ಕೆಜಿಎಫ್ ಚಾಪ್ಟರ್ 2 ಅಪ್‌ಡೇಟ್: ಒಂದು ಖುಷಿ, ಇನ್ನೊಂದು ನಿರಾಸೆ
ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಅದಕ್ಕೆ ಕಾರಣ 2018ರಲ್ಲಿ ತೆರೆಕಂಡು ಸೂಪರ್ ಹಿಟ್ ಸಿನಿಮಾ ಕೆಜಿಎಫ್ ಚಾಪ್ಟರ್ 1. ಬಾಹುಬಲಿ ಬಳಿಕ ಅಷ್ಟೇ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿರುವ ಕೆಜಿಎಫ್ ಸೀಕ್ವೆಲ್‌ಗಾಗಿ ಜನ ಕಾಯುವಂತೆ ಮಾಡಿದೆ.
ಯಶ್, ಸಂಜಯ್ ದತ್, ಪ್ರಕಾಶ್ ರಾಜ್ ಸೇರಿದಂತೆ ಹಲವು ಕಲಾವಿದರು ನಟಿಸಿರುವ ಈ ಚಿತ್ರ ಜುಲೈ 16ಕ್ಕೆ ರಿಲೀಸ್ ಆಗುವುದಾಗಿ ಪ್ರಕಟಿಸಿದೆ. ಕೊರೊನಾ ಬಿಕ್ಕಟ್ಟು ಇಲ್ಲದಿದ್ದರೇ ಇಷ್ಟೋತ್ತಿಗಾಗಲೇ ಕೆಜಿಎಫ್ ಥಿಯೇಟರ್‌ಗೆ ಬರ್ತಿತ್ತು. ಆದ್ರೆ, ಕಳೆದ ವರ್ಷದಿಂದ ಕೋವಿಡ್ ಇಡೀ ದೇಶವನ್ನು ಕಾಡುತ್ತಿದೆ. ಕೊರೊನಾ ಭೀತಿಯಲ್ಲು ಕೆಜಿಎಫ್ ಚಿತ್ರತಂಡದಿಂದ ಅಪ್‌ಡೇಟ್ ಹೊರಬಿದ್ದಿದೆ. ಮುಂದೆ ಓದಿ...

ಪೋಸ್ಟ್ ಪ್ರೊಡಕ್ಷನ್ ಮುಗಿದಿದೆ
ಕೆಜಿಎಫ್ ಚಾಪ್ಟರ್ 2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಸಂಪೂರ್ಣವಾಗಿ ಮುಗಿದಿದೆ ಎಂಬ ವಿಚಾರ ಹೊರಬಿದ್ದಿದೆ. ಈ ಸುದ್ದಿಯನ್ನು ಸೌತ್ ಇಂಡಸ್ಟ್ರಿ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿರುವ ಚಿತ್ರ ವಿಶ್ಲೇಷಕ ಕೌಶಿಕ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಜಿಎಫ್ 2 ಪ್ಯಾನ್ ಇಂಡಿಯಾ ಬಿಡುಗಡೆಯಾಗುವುದರಿಂದ ಸಹಜವಾಗಿ ಈ ಚಿತ್ರ ಬೆಳವಣಿಗೆ ಕುರಿತು ಎಲ್ಲಾ ಇಂಡಸ್ಟ್ರಿಯವರು ಕಾಯುತ್ತಿದ್ದಾರೆ. ಕೊನೆಗೂ ಸಿನಿಮಾ ಕೆಲಸ ಮುಗಿತು ಎಂದು ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.

ಜುಲೈ 16ಕ್ಕೆ ಸಿನಿಮಾ ಡೌಟ್?
ಕೊರೊನಾ ವೈರಸ್ ಎರಡನೇ ಅಲೆಯ ತೀವ್ರತೆ ಗಮನಿಸಿದರೆ ಕೆಜಿಎಫ್ ಸಿನಿಮಾ ಅದಾಗಲೇ ಘೋಷಿಸಿರುವಂತೆ ಜುಲೈ 16ಕ್ಕೆ ರಿಲೀಸ್ ಆಗುವುದು ಬಹುತೇಕ ಅನುಮಾನ. ಕೋವಿಡ್ ಪರಿಸ್ಥಿತಿ ನಿಯಂತ್ರಣವಾಗಬೇಕು. ಆಮೇಲೆ ಚಿತ್ರಮಂದಿರಗಳಿಗೆ 100 ಪರ್ಸೆಂಟ್ ಅವಕಾಶ ಸಿಗಬೇಕು. ಆಗಿದ್ದಲ್ಲಿ ಮಾತ್ರ ಜುಲೈ 16ಕ್ಕೆ ಸಿನಿಮಾ ಬರಲಿದೆ. ಇಲ್ಲವಾದಲ್ಲಿ ಮುಂದೂಡುವ ಸಾಧ್ಯತೆ ಹೆಚ್ಚು. ಇದು ಸಹಜವಾಗಿ ಅಭಿಮಾನಿಗಳಲ್ಲಿ ನಿರಾಸೆ ಉಂಟು ಮಾಡಲಿದೆ.

ಸಲಾರ್ ಚಿತ್ರದಲ್ಲಿ ಪ್ರಶಾಂತ್ ನೀಲ್
ಕೆಜಿಎಫ್ ಚಿತ್ರದ ಚಿತ್ರೀಕರಣ ಮುಗಿಸಿದ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಆರಂಭಿಸಿರುವ ಪ್ರಶಾಂತ್ ನೀಲ್, ಈಗ ಲಾಕ್‌ಡೌನ್ ಕಾರಣದಿಂದ ಶೂಟಿಂಗ್‌ಗೆ ಬ್ರೇಕ್ ಹಾಕಿದ್ದಾರೆ. ಈ ನಡುವೆ ಕೆಜಿಎಫ್ ಪೋಸ್ಟ್ ಪ್ರೊಡಕ್ಷನ್ ಕೆಲಸ ಪೂರ್ಣ ಪ್ರಮಾಣದಲ್ಲಿ ಮುಕ್ತಾಯವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
Recommended Video

ಒಟಿಟಿ ಬಿಡುಗಡೆ?
ಕಳೆದ ವರ್ಷ ಪೂರ್ತಿ ಕೊರೊನಾ ವೈರಸ್‌ನಿಂದ ಹಾಳಾಗಿದೆ. ಈ ವರ್ಷವೂ ಬಹುತೇಕ ಕೋವಿಡ್‌ಗೆ ಬಲಿ. ಹಾಗಾಗಿ, ಬಿಡುಗಡೆಗೆ ಸಜ್ಜಾಗಿರುವ ಸ್ಟಾರ್ ನಟರ ಚಿತ್ರಗಳು ಏನು ಮಾಡುವುದು ಎಂಬ ಗೊಂದಲ್ಲಿದೆ. ನಿರೀಕ್ಷೆಯ ಚಿತ್ರಗಳ ಪೈಕಿ ಕೆಲವು ಸಿನಿಮಾಗಳು ಒಟಿಟಿ ಕಡೆ ಮುಖ ಮಾಡುವ ಸಾಧ್ಯತೆ ದಟ್ಟವಾಗಿದೆ. ಕೆಜಿಎಫ್ ಚಿತ್ರತಂಡದ ಯೋಜನೆ ಏನು ಇದೆ ಎಂಬುದು ಕುತೂಹಲ ಮೂಡಿಸಿದೆ.


Click it and Unblock the Notifications











