ಕೆಜಿಎಫ್ 2 ಟೀಸರ್‌ ವಿಶ್ವದಾಖಲೆ: ಧೂಳಿಪಟವಾದ 'ಮಾಸ್ಟರ್', 'ಅವೇಂಜರ್ಸ್'

ಕೆಜಿಎಫ್ 2 ಟೀಸರ್ ನಿನ್ನೆಯಷ್ಟೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ. ಬಹುನಿರೀಕ್ಷಿತ ಈ ಸಿನಿಮಾದ ಟೀಸರ್‌ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ದೂಳೆಬ್ಬಿಸಿದೆ.

Recommended Video

ಏನೇ ಖತರ್ನಾಕ್ ಕೆಲಸ ಮಾಡಿದ್ರು KGF ಓಟ ತಡೆಯೋಕೆ ಆಗ್ಲಿಲ್ಲ | Filmibeat Kannada

ಕೆಲವು ಕಿಡಿಗೇಡಿಗಳು ಟೀಸರ್ ಅನ್ನು ಲೀಕ್ ಮಾಡಿದ್ದರೂ ಸಹ ಯೂಟ್ಯೂಬ್‌ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದ ಟೀಸರ್ ದಾಖಲೆಗಳನ್ನು ಬರೆಯುತ್ತಾ ಮುಂದೆ ಹೋಗುತ್ತಿದೆ. ವಿಶೇಷವೆಂದರೆ ಕೆಜಿಎಫ್ 2 ಸಿನಿಮಾದ ಟೀಸರ್ ವಿಶ್ವದಾಖಲೆಯೊಂದನ್ನು ನಿರ್ಮಿಸಿದೆ.

ಅತ್ಯಂತ ಕಡಿಮೆ ಅವಧಿಯಲ್ಲಿ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ವಿಶ್ವದ ಮೊದಲ ಟೀಸರ್ ಎಂಬ ಹೆಗ್ಗಳಿಕೆಯನ್ನು ಕೆಜಿಎಫ್ 2 ಸಿನಿಮಾದ ಟೀಸರ್ ಪಡೆದುಕೊಂಡಿದೆ. ಹಾಲಿವುಡ್‌ ಸಿನಿಮಾಗಳನ್ನೇ ಹಿಂದಿಕ್ಕಿದೆ 'ಕೆಜಿಎಫ್2' ಸಿನಿಮಾ.

ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಟೀಸರ್

ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಟೀಸರ್

ನಿನ್ನೆ (ಜನವರಿ 07) ರಾತ್ರಿ 9:30 ಕ್ಕೆ ಬಿಡುಗಡೆಯಾದ ಟೀಸರ್, ಜನವರಿ 08 ರ ಬೆಳಿಗ್ಗೆ 10 ಗಂಟೆ ವೇಳೆಗೆ ಕೇವಲ 11:30 ಗಂಟೆಯಲ್ಲಿ 2.3 ಮಿಲಿಯನ್ ಅಂದರೆ 23 ಲಕ್ಷ ಲೈಕ್ಸ್ ಪಡೆದುಕೊಂಡಿದೆ. ಇನ್ನಾವ ಸಿನಿಮಾದ ಟೀಸರ್ ಸಹ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೋಂದು ಲೈಕ್ಸ್‌ಗಳನ್ನು ಪಡೆದುಕೊಂಡಿಲ್ಲ.

ಮಾಸ್ಟರ್ ಸಿನಿಮಾ ಸಹ ದಾಖಲೆ ಬರೆದಿತ್ತು

ಮಾಸ್ಟರ್ ಸಿನಿಮಾ ಸಹ ದಾಖಲೆ ಬರೆದಿತ್ತು

ವಿಜಯ್ ನಟನೆಯ 'ಮಾಸ್ಟರ್' ಸಿನಿಮಾದ ಟೀಸರ್ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಅದು 16 ಗಂಟೆಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿತ್ತು. ಆ ದಾಖಲೆಯನ್ನು ಅಳಿಸಿ ಹಾಕಿದೆ ಕೆಜಿಎಫ್ 2 ಸಿನಿಮಾದ ಟೀಸರ್. ನವೆಂಬರ್ 14 ರಂದು ಬಿಡುಗಡೆ ಆದ ಮಾಸ್ಟರ್ ಟೀಸರ್ ಈವರೆಗೆ ಪಡೆದಿರುವುದು 26 ಲಕ್ಷ ಲೈಕ್ಸ್.

ಅವೆಂಜರ್ಸ್ ಎಂಡ ಗೇಮ್ ಹೆಸರಿನಲ್ಲಿದೆ ವಿಶ್ವದಾಖಲೆ

ಅವೆಂಜರ್ಸ್ ಎಂಡ ಗೇಮ್ ಹೆಸರಿನಲ್ಲಿದೆ ವಿಶ್ವದಾಖಲೆ

ವಿಶ್ವದಲ್ಲೇ ಅತಿ ಹೆಚ್ಚು ಲೈಕ್ಸ್ ಪಡೆದ ಸಿನಿಮಾ ಟೀಸರ್ ಎಂಬ ಹೆಗ್ಗಳಿಕೆ ಇರುವುದು ಬಾಲಿವುಡ್‌ನ 'ದಿಲ್ ಬೇಚಾರ' ಸಿನಿಮಾದ ಬಳಿ. ನ 'ಅವೇಂಜರ್ಸ್; ದಿ ಎಂಡ್ ಗೇಮ್' ಸಿನಿಮಾಕ್ಕೆ. 2018 ರ ಡಿಸೆಂಬರ್ 07ರಂದು ಬಿಡುಗಡೆ ಆದ ಈ ಸಿನಿಮಾದ ಟೀಸರ್ ಈ ವರೆಗೆ 32 ಲಕ್ಷ ಲೈಕ್ಸ್ ಪಡೆದಿದೆ. ಆದರೆ ಈ ದಾಖಲೆಯನ್ನು ಮುರಿಯಲು ಕೆಜಿಎಫ್ 2 ಬೇಕಿರುವುದು ಒಂಬತ್ತು ಲಕ್ಷ ಲೈಕ್ಸ್ ಅಷ್ಟೆ.

ದಿಲ್ ಬೇಚಾರ ಸಿನಿಮಾದ ವಿಶ್ವದಾಖಲೆ

ದಿಲ್ ಬೇಚಾರ ಸಿನಿಮಾದ ವಿಶ್ವದಾಖಲೆ

ಬಾಲಿವುಡ್ ನ 'ದಿಲ್ ಬೆಚಾರ' ಸಿನಿಮಾದ ಹೆಸರಿನಲ್ಲಿ ಸಹ ದಾಖಲೆ ಇದೆ. ವಿಶ್ವದಲ್ಲೇ ಅತಿ ಹೆಚ್ಚು ಲೈಕ್ಸ್ ಪಡೆದ ಸಿನಿಮಾ 'ದಿಲ್ ಬೇಚಾರ' ಈ ಸಿನಿಮಾದ ಟ್ರೇಲರ್‌ ಗೆ ಬರೋಬ್ಬರಿ 53 ಲಕ್ಷ ಲೈಕ್ಸ್ ದೊರೆತಿದೆ. ಆದರೆ ದಿಲ್ ಬೆಚಾರಾ ಸಿನಿಮಾದ್ದು ಟ್ರೇಲರ್, ಟೀಸರ್ ಅಲ್ಲ.

More from Filmibeat

English summary
KGF Chapter 2 Teaser Becomes World’s First movie teaser to have 2 Million Likes in very less time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X