'ಕೆಜಿಎಫ್ 2' ಪ್ರತ್ಯೇಕ, ಬೇರೆ ಚಿತ್ರಗಳ ಜೊತೆ ಹೋಲಿಕೆ ಬೇಡ: ಗಣೇಶ್ ಕಾಸರಗೋಡು!
ಸದ್ಯ ಎಲ್ಲೆಲ್ಲೂ ಕೆಜಿಎಫ್ 2 ಚಿತ್ರದ ಹವಾ ಜೋರಾಗಿದೆ. ಭಾರತದಾದ್ಯಂತ ಅಬ್ಬರಿಸುತ್ತಿದೆ ಕೆಜಿಎಫ್ 2. ರಾಕಿ ಭಾಯ್ ಅಬ್ಬರಕ್ಕೆ ಬಾಲಿವುಡ್‌ನ ದಾಖಲೆಗಳೇ ಪುಡಿ, ಪುಡಿ ಆಗಿ ಬಿಟ್ಟಿವೆ. ಕೋಟಿ, ಕೋಟಿ ಹಣ ಸಂಪಾದನೆ ಮಾಡುತ್ತಿರುವ ಕೆಜಿಎಫ್ 2 ಚಿತ್ರ ಒಂದು ಇತಿಹಾವೇ ಆಗಿ ಬಿಟ್ಟಿದೆ.
ಕೆಜಿಎಫ್ 2 ಚಿತ್ರದ ತಾಕತ್ತು ನೋಡಿ, ಪರಭಾಷಿಗರು ಬೆರಗಾಗಿ ಹೋಗಿದ್ದಾರೆ. ಮತ್ತೊಂದು ಕಡೆ ಈ ಚಿತ್ರದ ಯಶಸ್ಸನ್ನು ಸ್ವಾಗತ ಮಾಡುತ್ತಾ ಇದ್ದಾರೆ. ಇನ್ನು ಕೆಜಿಎಫ್ 2 ಚಿತ್ರದ ಬಳಿಕ ಮುಂದೆ ಕನ್ನಡ ಚಿತ್ರರಂಗದ ನಡೆ ಬಗ್ಗೆ, ಚಿತ್ರಗಳಿಗೆ ಇರುವ ಸವಾಲುಗಳ ಬಗ್ಗೆ ಮಾತನಾಡಲಾಗುತ್ತಿದೆ.
ಆದರೆ ಪ್ರತಿ ಚಿತ್ರಗಳಿಗೂ ತನ್ನದೆ ಆದ ಪ್ರತ್ಯೇಕ ಶಕ್ತಿ ಇರುತ್ತದೆ. ಕೆಲವು ಸಿನಿಮಾಗಳು ಕೆಲವು ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತವೆ. ಆದರೆ 'ಕೆಜಿಎಫ್ 2' ಸಿನಿಮಾದಲ್ಲಿ ಇರುವ ಕಂಟೆಂಟ್‌ಗಿಂತಾ ವ್ಯವಹಾರ ದೊಡ್ಡದು ಎಂದು ತೋರಿಸಿ ಕೊಟ್ಟಿದೆ. ಬ್ಯುಸಿನೆಸ್ ಗೊತ್ತಿದ್ದರೆ ಒಬ್ಬ ನಿರ್ದೇಶಕ ಎಂಥಹ ಕಥೆಯನ್ನಾದರೂ ಜನರಿಗೆ ಸುಲಭವಾಗಿ ತಲುಪಿಸಬಹುದು ಎನ್ನುವುದನ್ನು ತೋರಿಸಿ ಕೊಟ್ಟಿದೆ. ಈ ಬಗ್ಗೆ ಕನ್ನಡದ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಏನು ಹೇಳುತ್ತಾರೆ ಎಂಬುದನ್ನು ಮುಂದೆ ಓದಿ.

ಕೆಜಿಎಫ್ 2 ಕನ್ನಡದ ಅಲ್ಟಿಮೇಟ್ ಚಿತ್ರ!
ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಕೆಜಿಎಫ್ 2 ಚಿತ್ರದ ಬಗ್ಗೆ ಫಿಲ್ಮೀ ಬೀಟ್ ಜೊತೆಗೆ ಮಾತನಾಡಿದ್ದಾರೆ. "ಕೆಜಿಎಫ್ 2. ಕನ್ನಡದ ಅಲ್ಟಿಮೆಟ್ ಚಿತ್ರ, ಕನ್ನಡ ಚಿತ್ರರಂಗವನ್ನು ಒಂದು ಹೆಜ್ಜೆ ಮೇಲೆ ತೆಗೆದುಕೊಂಡು ಹೋದ ಸಿನಿಮಾ. ಇದು ಒಂದೇ ಚಿತ್ರ. ಮತ್ತೊಂದು ಕೆಜಿಎಫ್ ಆಗಲು ಸಾಧ್ಯವಿಲ್ಲ." ಎಂದಿದ್ದಾರೆ. ಕೆಜಿಎಫ್ ಭಾಗ 1 ಒಂದು ಪ್ರತ್ಯೇಕ ಚಿತ್ರವಾಗಿತ್ತು. ಈಗ ಕೆಜಿಎಫ್ 2 ಕೂಡ ಒಂದು ಪ್ರತ್ಯೇಕ ಭಾಗವಾಗಿ ಬಿಟ್ಟಿದೆ.

ಕೆಜಿಎಫ್ 2 ಮೀರಿಸುವ ಚಿತ್ರ ಮಾಡಲು ಅವರಿಗೆ ಸಾಧ್ಯವಾವಿಲ್ಲ!
ಕೆಜಿಎಫ್ ಅಂತಹ ಸಿನಿಮಾಗಳು ಯಾವಾಗಲು ಬರಲು ಸಾಧ್ಯವಿಲ್ಲ, ಎಲ್ಲರೂ ಮಾಡಲು ಸಾಧ್ಯವಿಲ್ಲ. "ಕೆಜಿಎಫ್ 2 ಒಂದು ಅದ್ಬುತ ಎನ್ನಬಹುದು. ಚಿತ್ರದ ಕಂಟೆಂಟ್ ಬಗ್ಗೆ ಯಾರು ಮಾತನಾಡುತ್ತಿಲ್ಲ. ಆದರೂ ಹೆಚ್ಚು ಜನರಿಗೆ ಚಿತ್ರ ತಲುಪಿದೆ. ಇದು ನಿರ್ದೇಶಕನ ಬುದ್ಧಿವಂತಿಕೆ. ಕೆಜಿಎಫ್ ಮಾದರಿಯಲ್ಲಿ ಸಿನಿಮಾ ಬರಲು ಸಾಧ್ಯವಿಲ್ಲ. ಸ್ವತಃ ಕೆಜಿಎಫ್ ಟೀಮ್‌ಗೆ ಇಂತಹ ಚಿತ್ರವನ್ನು ಮತ್ತೇ ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ.

ಕೆಜಿಎಫ್ 2 ಜೊತೆಗೆ ಹೋಲಿಕೆ ಸಮಂಜಸವಲ್ಲ!
ಇನ್ನು ಕೆಜಿಎಫ್ 2 ಚಿತ್ರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ ಅಂತ, ಬೇರೆ ಚಿತ್ರಗಳು ಈ ಚಿತ್ರದ ಹಿಂದೆ ಬೀಳುವುದು ಅಥವಾ ಬೇರೆ ಸಿನಿಮಾಗಳನ್ನು, ಸ್ಟಾರ್ ನಟರ ಚಿತ್ರಗಳನ್ನು ಈ ಚಿತ್ರದ ಜೊತೆಗೆ ಹೋಲಿಕೆ ಮಾಡುವುದು ಸಮಂಜಸವಲ್ಲಾ ಎಂದಿದ್ದಾರೆ. ಕಾರಣ ಬ್ಯುಸಿನೆಸ್ ವಿಚಾರದಲ್ಲಿ ಈ ಚಿತ್ರ ಅಲ್ಟಿಮೆಟ್ ಆಗಿ ನಿಂತಿದೆ. ಕೆಜಿಎಫ್ ಸೂತ್ರ ಬಳಸಿ ಮತ್ತೊಬ್ಬರು ಪ್ಯಾನ್ ಇಂಡಿಯಾ ಅಂತ ಹೋದರೆ ಈ ಯಶಸ್ಸು ಕಾಣುವುದು ಕಷ್ಟವೇ ಎಂದಿದ್ದಾರೆ ಹಿರಿಯ ಪತ್ರಕರ್ತ.

ವಿಕ್ರಾಂತ್ ರೋಣ, ಕ್ರಾಂತಿ, ಕಬ್ಜ ಚಿತ್ರದ ತಾಕತ್ತು ಬೇರೆನೆ!
'ಕೆಜಿಎಫ್ 2' ಚಿತ್ರದ ಜೊತೆಗೆ ಬೇರೆ ಚಿತ್ರಗಳನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಇದೇ ವರ್ಷ 'ವಿಕ್ರಾಂತ್ ರೋಣ', 'ಕ್ರಾಂತಿ', 'ಕಬ್ಜ' ಚಿತ್ರಗಳು ದೊಡ್ಡ ವೆಚ್ಚದಲ್ಲಿ, ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿವೆ. ಆದರೆ ಈ ಚಿತ್ರಗಳನ್ನು ಕೆಜಿಎಫ್ 2 ಚಿತ್ರಗಳೊಂದಿಗೆ ಹೋಲಿಸಲು ಅಸಾಧ್ಯ. ಈ ಚಿತ್ರಗಳಿಗೆ ತನ್ನದೇ ಆದ ಬೇರೆ ರೀತಿ ತಾಕತ್ತು ಇದೆ ಎಂದಿದ್ದಾರೆ ಅವರು.


Click it and Unblock the Notifications











