Yash Birthday: KGF2 ಹೊಸ ಪೋಸ್ಟರ್ ರಿಲೀಸ್, ಯಶ್ ಅಭಿಮಾನಿಗಳಲ್ಲಿ ಬೇಸರ!
ನಟ ರಾಕಿಂಗ್ ಸ್ಟಾರ್ ಹುಟ್ಟು ಹಬ್ಬಕ್ಕೆ ಶುಭಾಶಯದ ಮಹಾಪೂರವೇ ಹರಿದು ಬರ್ತಿದೆ. ಸಿನಿಮಾ ತಾರೆಯರು ಸೇರಿದಂತೆ ಯಶ್ ಅಭಿಮಾನಿಗಳು ಅವರ ಹುಟ್ಟು ಹಬ್ಬಕ್ಕೆ ವಿಶ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್ನು ಯಶ್ ಹಟ್ಟುಹಬ್ಬದ ಅಂಗವಾಗಿ ಕೆಜಿಎಫ್2 ಚಿತ್ರದ ಹೊಸ ಪೊಸ್ಟರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಮೊದಲೇ ಹೇಳಿತ್ತು. ಹಾಗಾಗಿ ಚಿತ್ರರಂಗ ಸೇರಿದಂತೆ, ಯಶ್ ಅಭಿಮಾನಿಗಳು ಕೆಜಿಎಫ್ ಪ್ರೇಮಿಗಳು ಹೊಸ ಪೋಸ್ಟರ್‌ನಲ್ಲಿ ಯಶ್ ಅವರನ್ನು ನೋಡಲು ಕಾತರದಿಂದ ಕಾಯುತ್ತಿದ್ದರು.
Recommended Video
ಪೋಸ್ಟರ್ ಏನೋ ರಿಲೀಸ್ ಆಗಿದೆ. ಆದರೆ ಈ ಹೊಸ ಪೋಸ್ಟರ್ ನಿರೀಕ್ಷೆಯ ಮಟ್ಟ ತಲುಪಿಲ್ಲ. ಹಾಗಾಗಿ ಯಶ್ ಅವರ ಅಭಿಮಾನಿಗಳು ಈ ಪೋಸ್ಟರ್ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ಅಸಮಾಧಾನ ವ್ಯಕ್ತ ಪಡಿಸಿತ್ತಿದ್ದಾರೆ.
ನಿರೀಕ್ಷೆ ಮೂಡಿಸಿದ ಕೆಜಿಎಫ್2 ಪೋಸ್ಟರ್!
ಯಶ್ ಹುಟ್ಟು ಹಬ್ಬಕ್ಕೆ ಈ ಬಾರಿಯೂ ಹೆಚ್ಚಿನ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ ವಿಚಾರ ಅಂದರೆ ಅದು ಕೆಜಿಎಫ್ 2 ಚಿತ್ರದ ಅಡ್ಟೇಟ್. ಅಂತೆಯೇ ಚಿತ್ರ ತಂಡ ಕೂಡ ಯಶ್ ಹುಟ್ಟು ಹಬ್ಬಕ್ಕೆ ಪೋಸ್ಟರ್ ರಿಲೀಸ್ ಮಾಡುವುದಾಗಿ ಪ್ರಕಟಣೆ ಹೊರಡಿಸಿತ್ತು. ಬಳಿಕ ಪೋಸ್ಟರ್ ಮೇಲೆ ಎಲ್ಲಿಲ್ಲದ ನಿರೀಕ್ಷೆಗಳು ಮನೆ ಮಾಡಿದ್ದವು. ಚಿತ್ರ ತಂಡವೇ ಪ್ರಕಟಣೆ ಹೊರಡಿಸಿದೆ ಎಂದ ಮೇಲೆ ಹೊಸ ಪೋಸ್ಟರ್‌ನಲ್ಲಿ ಯಶ್ ಹೇಗೆ ಕಾಣಿಸಿದ್ದಾರೆ ಎಂದು ಊಹೆ ಮಾಡುತ್ತಿತ್ತು ಯಶ್ ಅಭಿಮಾನಿ ಬಳಗ.

ನಿರಾಸೆಗೊಳಿಸಿದ ಕೆಜಿಎಫ್2 ಹೊಸ ಪೋಸ್ಟರ್!
ಇನ್ನು ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆಯೇ ಎಲ್ಲಡೆ ಸಂಲಚನ ಮೂಡಿಸಿದೆ. ಅದರ ಜೊತೆಗೆ ನಿರಾಸೆಗೂ ಈ ಪೋಸ್ಟರ್ ಕಾರಣ ಆಗಿದೆ. ಯಾಕೆಂದರೆ ಕೆಜಿಎಫ್ ಪೋಸ್ಟರ್‌ನಲ್ಲಿ ಅಂತಹ ಹೊಸತನವೇನೂ ಕಾಣಿಸುತ್ತಿಲ್ಲ. ರಾಕಿ ಭಾಯ್‌ಯನ್ನು ಹೊಸ ರೂಪದಲ್ಲಿ ನೋಡು ಬಯಸಿದ ಅಭಿಮಾನಿಗಳಿಗೆ ಬೇಸರ ಆಗಿದೆ. ತಮ್ಮ ಬೇಸರವನ್ನು, ನಿರಾಸೆಯನ್ನು ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೊರ ಹಾಕಿದ್ದಾರೆ.
"ಈ ಪೋಸ್ಟರ್‌ಗಿಂತೂ ಅಭಿಮಾನಿಗಳು ಮಾಡಿದ್ದ ಕಾಮನ್ ಡಿಪಿ ಚೆನ್ನಾಗಿತ್ತು, ಟೀಸರ್‌ನಿಂದ ಒಂದು ಲುಕ್ ಕಟ್ ಮಾಡಿದ್ದರು ಚೆನ್ನಾಗಿ ಇರುತ್ತಿತ್ತು, ಹುಟ್ಟು ಹಬ್ಬದ ಗಿಫ್ಟ್ ಅಂದರೆ ಇದೇನಾ" ಎನ್ನುವಂತಹ ಹತ್ತು ಹಲವು ಕಾಮೆಂಟ್‌ಗಳ ಮೂಲಕ ಅಭಿಮಾನಿಗಳು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.

ಪೋಸ್ಟರ್‌ನಲ್ಲಿ ಇರುವುದಾದರು ಏನು?
ಕಳೆದ ಬಾರಿ ಭರ್ಜರಿಯಾದ ಟೀಸರ್ ರಿಲೀಸ್ ಮಾಡಿ ಎಲ್ಲಿಲ್ಲದ ಕುತೂಹಲ ಮೂಡಿಸಿತ್ತು ಚಿತ್ರ ತಂಡ. ಹಾಗಾಗಿ ಈ ಬಾರಿಯ ಪೋಸ್ಟರ್ ಮೇಲೂ ಅಷ್ಟೇ ನಿರೀಕ್ಷೆ ಇತ್ತು. ಆದರೆ ಪೋಸ್ಟರ್‌ನಲ್ಲಿ 'ಅಪಾಯ' ಎನ್ನುವುದನ್ನು ಬಿಟ್ಟರೆ, ಯಶ್ ಅವರ ಲುಕ್ ನಲ್ಲಿ ಏನು ವಿಶೇಷತೆ ಕಂಡು ಬಂದಿಲ್ಲ. ರಾಕಿ ಭಾಯ್ ನಿಂತಿರುವ ಪೋಸ್ಟರ್‌ನಲ್ಲಿ ಯಶ್ ಫೋಟೊ ಹಿಂದೆ, ರಾಕಿಂಗ್ ಸ್ಟಾರ್ ಹ್ಯಾಪಿ ಬರ್ತ್ ಡೇ ಯಶ್ ಎಂದು ಬರೆಯಲಾಗಿದೆ. ಅವರ ಫೋಟೊ ಮುಂದೆ ಎಚ್ಚರಿಕೆ ಅಪಾಯವಿದೆ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಇಷ್ಟು ಬಿಟ್ಟರೆ ಯಶ್ ಅವರು ಅದೇ ಕಿಲ್ಲಿಂಗ್ ರಗಡ್ ಲುಕ್‌ನಲ್ಲಿ ಪೋಸ್ ಕೊಟ್ಟಿದ್ದಾರೆ.

ಪೋಸ್ಟರ್‌ನಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಸುಳಿವು ನೀಡದ ಚಿತ್ರ ತಂಡ!
ಹೊಸ ಪೋಸ್ಟರ್‌ನಲ್ಲಿ ಕೆಜಿಎಫ್2 ಚಿತ್ರದ ಬಗ್ಗೆ ಯಾವುದೇ ಹೊಸ ಸುಳಿವು ಬಿಟ್ಟು ಕೊಟ್ಟಿಲ್ಲ. ಚಿತ್ರದ ಯಾವುದೇ ಅಂಶಗಳನ್ನು ರಿವೀಲ್ ಮಾಡಿದರೆ ಅದು ಚಿತ್ರದ ಬಗ್ಗೆ ಸುಳಿವು ಕೊಡುವ ಸಾಧ್ಯತೆ ಇರಬಹುದು. ಇಷ್ಟು ಬೇಗ ಆ ರೀತಿಯ ಸುಳಿವುಗಳನ್ನು ಬಿಟ್ಟು ಕೊಡಲು ಬಹುಶಃ ಚಿತ್ರ ತಂಡ ಹಿಂದೇಟು ಹಾಕಿದೆ ಎನಿಸುತ್ತದೆ. ಚಿತ್ರ ಏಪ್ರಿಲ್‌ನಲ್ಲಿ ರಿಲೀಸ್ ಇರುವ ಕಾರಣಕ್ಕೆ ಸದ್ಯಕ್ಕೆ ಯಾವುದೇ ಸುಳಿವು ಬಿಟ್ಟು ಕೊಟ್ಟಿಲ್ಲ. ಆದರೆ ರಿಲೀಸ್ ಹತ್ತಿರ ಆಗುತ್ತಿದ್ದಂತೆಯೇ ಚಿತ್ರದ ಬಗ್ಗೆ ಒಂದೊಂದೆ ಮಾಹಿತಿ ಬೀಳಲಿವೆ.


Click it and Unblock the Notifications











