ಕೆಜಿಎಫ್-2 ಚಿತ್ರೀಕರಣ ಇನ್ನೂ ಶುರುವಾಗಿಲ್ಲ, ಅಸಲಿ ದಿನಾಂಕ ಬಹಿರಂಗ!

ಕೊರೊನಾ ವೈರಸ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಚಿತ್ರರಂಗ ನಿಧಾನವಾಗಿ ಯಥಾಸ್ಥಿತಿಗೆ ಮರಳುವತ್ತಾ ಹೆಜ್ಜೆ ಹಾಕಿದೆ. ಕೊವಿಡ್‌ ಕಾರಣದಿಂದ ಸ್ಥಗಿತವಾಗಿದ್ದ ಚಿತ್ರಗಳ ಶೂಟಿಂಗ್ ಈಗ ಒಂದೊಂದೆ ಆರಂಭವಾಗುತ್ತಿದೆ. ಕನ್ನಡ ಬಹುನಿರೀಕ್ಷೆಯ ಚಿತ್ರ ಕೆಜಿಎಫ್ ಸಹ ಅದಾಗಲೇ ಶೂಟಿಂಗ್ ಶುರು ಮಾಡಿದೆ ಎಂದು ಹೇಳಲಾಗಿತ್ತು.

Recommended Video

ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

ಚಿತ್ರೀಕರಣ ಶುರು ಎನ್ನುವಂತಹ ಕೆಲವು ಫೋಟೋಗಳು ಸಹ ವೈರಲ್ ಆಗಿತ್ತು. ವಾಸ್ತವ ಏನಪ್ಪಾ ಅಂದ್ರೆ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ. ಯಾವಾಗ ಶೂಟಿಂಗ್ ಎಂಬ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ. ಅಸಲಿ ದಿನಾಂಕ ಬಹಿರಂಗವಾಗಿದೆ. ಮುಂದೆ ಓದಿ....

ಆಗಸ್ಟ್ 26ಕ್ಕೆ ಶೂಟಿಂಗ್ ಶುರು

ಆಗಸ್ಟ್ 26ಕ್ಕೆ ಶೂಟಿಂಗ್ ಶುರು

ಕೆಜಿಎಫ್ ಚಾಪ್ಟರ್ 2 ಚಿತ್ರದ ಶೂಟಿಂಗ್ ಇನ್ನೂ ಆರಂಭವಾಗಿಲ್ಲ. ಆಗಸ್ಟ್ 26 ರಿಂದ ಮತ್ತೆ ಚಿತ್ರಕರಣ ಪ್ರಾರಂಭವಾಗಲಿದೆ ಎಂದು ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಇಂದು ಬೆಳಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಈ ಫೋಟೋ ಹಳೆಯದು!

ಈ ಫೋಟೋ ಹಳೆಯದು!

ಇತ್ತೀಚಿಗಷ್ಟೆ ಸೋಶಿಯಲ್ ಮೀಡಿಯಾದಲ್ಲಿ ಕೆಜಿಎಫ್ ಚಿತ್ರದ ಹಳೆಯ ಫೋಟೋ ವೈರಲ್ ಆಗಿತ್ತು. ಇದರಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಶೂಟಿಂಗ್ ಸೆಟ್‌ಗೆ ಹೋಗುತ್ತಿರುವ ದೃಶ್ಯ ಇದೆ. ಹಾಗಾಗಿ, ಕೆಜಿಎಫ್ ಚಿತ್ರೀಕರಣ ಆರಂಭವಾಗಿದೆ ಎಂಬ ಅಂತೆ ಕಂತೆ ಹುಟ್ಟಿಕೊಂಡಿತ್ತು. ಆಗಸ್ಟ್ 15 ರಿಂದಲೇ ಚಿತ್ರೀಕರಣ ಆರಂಭವಾಗಿದೆ ಎಂದು ಹೇಳಲಾಗಿತ್ತು. ಇದೀಗ, ಆಗಸ್ಟ್ 26 ರಿಂದ ಎಂದು ಸ್ವತಃ ನಿರ್ಮಾಪಕರ ತಂಡವೇ ಅಧಿಕೃತ ಮಾಡಿದೆ.

ಸಂಜಯ್ ದತ್ ಬಗ್ಗೆ ಆತಂಕ!

ಸಂಜಯ್ ದತ್ ಬಗ್ಗೆ ಆತಂಕ!

ಬಾಲಿವುಡ್ ನಟ ಸಂಜಯ್ ದತ್ ಕೆಜಿಎಫ್ ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ದತ್‌ಗೆ ಕ್ಯಾನ್ಸರ್ ಪತ್ತೆಯಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಹೋಗಿದ್ದಾರೆ. ಈ ಕಡೆ ಸ್ಯಾಂಡಲ್‌ವುಡ್ ಅಭಿಮಾನಿಗಳಿಗೆ ಸಂಜತ್ ದತ್ ಅವರ ಚಿತ್ರೀಕರಣ ಮುಗಿದಿದೆಯಾ ಅಥವಾ ಇನ್ನು ಬಾಕಿ ಇದೆಯೇ ಎಂಬ ಅನುಮಾನ ಕಾಡುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಸುಮಾರು ಮೂರು ತಿಂಗಳ ಬಳಿಕ ಸಂಜತ್ ದತ್ ಮತ್ತೆ ಕೆಜಿಎಫ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಬೇಕಿದೆ.

ರಿಲೀಸ್ ದಿನಾಂಕವೂ ಮುಂದೂಡಿಕೆ!

ರಿಲೀಸ್ ದಿನಾಂಕವೂ ಮುಂದೂಡಿಕೆ!

ಈ ಹಿಂದೆ ಅಂದುಕೊಂಡಂತೆ ಆಗಿದ್ದರೆ ನವೆಂಬರ್ ಅಥವಾ ಡಿಸೆಂಬರ್ ವೇಳೆ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಬೇಕಿದೆ. ಆದರೆ, ಕೊರೊನಾ ವೈರಸ್ ಪರಿಣಾಮ ಈ ಹಿಂದಿನ ಯೋಜನೆಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿದೆ. ಶೂಟಿಂಗ್ ಇನ್ನಷ್ಟು ವಿಳಂಭವಾಗಲಿದ್ದು, ಬಿಡುಗಡೆ ದಿನಾಂಕವೂ ಮುಂದಕ್ಕೆ ಹೋಗುವ ಲೆಕ್ಕಾಚಾರವಿದೆ.

More from Filmibeat

English summary
Rocking star Yash starrer KGF Chapter 2 movie shooting resumes from August 26th said Executive producer Karthik gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X