Sanjay Dutt Birthday; 'KGF-2' ಚಿತ್ರದಿಂದ 'ಅಧೀರ' ಪೋಸ್ಟರ್ ಬಿಡುಗಡೆ
ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 62ನೇ ವಸಂತಕ್ಕೆ ಕಾಲಿಟ್ಟಿರುವ ಮುನ್ನಾಭಾಯ್ ಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.
Recommended Video
ವಿಶೇಷ ಎಂದರೆ ಸಂಜಯ್ ದತ್ ಹುಟ್ಟುಹಬ್ಬಕ್ಕೆ ಬಹುನಿರೀಕ್ಷೆಯ ಕೆಜಿಎಫ್-2 ಸಿಮಿಮಾದಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ. ಸಂಜಯ್ ದತ್ ಹುಟ್ಟುಹಬ್ಬಕ್ಕೆ ಕೆಜಿಎಫ್-2ನಿಂದ ವಿಶೇಷ ಉಡುಗೊರೆ ಸಿಗಲಿದೆ ಎಂದು ಅಭಿಮಾನಿಗಳು ತಿಂಗಳಿಂದ ಕಾಯುತ್ತಿದ್ದರು. ಅದರಂತೆ ಕೆಜಿಎಫ್-2 ತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಂಜಯ್ ದತ್ ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.
ಕೆಜಿಎಫ್-2ನಲ್ಲಿ ಸಂಜಯ್ ದತ್ ಅಧೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅತ್ಯಂತ ಕ್ರೂರಿ ವಿಲನ್ ಪಾತ್ರಕ್ಕೆ ಬಣ್ಣಹಚ್ಚಿರುವ ಸಂಜಯ್ ದತ್ ಭಯಾನಕ ಲುಕ್ ಅಭಿಮಾನಿಗಳನ್ನು ಬೆಚ್ಚಿಬೀಳಿಸುವಂತಿದೆ. ಖಡ್ಗ ಹಿಡಿದು ಎಂಟ್ರಿ ಕೊಟ್ಟಿರುವ ಅಧೀರ ಸಂಜಯ್ ದತ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಂದಹಾಗೆ ಪೋಸ್ಟರ್ ರಿಲೀಸ್ ಮಾಡಿ, "ಯುದ್ಧವು ಪ್ರಗತಿಗಾಗಿ ಆಗಿದೆ. ಇದನ್ನು ರಣಹದ್ದುಗಳು ಸಹ ನನ್ನೊಂದಿಗೆ ಅಪ್ಪುತ್ತವೆ" ಎಂದು ಕ್ಯಾಪ್ಷನ್ ನೀಡಿದ್ದಾರೆ. ದತ್ ಹೊಸ ಪೋಸ್ಟರ್ ಈಗ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ.
ಇನ್ನು ಈ ಪೋಸ್ಟರ್ ಅನ್ನು ನಟ ಸಂಜಯ್ ದತ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಧನ್ಯವಾದ ತಿಳಿಸಿದ್ದಾರೆ. "ಕೆಜಿಎಫ್-2ನಲ್ಲಿ ಕೆಲಸ ಮಾಡಿರುವುದು ಅದ್ಭುತ ಅನುಭವವಾಗಿದೆ. ನನಗೆ ಗೊತ್ತು ನೀವು ಸಿನಿಮಾ ಬಿಡುಗಡೆಗೆ ಬಹಳ ಸಮಯದಿಂದ ಕಾಯುತ್ತಿದ್ದೀರಿ ಅಂತ. ನಾನು ನಿಮಗೆ ಭರವಸೆ ನೀಡುತ್ತೇನೆ ಕಾಯಲು ಯೋಗ್ಯವಾಗಿರುತ್ತದೆ" ಎಂದು ಹೇಳಿದ್ದಾರೆ.

ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿದ್ದ ಟೀಸರ್ ನಲ್ಲಿ ಅಧೀರನ ಮುಖ ತೋರಿಸಿರಲಿಲ್ಲ. ಖಡ್ಗ ಹಿಡಿದು ನಿಂತಿರುವ ನಿಂತಿರುವ ಸಂಜಯ್ ದತ್ ಬ್ಯಾಕ್ ಮಾತ್ರ ತೋರಿಸಲಾಗಿತ್ತು. ಇದೀಗ ಸಂಜಯ್ ಹಟ್ಟುಹಬ್ಬಕ್ಕೆ ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಮುಖ ದರ್ಶನವಾಗಿದೆ. ಅದೇ ಖಡ್ಗ ಹಿಡಿದು ಬರುತ್ತಿರುವ ಫೋಟೋ ಪೋಸ್ಟರ್ ನಲ್ಲಿದೆ.


Click it and Unblock the Notifications











