎಫ್ 2 ಹಿಂದಿ ಬಾಕ್ಸಾಫೀಸ್‌ನಲ್ಲೂ ಗಳಿಕೆಯ ಮೊತ್ತವನ್ನು ಹೆಚ್ಚು ಮಾಡುತ್ತಲೆ ಇದೆ. ಹಿಂದಿಯಲ್ಲಿ RRR ಮತ್ತು ಕೆಜಿಎಫ್ 2 ನಡುವೆ ಭಾರಿ ಅಂತರ ಸೃಷ್ಟಿ ಆಗಿದೆ. RRR ಈಗ 275 ಕೋಟಿ ಗಡಿ ಮುಟ್ಟಿದೆ. ಆದರೆ ಕೆಜಿಎಫ್ 2 ಸಿನಿಮಾ ಹಿಂದಿ ಅವತರಣಿಕೆಯಲ್ಲಿ 445 ಕೋಟಿಯ ಹತ್ತಿರ ಬಂದಿದೆ. ಇನ್ನು ಕೂಡ ಈ ಚಿತ್ರದ ಗಳಿಕೆ ಮುಂದುರೆದಿದೆ.


Click it and Unblock the Notifications











