For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ಹೊಸ ದಾಖಲೆ: ಭಾರತೀಯ ಚಿತ್ರರಂಗದಲ್ಲೇ ಇದು ಮೊದಲು

  |

  ಭಾರತೀಯ ಸಿನಿಮಾರಂಗದಲ್ಲಿ ಅತಿ ಹೆಚ್ಚು ಜನರು ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ ಕೆಜಿಎಫ್ ಚಾಪ್ಟರ್ 2. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜುಲೈ 16 ರಂದು ಕೆಜಿಎಫ್ ಸೀಕ್ವೆಲ್ ತೆರೆಗೆ ಬರಬೇಕಿದೆ. ಸದ್ಯ ಕೋವಿಡ್ ಪರಿಸ್ಥಿತಿ ಗಮನಿಸಿದರೆ ನಿಗದಿಯಂತೆ ಚಿತ್ರಮಂದಿರಕ್ಕೆ ಬರುವುದು ಕಷ್ಟ.

  ಮತ್ತೊಂದು ಹೊಸ ದಾಖಲೆ ಬರೆದು ಭಾರತದಲ್ಲೇ No 1 ಆದ KGF 2 | Filmibeat Kannada

  ಈ ನಡುವೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಹೆಸರಿಗೆ ವಿಶೇಷವಾದ ಮತ್ತು ಅಪರೂಪದ ದಾಖಲೆಯೊಂದು ಸೇರಿಕೊಂಡಿದೆ. ಯ್ಯೂಟ್ಯೂಬ್‌ನಲ್ಲಿ ಕೆಜಿಎಫ್ 2 ಟೀಸರ್ ಹೊಸ ರೆಕಾರ್ಡ್ ಬರೆದಿದೆ. ಬಹುಶಃ ಭಾರತೀಯ ಚಿತ್ರರಂಗದಲ್ಲಿ ಇಂತಹ ದಾಖಲೆ ಬೇರೆ ಯಾವ ಸಿನಿಮಾನೂ ಮಾಡಿಲ್ಲ ಎಂದು ಹೇಳಲಾಗಿದೆ. ಅಷ್ಟಕ್ಕೂ, ಕೆಜಿಎಫ್ ಹುಟ್ಟುಹಾಕಿರುವ ಹೊಸ ದಾಖಲೆ ಯಾವುದು? ಮುಂದೆ ಓದಿ...

  ಇನಾಯತ್ ಖಲೀಲ್ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಪ್ರಶಾಂತ್ ನೀಲ್ಇನಾಯತ್ ಖಲೀಲ್ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಪ್ರಶಾಂತ್ ನೀಲ್

  ಕೆಜಿಎಫ್ ಟೀಸರ್‌ಗೆ 1M ಕಾಮೆಂಟ್ಸ್

  ಕೆಜಿಎಫ್ ಟೀಸರ್‌ಗೆ 1M ಕಾಮೆಂಟ್ಸ್

  ಯಶ್ ಹುಟ್ಟುಹಬ್ಬದ ಪ್ರಯುಕ್ತ ಹೊಂಬಾಳೆ ಫಿಲಂಸ್ ಯ್ಯೂಟ್ಯೂಬ್ ಚಾನಲ್‌ನಲ್ಲಿ ಕೆಜಿಎಫ್ ಚಾಪ್ಟರ್ 2 ಟೀಸರ್ ತೆರೆಕಂಡಿತ್ತು. ಇದುವರೆಗೂ ಈ ಟೀಸರ್‌ಗೆ ಒಂದು ಮಿಲಿಯನ್ (10 ಲಕ್ಷ - 10,07,501) ಕಾಮೆಂಟ್ಸ್ ಬಂದಿದೆ. ಕೆಜಿಎಫ್ ದಾಖಲೆ ಬೆನ್ನಲ್ಲೆ ''1M COMMENTS FOR KGF2 TEASER" ಹ್ಯಾಷ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ. ಇದುವರೆಗೂ ಭಾರತದ ಯಾವ ಟೀಸರ್‌ಗೂ ಇಷ್ಟು ಕಾಮೆಂಟ್ಸ್ ಬಂದಿಲ್ಲ.

  ಸಡಕ್ ಟ್ರೈಲರ್‌ಗೆ 1.1M ಕಾಮೆಂಟ್ಸ್

  ಸಡಕ್ ಟ್ರೈಲರ್‌ಗೆ 1.1M ಕಾಮೆಂಟ್ಸ್

  ಮಹೇಶ್ ಭಟ್ ನಿರ್ದೇಶಿಸಿದ್ದ ಸಡಕ್ 2 ಚಿತ್ರದ ಟ್ರೈಲರ್‌ಗೆ 1.1 ಮಿಲಿಯನ್ (11.2 ಲಕ್ಷ - 11,26,138) ಕಾಮೆಂಟ್ಸ್ ಬಂದಿದೆ. ಇದು ಟ್ರೈಲರ್, ಕೆಜಿಎಫ್ ಸಿನಿಮಾದ ಟೀಸರ್. ಹಾಗಾಗಿ, ಟೀಸರ್ ವಿಚಾರಕ್ಕೆ ಬಂದ್ರೆ ಕೆಜಿಎಫ್ ಮೊದಲ ಸ್ಥಾನದಲ್ಲಿದೆ. ಸುಶಾಂತ್ ಸಿಂಗ್ ಸಾವಿನ ಬಳಿಕ ತೆರೆಕಂಡಿದ್ದ ಈ ಚಿತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಬಹುತೇಕ ಕಾಮೆಂಟ್ ವಿರೋಧವಾಗಿಯೇ ಇದೆ.

  ರಾವ್ ರಮೇಶ್ ಪಾತ್ರದಿಂದ ಕೆಜಿಎಫ್ ಚಾಪ್ಟರ್ 2 ಕಥೆಗೆ ಟ್ವಿಸ್ಟ್ರಾವ್ ರಮೇಶ್ ಪಾತ್ರದಿಂದ ಕೆಜಿಎಫ್ ಚಾಪ್ಟರ್ 2 ಕಥೆಗೆ ಟ್ವಿಸ್ಟ್

  ಟೀಸರ್ ವೀಕ್ಷಣೆ ಎಷ್ಟಿದೆ?

  ಟೀಸರ್ ವೀಕ್ಷಣೆ ಎಷ್ಟಿದೆ?

  ಕೆಜಿಎಫ್ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಕಾಣಲಿದೆ. ಆದರೆ, ಟೀಸರ್ ಮಾತ್ರ ಯೂನಿವರ್ಸಲ್ ಆಗಿ ಒಂದೇ ಭಾಷೆಯಲ್ಲಿ ರಿಲೀಸ್ ಆಗಿತ್ತು. ಇದುವರೆಗು ಕೆಜಿಎಫ್ ಟೀಸರ್ 188 ಮಿಲಿಯನ್ (18 ಕೋಟಿ) ವೀಕ್ಷಣೆಯಾಗಿದೆ. 8.3 ಮಿಲಿಯನ್ ಲೈಕ್ಸ್ ಇದೆ.

  ಪ್ರಶಾಂತ್ ನೀಲ್-ಯಶ್ ಕಾಂಬಿನೇಷನ್

  ಪ್ರಶಾಂತ್ ನೀಲ್-ಯಶ್ ಕಾಂಬಿನೇಷನ್

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2ರಲ್ಲಿ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ರಾವ್ ರಮೇಶ್, ವಸಿಷ್ಠ ಸಿಂಹ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ.

  English summary
  Kannada Movie Kgf chapter 2 teaser creates new record in indian cinema. teaser received 1 million Comments in Youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X