ಸಂಜೆ 6.32 ಗಂಟೆಗೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ ಘೋಷಣೆ
ಬಹುನಿರೀಕ್ಷೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಬಿಡುಗಡೆ ದಿನಾಂಕ ಯಾವಾಗ ಎಂದು ಕಾಯುತ್ತಿದ್ದರಿಗೆ ನಿರ್ದೇಶಕ ಪ್ರಶಾಂತ್ ನೀಲ್ ಖುಷಿ ಸುದ್ದಿ ನೀಡಿದ್ದಾರೆ. ಚಾಪ್ಟರ್ 2 ರಿಲೀಸ್ ದಿನಾಂಕ ಯಾವಾಗ ಹೇಳುತ್ತೇವೆ ಎಂದು ಸ್ವತಃ ಪ್ರಶಾಂತ್ ನೀಲ್ ಘೋಷಿಸಿದ್ದಾರೆ.
ಹೊಂಬಾಳೆ ಫಿಲಂಸ್ ಹಾಗೂ ಪ್ರಶಾಂತ್ ನೀಲ್ ಈ ಬಗ್ಗೆ ಮಾಹಿತಿ ನೀಡಿದ್ದು, ''ಇಂದು (ಜನವರಿ 29) ಸಂಜೆ 6.32 ಗಂಟೆಗೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಿದ್ದೇವೆ'' ಎಂದು ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈಗಾಗಲೇ ಪ್ಯಾನ್ ಇಂಡಿಯಾ ರಿಲೀಸ್ ಮಾಡುವ ಎಲ್ಲ ಚಿತ್ರಗಳ ರಿಲೀಸ್ ದಿನಾಂಕ ಪ್ರಕಟಣೆಯಾಗಿದೆ. ಕನ್ನಡದ ಬಹುತೇಕ ಎಲ್ಲ ಚಿತ್ರಗಳ ಬಿಡುಗಡೆ ದಿನಾಂಕವೂ ಘೋಷಣೆಯಾಗಿದೆ. ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮಾತ್ರ ಉಳಿದುಕೊಂಡಿದ್ದು ಹೆಚ್ಚು ಕುತೂಹಲ ಮೂಡಿಸಿದೆ.

ಸದ್ಯ ಮಾಹಿತಿ ಪ್ರಕಾರ ಮೇ ಕೊನೆಯ ವಾರ ಕೆಜಿಎಫ್ ಸಿನಿಮಾ ವರ್ಲ್ಡ್ ವೈಡ್ ತೆರೆಗೆ ಬರಲಿದೆ ಎಂದು ಹೇಳಲಾಗಿದೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಬಹುತೇಕ ಎಲ್ಲ ಕನ್ನಡ ಸ್ಟಾರ್ ನಟರ ಚಿತ್ರಗಳು ಚಿತ್ರಮಂದಿರಕ್ಕೆ ಬರಲಿದೆ. ಕೊನೆಯದಾಗಿ ಕೆಜಿಎಫ್ ಬರುವ ಲೆಕ್ಕಾಚಾರ ಹಾಕಲಾಗಿದೆ ಎಂಬ ಮಾತಿದೆ.
ಮತ್ತೊಂದೆಡೆ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್, ರಜನಿಕಾಂತ್ ನಟನೆಯ ಅಣ್ಣಾತ್ತೆ ಚಿತ್ರಗಳು ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ದಿನಾಂಕ ಕಾಯ್ದಿರಿಸಿದೆ. ಈ ನಡುವೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದರೆ ಉತ್ತಮ ಎಂಬ ಅಭಿಪ್ರಾಯವೂ ಇದೆ.


Click it and Unblock the Notifications











