ಬಾಹುಬಲಿ ದಾಖಲೆ ಮುರಿದ ರಾಕಿ ಭಾಯ್ ಕೆಜಿಎಫ್ ಚಾಪ್ಟರ್ 2

ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಮೂಡಿಬರುತ್ತಿರುವ ಕೆಜಿಎಫ್ ಚಾಪ್ಟರ್ 2 ಟೀಸರ್ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ದಕ್ಷಿಣ ಭಾರತದ ಪಾಲಿಗೆ ಯ್ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿರುವ ಟೀಸರ್ ಅಥವಾ ಟ್ರೈಲರ್ ಕೆಜಿಎಫ್ ಎನಿಸಿಕೊಂಡಿದೆ.

ಸೌತ್ ಇಂಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಎಂಬ ದಾಖಲೆ ಬರೆದಿದ್ದು ಬಾಹುಬಲಿ. ಈ ಪಟ್ಟಿಯಲ್ಲಿ ಬಾಹುಬಲಿ ಮೊದಲ ಸ್ಥಾನದಲ್ಲಿತ್ತು. ಬಾಹುಬಲಿ ತೆಲುಗು ಟ್ರೈಲರ್ 64 ಮಿಲಿಯನ್ (64,121,750) ವೀಕ್ಷಣೆ ಕಂಡಿದೆ. ಆದ್ರೀಗ, ಕೆಜಿಎಫ್ ಟೀಸರ್ 2 ಟೀಸರ್ 133 ಮಿಲಿಯನ್ (133,748,761) ವೀಕ್ಷಣೆ ಕಂಡಿದೆ.

ಭಾರತೀಯ ಚಿತ್ರರಂಗದಲ್ಲೂ ಕೆಜಿಎಫ್ ಟೀಸರ್ ಇತಿಹಾಸ ಸೃಷ್ಟಿಸಿದೆ. ಅತಿ ಹೆಚ್ಚು ವೀಕ್ಷಣೆ ಕಂಡ ಭಾರತದ ಮೊದಲ ಟೀಸರ್ ಅಥವಾ ಟ್ರೈಲರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

KGF Chapter 2 Teaser Breaks Baahubali 2 Records

ಭಾರತದಲ್ಲಿ ಇದುವರೆಗೂ ಬಾಹುಬಲಿ 2 ಹಿಂದಿ ವರ್ಷನ್ ಟ್ರೈಲರ್ ಹೆಚ್ಚು ವೀಕ್ಷಣೆ ಕಂಡಿತ್ತು. ಬಾಹುಬಲಿ ಹಿಂದಿ ಟ್ರೈಲರ್ 118 ಮಿಲಿಯನ್ (118,160,358) ವೀಕ್ಷಣೆ ಕಂಡಿದೆ. ಈ ರೆಕಾರ್ಡ್ ಬ್ರೇಕ್ ಮಾಡಿರುವ ಕೆಜಿಎಫ್ ಟೀಸರ್ 133 ಮಿಲಿಯನ್ ವೀಕ್ಷಣೆ ಕಂಡಿದೆ.

ಯ್ಯೂಟ್ಯೂಬ್ ಪಾಲಿಗೆ ಭಾರತದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಟೀಸರ್ ಎಂಬ ದಾಖಲೆ ಈಗ ಕೆಜಿಎಫ್ ಟೀಸರ್ ಹೆಸರಿನಲ್ಲಿದೆ. ಈ ದಾಖಲೆ ಮುರಿಯುವುದು ಯಾವ ಚಿತ್ರ ಲೆಕ್ಕಾಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

More from Filmibeat

English summary
Yash Starrer KGF Chapter 2 movie teaser breaks SS Rajamouli's Baahubali-2 trailer records.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X