ಕೆಜಿಎಫ್ 2: ಮುಂಬೈ, ಪೂಣೆ, ಚೆನ್ನೈನಲ್ಲಿ ಥಿಯೇಟರ್‌ನಲ್ಲಿ ಮುಂದುವರೆದ ಯಶಸ್ವಿ ಪ್ರದರ್ಶನ!

'ಕೆಜಿಎಫ್' ಸಿನಿಮಾ ಕನ್ನಡದ ಹೆಮ್ಮೆಯ ಸಿನಿಮಾ ಎಂದು ಎಲ್ಲರೂ ಹೇಳುತ್ತಿದ್ದಾರೆ. ಪ್ಯಾನ್ ಇಂಡಿಯಾ ತೆರೆಕಂಡು, ಸಾವಿರಾರು ಕೋಟಿ ಗಳಿಸಿ, ಕನ್ನಡದ ಸಿನಿಮಾಗೆ ಇರುವ ತಾಕತ್ತು ಎಂಥದ್ದು ಎನ್ನುವುದನ್ನು ತೋರಿಸಿದ ಸಿನಿಮಾ ಇದು. 'ಕೆಜಿಎಫ್ 2' ಸಿನಿಮಾದ ದಾಖಲೆಗಳ ಸಂಖ್ಯೆಯೂ ಹೆಚ್ಚಿದೆ.

'ಕೆಜಿಎಫ್ 2' ಸಿನಿಮಾದ ದಾಖಲೆಯ ಸುರಿಮಳೆ ಮತ್ತೆ ಮುಂದುವರೆದಿದೆ. ಕೆಜಿಎಫ್ ಸಿನಿಮಾದ ಒಟ್ಟಾರೆ ಗಳಿಕೆ ಎಷ್ಟು ಎನ್ನುವ ಲೆಕ್ಕಚಾರ ಈಗಾಗಲೇ ಹೊರ ಬಿದ್ದಿದೆ. ಆದರೆ ಈ ಸಿನಿಮಾ ಇನ್ನೂ ಕೂಡ ದಾಖಲೆಯನ್ನು ಮುಂದುವರೆಸಿದೆ.

'ಕೆಜಿಎಫ್ 2' ಸಿನಿಮಾ ಇನ್ನೂ ಚಿತ್ರಮಂದಿರದಲ್ಲಿ ಇದೆ. ಇನ್ನೂ ಕೂಡ ಈ ಚಿತ್ರದ ಬಾಕ್ಸಾಫಿಸ್ ಗಳಿಕೆ ಸಣ್ಣ ಮಟ್ಟದಲ್ಲೇ ಹೆಚ್ಚಾಗುತ್ತಿದ್ದೆ. ಅರೆ, 'ಕೆಜಿಎಫ್ 2' ಒಟಿಟಿಗೂ ಬಂದ ಬಳಿಕ ಈಗ ಯಾರಪ್ಪಾ ಚಿತ್ರಮಂದಿರದಲ್ಲಿ ಸಿನಿಮಾ ನೋಡ್ತಾರೆ ಅಂದು ಕೊಂಡಿರಾ. ಮುಂದೆ ಓದಿ....

100 ಡೇಸ್ ಮೇಲೆ 'ಕೆಜಿಎಫ್ 2' ಕಣ್ಣು!

100 ಡೇಸ್ ಮೇಲೆ 'ಕೆಜಿಎಫ್ 2' ಕಣ್ಣು!

'ಕೆಜಿಎಫ್ 2' ರಿಲೀಸ್ ಆಗಿ ಹಲವು ದಿನಗಳು ಕಳೆದಿವೆ. ಆದರೂ ಕೂಡ ಹಲವೆಡೆ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ. 'ಕೆಜಿಎಫ್ 2' ರಿಲೀಸ್ ಆಗಿ ಎರಡೂವರೆ ತಿಂಗಳು ಕಳೆಯುತ್ತಾ ಬಂದಿದೆ. ಏಪ್ರಿಲ್ 14ಕ್ಕೆ ಕೆಜಿಎಫ್-2 ಭರ್ಜರಿಯಾಗಿ ರಿಲೀಸ್ ಆಗಿತ್ತು. ರಿಲೀಸ್ ಬಳಿಕ ಕೆಜಿಎಫ್ ಸಾಲು ಸಾಲು ದಾಖಲೆಗಳನ್ನು ಬರೆದು ಬಿಟ್ಟಿದೆ. ಇನ್ನೇನಿದ್ದರೂ ಸಿನಿಮಾ 100 ಡೇಸ್ ಎನ್ನುವ ಟೈಟಲ್ ಪಡೆದುಕೊಳ್ಳಬೇಕಿದೆ ಅಷ್ಟೇ. ಆದರೆ ಸಿನಿಮಾ ಒಟಿಟಿಗೆ ಬಂದಮೇಲೆ ಚಿತ್ರಮಂದಿರಗಳಿಂದ ಎತ್ತಂಗಡಿಯಾಗಿದೆ ಎನ್ನಲಾಗಿದೆ. ಆದರೆ 'ಕೆಜಿಎಫ್ 2' ಇನ್ನು ಕೂಡ ಪ್ರದರ್ಶನ ಕಾಣುತ್ತಲೇ ಇದೆ.

ಮುಂಬೈ, ಚೆನ್ನೈ, ಪೂಣೆಯಲ್ಲಿ 'ಕೆಜಿಎಫ್ 2'!

ಮುಂಬೈ, ಚೆನ್ನೈ, ಪೂಣೆಯಲ್ಲಿ 'ಕೆಜಿಎಫ್ 2'!

ಹೌದು 'ಕೆಜಿಎಫ್ 2' ಇನ್ನು ಪ್ರದರ್ಶನ ಕಾಣುತ್ತಿದೆ. ಆದರೆ ಬೆಂಗಳೂರಿನಲ್ಲಿ ಅಲ್ಲ. ಬದಲಿಗೆ ಮುಂಬೈ, ಚೆನ್ನೈ ಮತ್ತು ಪುಣೆಯಲ್ಲಿ 'ಕೆಜಿಎಫ್ 2' ಸಿನಿಮಾ ಪ್ರದರ್ಶನವಾಗುತ್ತಿದೆ. 'ಕೆಜಿಎಫ್ 2' ಸಿನಿಮಾ 50 ದಿನಗಳನ್ನು ಪೂರೈಸಿದ ಬಳಿಕ ಒಟಿಟಿಯಲ್ಲಿ ರಿಲೀಸ್ ಆಗಿದೆ. ಇಲ್ಲಿ ಸಿನಿಮಾ ನೋಡಿದರೂ ಕೂಡ ಸಿನಿಮಾ ಮಂದಿರಕ್ಕೆ ಹೋಗಿಯೇ ಜನ 'ಕೆಜಿಎಫ್ 2' ಸಿನಿಮಾ ನೋಡ್ತಿದ್ದಾರೆ. ಮುಂಬೈ, ಚೆನ್ನೈ, ಫುಣೆಯಲ್ಲಿ 'ಕೆಜಿಎಫ್ 2' ಸಿನಿಮಾ ಪ್ರದರ್ಶನ ಮುಂದುವರಿದಿದೆ.

ಬೇಡಿಕೆ ಇರುವ ಕಡೆ 'ಕೆಜಿಎಫ್ 2'!

ಬೇಡಿಕೆ ಇರುವ ಕಡೆ 'ಕೆಜಿಎಫ್ 2'!

ಸಿನಿಮಾಗೆ ಬೇಡಿಕೆ ಇದ್ದರೆ ಮಾತ್ರವೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಬೇಡಿಕೆ ಇರುವ ಕಡೆ ಇನ್ನು ಕೂಡ 'ಕೆಜಿಎಫ್ 2' ಸಿನಿಮಾ ಪ್ರದರ್ಶನವಾಗುತ್ತಿದೆ. ಹಾಗೆ ಚಿತ್ರದ ಟಿಕೆಟ್ ಬುಕ್ಕಿಂಗ್ ಕೂಡ ನಿಯಮಿತವಾಗಿ ಮುಂದುವರೆದಿದೆ. ಈ ಮೂಲಕ 'ಕೆಜಿಎಫ್ 2' ಚಿತ್ರದ ಗಳಿಕೆಗೆ ಈಗ ಪ್ರದರ್ಶನಗೊಳ್ಳುತ್ತಿರುವ ಶೋಗಳು ಕೂಡ ಕೊಡುಗೆ ನೀಡಬಹುದು. ಇನ್ನು 30 ದಿನಗಳಲ್ಲಿ 'ಕೆಜಿಎಫ್ 2' ರಿಲೀಸ್ ಆಗಿ 100 ದಿನಗಳನ್ನು ಪೂರೈಸಲಿದೆ. ಆ 100 ದಿನಗಳು ಎಲ್ಲಿ, ಯಾವ ಚಿತ್ರಮಂದಿರದಲ್ಲಿ ಪೂರೈಸಲಿದೆ ಎನ್ನುವುದು ಕಾದುನೋಡಬೇಕಿದೆ. ಹಾಗೊಂದು ವೇಳೆ ಯಾವುದೋ ಒಂದು ಚಿತ್ರಮಂದಿರದಲ್ಲಿ 'ಕೆಜಿಎಫ್ 2' 100 ದಿನ ಪ್ರದರ್ಶನ ಕಂಡಿದ್ದೆ ಆದರೆ, 'ಕೆಜಿಎಫ್ 2' 100 ಡೇಸ್ ದಾಖಲೆಯನ್ನೂ ಮಾಡಿದಂತೆ.

'ಕೆಜಿಎಫ್ 2' ಒಟ್ಟಾರೆ ಗಳಿಕೆ!

'ಕೆಜಿಎಫ್ 2' ಒಟ್ಟಾರೆ ಗಳಿಕೆ!

'ಕೆಜಿಎಫ್ 2' ಸಿನಿಮಾ ಹಿಂದಿಯಲ್ಲಿ 434 ಕೋಟಿ ಗಳಿಕೆ ಕಂಡಿದೆ. ಇನ್ನು ಒಟ್ಟಾರೆ ಗಳಿಕೆ 1250 ಕೋಟಿ ರೂ.ಗಿಂತಲು ಅಧಿಕ ಎಂದು ಹೇಳಲಾಗಿದೆ. ಈ ಲೆಕ್ಕಚಾರಕ್ಕೆ ಒಂದು ರೂಪಾಯಿ ಸೇರಿದರು ಕೂಡ ಒಟ್ಟಾರೆ ಗಳಿಕೆಯ ಲೆಕ್ಕ ಹೆಚ್ಚಾಗುತ್ತದೆ. ಹಾಗಾಗಿ 'ಕೆಜಿಎಫ್ 2' ಒಟ್ಟಾರೆ ಬಾಕ್ಸಾಫೀಸ್ ಗಳಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

More from Filmibeat

English summary
KGF Chapter 2 Still Running In Mumbai, Chennai, Pune Theaters After Collecting 1250 Crore rs, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X