Big News: ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್

ಕೊನೆಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾದ ರಿಲೀಸ್ ದಿನಾಂಕ ಪ್ರಕಟವಾಯಿತು. ಜುಲೈ 16 ರಂದು ಕೆಜಿಎಫ್ 2 ಸಿನಿಮಾ ವರ್ಲ್ಡ್ ವೈಡ್ ಬಿಡುಗಡೆಯಾಗುತ್ತಿದೆ ಎಂದು ಹೊಂಬಾಳೆ ಫಿಲಂಸ್ ಘೋಷಿಸಿದೆ.

ಇಂದು ಬೆಳಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಸಂಜೆ 6.32ಕ್ಕೆ ಕೆಜಿಎಫ್ ರಿಲೀಸ್ ದಿನಾಂಕ ಪ್ರಕಟಿಸುವುದಾಗಿ ಮಾಹಿತಿ ನೀಡಿತ್ತು. ಹೇಳಿದಂತೆ ಕೆಜಿಎಫ್ ಚಿತ್ರದ ಬಿಡುಗಡೆ ದಿನವನ್ನು ಬಹಿರಂಗಪಡಿಸಿದೆ.

ಕನ್ನಡದ ಸ್ಟಾರ್ ನಟರ ಚಿತ್ರಗಳು ಎಲ್ಲವೂ ಬಿಡುಗಡೆಯಾದ್ಮೇಲೆ ಕೆಜಿಎಫ್ ಬರಲು ನಿರ್ಧರಿಸಿದೆ. ಪೊಗರು, ರಾಬರ್ಟ್, ಯುವರತ್ನ, ಕೋಟಿಗೊಬ್ಬ 3, ಸಲಗ, ಭಜರಂಗಿ 2 ಚಿತ್ರಗಳು ಮೇ ತಿಂಗಳ ಕೊನೆಯವರೆಗೂ ಡೇಟ್ ಲಾಕ್ ಮಾಡಿದೆ. ಕೊನೆಯದಾಗಿ ರಾಕಿ ಭಾಯ್ ಬರ್ತಿದ್ದಾರೆ.

KGF Chapter 2 Movie to Release On July 16th

ಸದ್ಯದ ಲೆಕ್ಕಾಚಾರದಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಎದುರು ಕನ್ನಡ ಹಾಗೂ ಯಾವುದೇ ಪರಭಾಷೆಯ ಚಿತ್ರವೂ ರಿಲೀಸ್ ಆಗುತ್ತಿಲ್ಲ. ಆರ್‌ಆರ್‌ಆರ್‌ ಸಿನಿಮಾ ಅಕ್ಟೋಬರ್, ಅಣ್ಣಾತ್ತೆ ಸಿನಿಮಾ ನವೆಂಬರ್, ಅಜಿತ್ ಸಿನಿಮಾ ಆಗಸ್ಟ್ ತಿಂಗಳಿಗೆ ಫಿಕ್ಸ್ ಆಗಿವೆ.

ಪ್ರಶಾಂತ್ ನೀಲ್ ನಿರ್ದೇಶಿಸಿರುವ ಕೆಜಿಎಫ್ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದ್ದಾರೆ. ಯಶ್ ಜೊತೆ ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ವಸಿಷ್ಠ ಸಿಂಹ, ರಾವ್ ರಮೇಶ್, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.

ಮೊದಲ ಭಾಗಕ್ಕೆ ಸಂಗೀತ ನೀಡಿದ್ದ ರವಿ ಬಸ್ರೂರು ಚಾಪ್ಟರ್ 2ರಲ್ಲು ಮ್ಯೂಸಿಕ್ ಡೈರೆಕ್ಷನ್ ಮಾಡಿದ್ದಾರೆ. ಭುವನ್ ಗೌಡ ಅವರ ಛಾಯಾಗ್ರಹಣ ಇದೆ.

More from Filmibeat

English summary
Rocking star Yash starrer KGF Chapter 2 Movie to Release On July 16th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X