For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಚಾಪ್ಟರ್ 2 ಸ್ಯಾಟ್‌ಲೈಟ್ ಹಕ್ಕು ಖರೀದಿಸಿದ ಜೀ ಸಂಸ್ಥೆ

  |

  ಭಾರತದ ಬಹುನಿರೀಕ್ಷೆಯ ಸಿನಿಮಾ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ ಇಡೀ ದೇಶದ ಚಿತ್ರಪ್ರೇಮಿಗಳು ಕಾಯ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಜುಲೈ ತಿಂಗಳಲ್ಲಿ ಕೆಜಿಎಫ್ ತೆರೆಗೆ ಬರಬೇಕಿತ್ತು. ಆದರೆ, ಕೋವಿಡ್ ಎರಡನೇ ಅಲೆಯ ಭೀತಿಯಿಂದ ಎಲ್ಲಾ ಯೋಜನೆ ತಲೆಕೆಳಗಾಯಿತು. ಈಗ ಹೊಸ ದಿನಾಂಕ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದ್ದು ನೂತನ ಬಿಡುಗಡೆ ದಿನ ಯಾವುದು ಎಂಬ ಕುತೂಹಲ ಕಾಡ್ತಿದೆ.

  ಈ ನಡುವೆ ಪ್ರಿ-ರಿಲೀಸ್ ಬಿಸಿನೆಸ್ ವಿಚಾರದಲ್ಲಿ ಕೆಜಿಎಫ್ ಚಾಪ್ಟರ್ 2 ಸದ್ದು ಮಾಡ್ತಿದೆ. ಈಗಾಗಲೇ ಐದು ಭಾಷೆಯಲ್ಲಿ ವಿತರಕರು ಪಕ್ಕಾ ಆಗಿದೆ. ಈಗ ಸ್ಯಾಟ್‌ಲೈಟ್ ಹಕ್ಕು, ಡಿಜಿಟಲ್ ಹಕ್ಕುಗಳ ಮಾರಾಟದಲ್ಲಿ ನಿರ್ಮಾಪಕರು ಬ್ಯುಸಿಯಿದ್ದಾರೆ. ಈಗಷ್ಟೇ ಹೊರಬಿದ್ದಿರುವ ಮಾಹಿತಿ ಪ್ರಕಾರ, ದಕ್ಷಿಣ ಭಾರತದ ಟಿವಿ ಹಕ್ಕು ಜೀ ಸಂಸ್ಥೆಯ ಪಾಲಾಗಿದೆ. ಜೀ ಗ್ರೂಪ್‌ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಸ್ಯಾಟ್‌ಲೈಟ್ ಹಕ್ಕು ಖರೀದಿಸಿ ಗಮನ ಸೆಳೆದಿದೆ. ಮುಂದೆ ಓದಿ...

  ಲಹರಿ ಪಾಲಾಯ್ತು 'ಕೆಜಿಎಫ್' ಆಡಿಯೋ: ಐದು ಭಾಷೆಗೆ ಸಿಕ್ಕ ಹಣ ಎಷ್ಟು?ಲಹರಿ ಪಾಲಾಯ್ತು 'ಕೆಜಿಎಫ್' ಆಡಿಯೋ: ಐದು ಭಾಷೆಗೆ ಸಿಕ್ಕ ಹಣ ಎಷ್ಟು?

  ನಾಲ್ಕು ಭಾಷೆಗಳಲ್ಲಿ ಸ್ಯಾಟ್‌ಲೈಟ್ ಹಕ್ಕು

  ನಾಲ್ಕು ಭಾಷೆಗಳಲ್ಲಿ ಸ್ಯಾಟ್‌ಲೈಟ್ ಹಕ್ಕು

  ಜೀ ಗ್ರೂಪ್‌ನವರು ಕೆಜಿಎಫ್ ಚಾಪ್ಟರ್ 2 ಸಿನಿಮಾದ ಸ್ಯಾಟ್‌ಲೈಟ್ ಹಕ್ಕು ಖರೀದಿ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಹಕ್ಕು ಕೊಂಡುಕೊಂಡಿದ್ದಾರೆ. ನಾಲ್ಕು ಭಾಷೆಯ ಸ್ಯಾಟ್‌ಲೈಟ್ ಹಕ್ಕು ಎಷ್ಟು ಬೆಲೆಗೆ ಮಾರಾಟ ಆಗಿದೆ ಎನ್ನುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇನ್ನು ಹಿಂದಿಯಲ್ಲಿ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ವಿತರಣೆ ಹಕ್ಕು ಪಡೆದಿದ್ದು, ಬಹುಶಃ ಸ್ಯಾಟ್‌ಲೈಟ್ ಹಕ್ಕು ಸಹ ಅವರೇ ಮಾರಾಟ ಮಾಡಲಿದ್ದಾರೆ. ಸದ್ಯಕ್ಕೆ ಹಿಂದಿಯ ಟಿವಿ ಹಕ್ಕು ಯಾರ ಪಾಲಾಗಿದೆ ಎನ್ನುವುದು ತಿಳಿದಿಲ್ಲ.

  Big Buzz: ಕೆಜಿಎಫ್ ಚಾಪ್ಟರ್ 2 ಹಿಂದಿ ಹಕ್ಕು ದಾಖಲೆ ಬೆಲೆಗೆ ಸೇಲ್?Big Buzz: ಕೆಜಿಎಫ್ ಚಾಪ್ಟರ್ 2 ಹಿಂದಿ ಹಕ್ಕು ದಾಖಲೆ ಬೆಲೆಗೆ ಸೇಲ್?

  ಡಿಜಿಟಲ್ ಹಕ್ಕಿಗೆ ಪೈಪೋಟಿ?

  ಡಿಜಿಟಲ್ ಹಕ್ಕಿಗೆ ಪೈಪೋಟಿ?

  ಸ್ಯಾಟ್‌ಲೈಟ್ ಹಕ್ಕು ಸೇಲ್ ಆದ ಬೆನ್ನಲ್ಲೆ ಡಿಜಿಟಲ್ ಪ್ರಸಾರದ ಹಕ್ಕು ಯಾರು ಖರೀದಿ ಮಾಡಲಿದ್ದಾರೆ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ. ಸ್ಯಾಟ್‌ಲೈಟ್ ಹಕ್ಕನ್ನು ಜೀ ಸಂಸ್ಥೆ ಖರೀದಿ ಮಾಡಿರುವುದನ್ನು ನೋಡಿದ್ರೆ, ಡಿಜಿಟಲ್ ಹಕ್ಕನ್ನು ಸಹ ಜೀ5 ಕೊಂಡುಕೊಳ್ಳಬಹುದು ಎಂಬ ನಿರೀಕ್ಷೆ ಇದೆ. ಆದರೆ, ಕಳೆದ ಬಾರಿ ಅಮೇಜಾನ್ ಪ್ರೈಮ್ ಕೆಜಿಎಫ್ ಚಾಪ್ಟರ್ 1 ಹಕ್ಕು ಖರೀದಿಸಿ ದಾಖಲೆಯ ಬಿಸಿನೆಸ್ ಮಾಡಿತ್ತು. ಆ ನಿಟ್ಟಿನಲ್ಲಿ ನೋಡಿದ್ರೆ ಈ ಸಲವೂ ಕೆಜಿಎಫ್ ಚಾಪ್ಟರ್ 2 ಡಿಜಿಟಲ್ ಹಕ್ಕಿಗೆ ಅಮೇಜಾನ್ ಪ್ರೈಮ್ ಮೊದಲ ಆದ್ಯತೆ ಎನಿಸುತ್ತಿದೆ.

  ಆಡಿಯೋ ಲಹರಿ ಪಾಲು

  ಆಡಿಯೋ ಲಹರಿ ಪಾಲು

  ಕೆಜಿಎಫ್ ಸಿನಿಮಾ ಐದು ಭಾಷೆಯ ಆಡಿಯೋ ಹಕ್ಕು ಲಹರಿ ವೇಲು ಅವರ ಲಹರಿ ಸಂಸ್ಥೆ ಖರೀದಿ ಮಾಡಿದೆ. ದುಬಾರಿ ಬೆಲೆಗೆ ಆಡಿಯೋ ಹಕ್ಕು ಕೊಂಡುಕೊಂಡಿದೆ ಎನ್ನಲಾಗಿದೆ. ಆದರೆ ನಿಖರವಾದ ಬೆಲೆ ಎಷ್ಟು ಎಂದು ಬಹಿರಂಗವಾಗಿಲ್ಲ. ರವಿಬಸ್ರೂರು ಸಂಗೀತವಿದ್ದು, ಚಾಪ್ಟರ್ 1ರಲ್ಲಿ ಸಖತ್ ಆಗಿರುವ ಹಾಡುಗಳು ಮತ್ತು ಪವರ್‌ಫುಲ್ ಹಿನ್ನೆಲೆ ಸಂಗೀತ ನೀಡಿದ್ದರು. ಹಾಗಾಗಿ, ಚಾಪ್ಟರ್ 2 ಹಾಡು ಮತ್ತು ಮ್ಯೂಸಿಕ್ ಮೇಲೆ ಹೆಚ್ಚು ಭವರಸೆ ಇದೆ.

  ಬಿಡುಗಡೆ ಬಗ್ಗೆ ಸ್ಪಷ್ಟತೆ ಇಲ್ಲ

  ಬಿಡುಗಡೆ ಬಗ್ಗೆ ಸ್ಪಷ್ಟತೆ ಇಲ್ಲ

  ಜುಲೈ 16 ರಂದು ಆಗಲಿಲ್ಲ. ಈಗ ಡಿಸೆಂಬರ್ ತಿಂಗಳಲ್ಲಿ ಕೆಜಿಎಫ್ ಬಿಡುಗಡೆಗೆ ಚಿತ್ರತಂಡ ಲೆಕ್ಕಾಚಾರ ಹಾಕಿದೆಯಂತೆ. ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಅನುಮತಿ ಕೊಡುತ್ತಿದ್ದಂತೆ ಅಧಿಕೃತವಾಗಿ ರಿಲೀಸ್ ದಿನಾಂಕ ಪ್ರಕಟಿಸಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ದಸರಾ, ದೀಪಾವಳಿ, ಕ್ರಿಸ್‌ಮಸ್, ಸಂಕ್ರಾಂತಿ ಹಬ್ಬಕ್ಕೆ ಭಾರತೀಯ ಪ್ರಮುಖ ಸಿನಿಮಾಗಳು ದಿನಾಂಕ್ ಲಾಕ್ ಮಾಡಿಕೊಂಡಿದೆ. ಈ ಮಧ್ಯೆ ಕ್ರಿಸ್‌ಮಸ್ ಪ್ರಯುಕ್ತ ಕೆಜಿಎಫ್ ಬರಬಹುದು ಎಂದು ಹೇಳಲಾಗುತ್ತಿದೆ. ಅದೇ ದಿನ ಅಲ್ಲು ಅರ್ಜುನ್ ನಟನೆಯ 'ಪುಷ್ಪ ಭಾಗ 1' ಮತ್ತು ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ತೆರೆಗೆ ಬರಲಿದೆ.

  ಸಂಜಯ್ ದತ್, ಪ್ರಕಾಶ್ ರಾಜ್ ಎಂಟ್ರಿ

  ಸಂಜಯ್ ದತ್, ಪ್ರಕಾಶ್ ರಾಜ್ ಎಂಟ್ರಿ

  ಸಂಪೂರ್ಣವಾಗಿ ಶೂಟಿಂಗ್ ಮುಗಿಸಿರುವ ಕೆಜಿಎಫ್ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಸಹ ಮುಗಿಸಿದೆ ಎಂದು ತಿಳಿದು ಬಂದಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಾಪ್ಟರ್ 1ಕ್ಕಿಂತ ಚಾಪ್ಟರ್ 2 ಹೆಚ್ಚು ನಿರೀಕ್ಷೆ ಮೂಡಿಸಿದೆ. ಮೊದಲ ಭಾಗದಲ್ಲಿದ್ದ ಅನಂತ್ ನಾಗ್ ಎರಡನೇ ಭಾಗದಲ್ಲಿ ಇರಲ್ಲ. ಸಂಜಯ್ ದತ್, ಪ್ರಕಾಶ್ ರಾಜ್ ಮತ್ತು ರವೀನಾ ಟಂಡನ್ ಎಂಟ್ರಿಯಾಗಿದೆ. ಯಶ್ ಜೊತೆ ಶ್ರೀನಿಧಿ ಶೆಟ್ಟಿ, ರಾವ್ ರಮೇಶ್, ಮಾಳವಿಕಾ ಸೇರಿದಂತೆ ಹಲವರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‌ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿದ್ದಾರೆ.

  English summary
  Indian Most expected movie KGF Chapter 2 South Languages Satellite Rights Sold to Zee.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X