Don't Miss!
- News
ಮಹಾರಾಷ್ಟ್ರದಲ್ಲಿ ಭಾರೀ ಮಳೆ: 17 ಎನ್ಡಿಆರ್ಎಫ್ ತಂಡ ನಿಯೋಜನೆ
- Lifestyle
ಈ ಆಹಾರಗಳನ್ನು ಒಟ್ಟಿಗೆ ಸೇವಿಸಬೇಡಿ, ಡೆಡ್ಲಿ ಕಾಂಬಿನೇಷನ್ ಆಹಾರಗಳಿವು!
- Automobiles
ಇವಿ ಕಾರು ಮಾರಾಟ: ಜೂನ್ ಅವಧಿಯ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ
- Sports
ಲಂಡನ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ; ಎಂಎಸ್ಡಿ ಭಾರತದ ಐಕಾನ್ ಎಂದ ವಿಂಬಲ್ಡನ್
- Education
NIMHANS Recruitment 2022 : ರಿಸರ್ಚ್ ಅಸೋಸಿಯೇಟ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಇಂದು ಒನ್ಪ್ಲಸ್ ಟಿವಿ 50 Y1S ಪ್ರೊ ಫಸ್ಟ್ ಸೇಲ್; ಇದೆ ಭರ್ಜರಿ ಆಫರ್!
- Finance
ಜುಲೈ 07: ನಿಮ್ಮ ನಗರಗಳ ಪೆಟ್ರೋಲ್-ಡೀಸೆಲ್ ದರ ಇಲ್ಲಿದೆ
- Travel
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
'ಕೆಜಿಎಫ್ 2': ಭಾರತೀಯ ಬಾಕ್ಸಾಫೀಸ್ನಲ್ಲಿ 1000 ಕೋಟಿ ಗಳಿಸಿದ 2ನೇ ಸಿನಿಮಾ!
'ಕೆಜಿಎಫ್ 2' ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳೆದಿದೆ. ಆದರೂ ಇನ್ನು ದೇಶದಾದ್ಯಂತ ಹಲವು ಕಡೆಗಳಲ್ಲಿ 'ಕೆಜಿಎಫ್ 2' ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಾಗೆ ಕಲೆಕ್ಷನ್ ಕೋಟಿ-ಕೋಟಿ ಲೆಕ್ಕದಲ್ಲೇ ಇದೆ. ಈಗ ಮತ್ತೊಂದು ಮಹತ್ತರವಾದ ದಾಖಲೆ ಬರೆದಿದೆ.
'ಕೆಜಿಎಫ್ 2' ಬಾಲಿವುಡ್ ಸಿನಿಮಾಗಳನ್ನು ಸೇರಿದಂತೆ ದೊಡ್ಡ ಕಲೆಕ್ಷನ್ ಮಾಡಿ ಇತಿಹಾಸ ಬರೆದ ಸಿನಿಮಾಗಳನ್ನು ಬೀಟ್ ಮಾಡಿದೆ. 'ಕೆಜಿಎಫ್ 2' ರಿಲೀಸ್ ಆಗಿದ್ದೇ ಆಗಿದ್ದು, 100 ಕೋಟಿಯ ಗಟಿಯನ್ನು ದಾಟಿ ಊಹೆಗೂ ಮೀರಿ 1000 ಕೋಟಿ ರೂ. ಗಡಿಯನ್ನು ದಾಟಿದೆ. 'ಕೆಜಿಎಫ್ 2'.
ಸೌತ್
ಸಿನಿಮಾ
ಅಬ್ಬರಕ್ಕೆ
ಬಾಲಿವುಡ್
ಸ್ಟಾರ್ಸ್
ತತ್ತರ:
ಬಾಕ್ಸಾಫೀಸ್ನಲ್ಲಿ
ಸಾಲು
ಸಾಲು
ಸೋಲು!
'ಕೆಜಿಎಫ್ 2' ಸಾವಿರ ಕೋಟಿ ಕ್ಲಬ್ ಸೇರುತ್ತಿದ್ದ ಹಾಗೆಯೇ, ದಾಖಲೆಗಳ ಲಿಸ್ಟ್ ಮತ್ತಷ್ಟು ಬೆಳೆಯುತ್ತಾ ಬಂದಿದೆ. ಇನ್ನು 'ಕೆಜಿಎಫ್ 2' ಬಾಕ್ಸಾಫೀಸ್ ಗಳಿಕೆ ಮುಂದುವರೆದಿದೆ. ಈಗ ಹೊಸ ಮೈಲಿಗಲ್ಲನ್ನು ಸಾಧಿಸಿದೆ 'ಕೆಜಿಎಫ್ 2'. ಭಾರತೀಯ ಬಾಕ್ಸಾಫೀಸ್ನಲ್ಲಿ ಸಾವಿರ ಕೋಟಿ ಗಳಿಸಿದ ಸಿನಿಮಾ ಆಗಿದೆ.
ಚೆನ್ನೈ
ಬಾಕ್ಸಾಫಿಸ್
ಧೂಳಿಪಟ
ಮಾಡಿದ
'ಕೆಜಿಎಫ್
2',
ರಜನಿ,
ವಿಜಯ್,
ಅಜಿತ್
ಹಿಂದಿಕ್ಕಿದ
ಯಶ್!

1000 ಕೋಟಿ ಗಳಿಕೆಯಿಂದ 'ಕೆಜಿಎಫ್ 2' ಹೊಸ ದಾಖಲೆ!
ದಿನ ಬೆಳಗಾದರೆ 'ಕೆಜಿಎಫ್ 2' ಸಿನಿಮಾದ ಈ ದಿನದ ದಾಖಲೆ ಏನು?, 'ಕೆಜಿಎಫ್ 2' ಮಾಡಿದ ಹೊಸ ರೆಕಾರ್ಡ್ ಏನು? ಎನ್ನುವ ಬಗ್ಗೆಯೇ ಸಿನಿಮಾರಂಗದ ಗಮನ ಇದೆ. ಅಷ್ಟರ ಮಟ್ಟಿಗೆ 'ಕೆಜಿಎಫ್ 2' ಸಿನಿಮಾದ ಪ್ರಭಾವ ಮೂಡಿದೆ. ಈಗ ಬಾಕ್ಸಾಫೀಸ್ ಗಳಿಕೆಯ ಮೂಲಕ ಮತ್ತೊಂದು ದಾಖಲೆ ಮಾಡಿದೆ. 'ಕೆಜಿಎಫ್ 2' ಚಿತ್ರದ ಒಟ್ಟಾರೆ ಕಲೆಕ್ಷನ್ 1180 ಕೋಟಿಗೂ ಅಧಿಕ. ಆದರೆ ಭಾರತೀಯ ಬಾಕ್ಸಾಫೀಸ್ನಲ್ಲಿ 1000 ಕೋಟಿ ರೂ. ಗಳಿಕೆ ಮಾಡಿದ ಎರಡನೇ ಭಾರತೀಯ ಸಿನಿಮಾ ಆಗಿ 'ಕೆಜಿಎಫ್ 2' ಹೊರ ಹೊಮ್ಮಿದೆ.

ಕನ್ನಡಕ್ಕೆ 'ಕೆಜಿಎಫ್ 2' ಹೆಮ್ಮೆಯ ಸಿನಿಮಾ!
ಕನ್ನಡದ ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲೇ ಸಾವಿರ ಕೋಟಿ ಗಳಿಸಿ ಎರಡನೇ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಚಾರ. ಈಗಾಗಲೇ 'ಕೆಜಿಎಫ್ ಚಾಪ್ಟರ್ ಒಂದಲ್ಲೇ ಕನ್ನಡದ ನಂಬರ್ 1 ಸಿನಿಮಾ ಎನಿಸಿಕೊಂಡ ಈ ಚಿತ್ರ, ಚಾಪ್ಟರ್ 2 ಮೂಲಕ ಮತ್ತಷ್ಟು ಹೆಗ್ಗಳಿಕೆ ಕಂಡಿದೆ. ಕನ್ನಡದ 'ಕೆಜಿಎಫ್ 2', ಭಾರತೀಯ ಸಿನಿಮಾ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇರುವುದರ ಜೊತೆಗೆ ಸಾವಿರ ಕೋಟಿ ಗಳಿಸಿದ ಕನ್ನಡದ ಮೊದಲ ಸಿನಿಮಾ ಎನ್ನುವ ದಾಖಲೆ ಬರೆದಿದೆ.

'ಬಾಹುಬಲಿ 2' 1000 ಕೋಟಿ ಗಳಿಸಿದ ಮೊದಲ ಸಿನಿಮಾ!
ಈ ಪೈಕಿ ಸಾವಿರ ಕೋಟಿ ಗಳಿಕೆ ಮಾಡಿದ ಮೊದಲ ಸಿನಿಮಾ ತೆಲುಗಿನ 'ಬಾಹುಬಲಿ 2'. ಭಾರತೀಯ ಬಾಕ್ಸಾಫೀಸ್ನಲ್ಲೂ 1000 ಕೋಟಿ ಗಳಿಸಿ ಅಗ್ರಸ್ಥಾನದಲ್ಲಿ ಇದೆ.ಈಗ ಎರಡನೇ ಸ್ಥಾನದಲ್ಲಿ 'ಕೆಜಿಎಫ್ 2' ಇದೆ. ಆದರೆ 'ಕೆಜಿಎಫ್ 2' ಗಳಿಕೆ ಇನ್ನೂ ಮುಂದುವರೆದಿದ್ದು, ಈ ಚಿತ್ರಕ್ಕೆ 'ಬಾಹುಬಲಿ 2' ಚಿತ್ರದ ಗಳಿಕೆಯನ್ನು ಮುರಿಯಲು ಸಾಧ್ಯವಾದರೆ 'ಕೆಜಿಎಫ್ 2' ಅಗ್ರ ಸ್ಥಾನಕ್ಕೆ ಏರಲಿದೆ.

'ಕೆಜಿಎಫ್ 2' ಹಿಂದಿ ಕಲೆಕ್ಷನ್ 427.05 ಕೋಟಿ!
ಇನ್ನು ನಿರೀಕ್ಷೆಯಂತೆ ಹಿಂದಿಯಲ್ಲಿ 'ಕೆಜಿಎಫ್ 2' ಭರ್ಜರಿಯಾಗಿ ಓಡುತ್ತಿದೆ. ಯಾವುದೇ ಅಡೆ ತಡೆ ಇಲ್ಲದೆ ಮುನ್ನುತ್ತಿದೆ. ಈಗ ಕಲೆಕ್ಷನ್ನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಬಾಲಿವುಡ್ ಬಾಕ್ಸಾಫೀಸ್ನಲ್ಲಿ ಮತ್ತೊಂದು ಹೊಸ ದಾಖಲೆ ಮಾಡಿದೆ. ಹಿಂದಿ ಅವತರಣಿಕೆಯ 'ಕೆಜಿಎಫ್ 2' ಈಗ 427 ಕೋಟಿ ಗಡಿ ದಾಟಿದೆ. ಇನ್ನೇನಿದ್ದರು 500 ಕೋಟಿ ಮಾಡಿ ಮತ್ತೊಂದು ದಾಖಲೆ ಬರೆಯಬೇಕಿದೆ.