KGF 2: OTT ರಿಲೀಸ್ ಫಿಕ್ಸ್, TVಯಲ್ಲಿ ಯಾವಾಗ? ಇಲ್ಲಿದೆ ಮಾಹಿತಿ!
'ಕೆಜಿಎಫ್ 2' ಚಿತ್ರ ಥಿಯೇಟರ್‌ನಲ್ಲಿ ರಿಲೀಸ್ ಆಗಿ ಬಿಗ್ ಓಪನಿಂಗ್ ಪಡೆದುಕೊಂಡಿದೆ. ಚಿತ್ರ ನೋಡಿದವರೆಲ್ಲಾ, ಯಶ್ ಮತ್ತು ಪ್ರಶಾಂತ್ ನೀಲ್‌ಗೆ ಜೈ ಕಾರ ಹಾಕುತ್ತಿದ್ದಾರೆ. ಇದು ವರ್ಲ್ಡ್ ಕ್ಲಾಸ್ ಚಿತ್ರ ಎಂದು ಜನ ಹಾಡಿ ಹೊಗಳುತ್ತಿದ್ದಾರೆ. ಹಿಂದಿ, ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ದಾಖಲೆ ಬರೆದಿದೆ 'ಕೆಜಿಎಫ್ 2'.
'ಕೆಜಿಎಫ್ 2' ಕನ್ನಡ ಅಥವಾ ಭಾರತೀಯ ಚಿತ್ರವಾಗಿ ಮಾತ್ರ ಉಳಿದಿಲ್ಲ. ಈ ಚಿತ್ರವನ್ನು ವರ್ಲ್ಡ್ ಸಿನಿಮಾ ಎಂದು ಕರೆದರೆ ಅದು ಅತಿಶಯೋಕ್ತಿ ಆಗಲಾರದು. ಯಾಕೆಂದರೆ ವಿಶ್ವದಾದ್ಯಂತ ಹಲವು ದೇಶಗಳಲ್ಲಿ 'ಕೆಜಿಎಫ್ 2' ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿದೆ. ಈ ಕಾರಣಕ್ಕೆ ದೊಡ್ಡ ಮಟ್ಟದಲ್ಲೇ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ.
'ಕೆಜಿಎಫ್ 2' ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಈ ಚಿತ್ರದ ದಾಖಲೆಯ ಮಹಾಪೂರ ಎಲ್ಲಿಗೆ ನಿಲ್ಲುತ್ತದೆ ಎನ್ನುವುದು ಗೊತ್ತಿಲ್ಲ. ದಿನೇ ದಿನೆ ದಾಖಲೆಯ ಲೆಕ್ಕ ಹೆಚ್ಚುತ್ತಲೇ ಇದೆ. ಈಗ ಒಟಿಟಿ ಮತ್ತು ಕಿರುತೆರೆಯಲ್ಲೂ 'ಕೆಜಿಎಫ್ 2' ಚಿತ್ರ ದಾಖಲೆ ಮಾಡಲಿದ್ದು, ದೊಡ್ಡ ಮೊತ್ತಕ್ಕೆ ಚಿತ್ರ ಮಾರಾಟ ಆಗಿದೆ.
Recommended Video


OTTಗೆ ಬರಲು 'ಕೆಜಿಎಫ್ 2' ಸಿದ್ಧ!
'ಕೆಜಿಎಫ್ 2' ಚಿತ್ರ ಸದ್ಯ ಒಟಿಟಿಯಲ್ಲಿ ಬರಲು ಅದಾಗಲೇ ಸಜ್ಜಾಗಿ ಬಿಟ್ಟಿದೆ. ಇನ್ನು ಕೆಲವೇ ದಿನಗಳಲ್ಲಿ ಕೆಜಿಎಫ್ 2 ಒಟಿಟಿ ರಿಲೀಸ್ ಆಗುತ್ತಿದೆ. ಈ ಬಗ್ಗೆ ಅದಾಗಲೇ ಮಾಹಿತಿ ಹೊರ ಬಿದ್ದಿದೆ. ಅಮೆಜಾನ್ ಪ್ರೈಮ್‌ನಲ್ಲಿ 'ಕೆಜಿಎಫ್ 2' ಚಿತ್ರ ರಿಲೀಸ್ ಆಗಲಿದೆ. ದೊಡ್ಡ ಮೊತ್ತಕ್ಕೆ 'ಕೆಜಿಎಫ್ 2' ಚಿತ್ರವನ್ನು ಅಮೆಜಾನ್ ಪ್ರೈಮ್ ತೆಗೆದುಕೊಂಡಿದೆ.

ದುಬಾರಿ ಮೊತ್ತಕ್ಕೆ 'ಕೆಜಿಎಫ್ 2' ಸ್ಯಾಟಲೈಟ್ ರೈಟ್ಸ್!
ಚಿತ್ರಮಂದಿರಗಳಲ್ಲಿ 'ಕೆಜಿಎಫ್ 2' ರಿಲೀಸ್ ಆದ ಬೆನ್ನಲ್ಲೇ ಟಿವಿಯಲ್ಲಿ ಚಿತ್ರ ಬಿಡುಗಡೆಗೆ ತಯಾರಾಗಿದೆ. ಕಿರುತೆರೆಯ ಡೀಲ್ ಕೂಡ ಮುಗಿದಿದೆ. 'ಕೆಜಿಎಫ್ 2' ಸ್ಯಾಟಲೈಟ್ ರೈಟ್ಸ್ ಕೂಡ ದುಬಾರಿ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಈ ಚಿತ್ರವನ್ನು ಜೀ ತೆಗೆದುಕೊಂಡಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ 'ಕೆಜಿಎಫ್ 2' ಜೀ ಟಿವಿಯಲ್ಲಿ ರಿಲೀಸ್ ಆಗಲಿದೆ. ಇನ್ನುಳಿದಂತೆ ಹಿಂದಿಯಲ್ಲಿ ಮಾತ್ರ ಈ ಚಿತ್ರ ಸೋನಿ ಮ್ಯಾಕ್ಸ್‌ನಲ್ಲಿ ಪ್ರಸಾರ ಆಗಲಿದೆ.

Ott, ಕಿರುತೆರೆಯಲ್ಲೂ ಕೆಜಿಎಫ್ ದಾಖಲೆ!
ಚಿತ್ರಮಂದಿರಗಳಲ್ಲಿ ರಾರಾಜಿಸುತ್ತಿರುವ 'ಕೆಜಿಎಫ್ 2' ಚಿತ್ರ, ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಮಾಡಿದೆ. ಹಾಗೆ ಒಟಿಟಿ ಮತ್ತು ಸ್ಯಾಟಲೈಟ್ ಹಕ್ಕು ಕೂಡ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ. ಒಟಿಟಿ ಮತ್ತು ಕಿರುತೆರೆಯಲ್ಲಿ ಚಿತ್ರ ಪ್ರಸಾರವಾದ ಬಳಿಕ ಮತ್ತೊಮ್ಮೆ ದಾಖಲೆಗೆ ಸಾಕ್ಷಿ ಆಗಲಿದೆ 'ಕೆಜಿಎಫ್ 2'. ಕನ್ನಡದ ಚಿತ್ರವೊಂದು ಇಷ್ಟರ ಮಟ್ಟಿಗೆ ಹೆಸರು ಮಾಡುತ್ತಿರುವುದು, ಪ್ರತಿ ಕನ್ನಡಿಗನಿಗೂ ಹೆಮ್ಮೆಯ ವಿಚಾರವೇ ಸರಿ.

ಬಾಕ್ಸಾಫೀಸ್ ಚಿಂದಿ ಮಾಡುತ್ತಿರುವ 'ಕೆಜಿಎಫ್ 2'!
'ಕೆಜಿಎಫ್ 2' ಕನ್ನಡಕ್ಕಿಂತ ಹಿಂದಿ, ತೆಲುಗು ಭಾಷೆಯಲ್ಲಿ ಹೆಚ್ಚು ಕ್ರೇಜ್ ಇದೆ ಎಂದು ಅಂದಾಜಿಸಲಾಗಿತ್ತು. ಅದರಂತೆ ಉಳಿದ ನಾಲ್ಕು ಭಾಷೆಗಳಲ್ಲಿ ಕೆಜಿಎಫ್ ಕಲೆಕ್ಷನ್ 80 ಕೋಟಿ ದಾಟಿದೆ ಎನ್ನಲಾಗಿದೆ. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸುಮಾರು 40 ರಿಂದ 45 ಕೋಟಿ ಗಳಿಕೆ ಆಗಿದೆ ಎನ್ನಲಾಗುತ್ತಿದೆ. ತೆಲುಗು ಬಾಕ್ಸಾಫೀಸ್‌ನಲ್ಲಿ 25 ಕೋಟಿ, ತಮಿಳಿನಲ್ಲಿ 6 ರಿಂದ 7 ಹಾಗೂ ಮಲಯಾಳಂನಲ್ಲಿ 5 ಕೋಟಿ ದಾಟಿದೆ ಎನ್ನಲಾಗಿದೆ.


Click it and Unblock the Notifications











