'KGF-2' ಸಿನಿಮಾದ ಬಿಗ್ ಅಪ್ ಡೇಟ್: ಟೀಸರ್ ಬಿಡುಗಡೆಗೆ ಡೇಟ್ ಫಿಕ್ಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾ ಕೊನೆಯ ಹಂತದ ಚಿತ್ರೀಕರಣದಲ್ಲಿ ನಿರತವಾಗಿದೆ. ಲಾಕ್ ಡೌನ್ ಬಳಿಕ ಚಿತ್ರೀಕರಣ ಪ್ರಾರಂಭ ಮಾಡಿರುವ ಸಿನಿಮಾತಂಡ ಉಡುಪಿ, ಬೆಂಗಳೂರು ಚಿತ್ರೀಕರಣ ಮುಗಿಸಿ ಇದೀಗ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ.

ರಾಕಿ ಭಾಯ್ ಯಶ್ ಮತ್ತು ಅಧಿರಾ ಸಂಜಯ್ ದತ್ ನಡುವಿನ ಆಕ್ಷನ್ ದೃಶ್ಯ ಭಾಕಿ ಇದ್ದು, ಚಿತ್ರತಂಡ ಹೈದರಾಬಾದ್ ನಲ್ಲಿ ಸೆರೆ ಹಿಡಿಯುತ್ತಿದೆ. ಸಂಜಯ್ ದತ್ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಡೀ ಭಾರತೀಯ ಸಿನಿಮಾರಂಗವೇ ಕಾತರದಿಂದ ಕಾಯುತ್ತಿರುವ 'ಕೆಜಿಎಫ್-2' ಸಿನಿಮಾದ ಟೀಸರ್ ಯಶ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗುತ್ತಿದೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಆಗಿದ್ದಾರೆ.

ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್-2 ಟೀಸರ್

ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್-2 ಟೀಸರ್

ಕೆಜಿಎಫ್-2 ಸಿನಿಮಾದ ಯಶ್ ಪೋಸ್ಟರ್ ರಿಲೀಸ್ ಆದ ಬಳಿಕ ಇತ್ತೀಚಿಗೆ ನಟಿ ರವೀನಾ ಟಂಡನ್ ಲುಕ್ ರಿಲೀಸ್ ಮಾಡಲಿದೆ. ಇದು ಬಿಟ್ಟರೆ ಸಿನಿಮಾದಿಂದ ಯಾವುದೇ ಅಪ್ ಡೇಟ್ ಅಭಿಮಾನಿಗಳಿಗೆ ಸಿಕ್ಕಿಲ್ಲ. ಚಿತ್ರದ ಟೀಸರ್ ಗಾಗಿ ಸುಮಾರು ವರ್ಷದಿಂದ ಉಸಿರು ಬಿಗಿಹಿಡಿದು ಕಾಯುತ್ತಿರುವ ಅಭಿಮಾನಿಗಳಿಗೆ ಈ ಬಾರಿಯ ಯಶ್ ಹುಟ್ಟುಹಬ್ಬಕ್ಕೆ ಭರ್ಜರಿ ಸರ್ಪ್ರೈಸ್ ಕಾದಿದೆ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಬಹಿರಂಗ ಪಡಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಟ್ರೆಂಡ್

ಟ್ವಿಟ್ಟರ್ ನಲ್ಲಿ ಟ್ರೆಂಡ್

ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್-2 ಸಿನಿಮಾದ ಟೀಸರ್ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಟ್ವಿಟ್ಟರ್ ಹ್ಯಾಷ್ ಟ್ಯಾಗ್ ಹಾಕಿ ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್ ಚಾಪ್ಟರ್-2 ಟೀಸರ್ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಕೆಜಿಎಫ್ ಚಾಪ್ಟರ್-2 ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ ಲಿಸ್ಟ್ ನಲ್ಲಿದೆ.

ಕಾರ್ತಿಕ್ ಗೌಡ ಟ್ವೀಟ್

ಕಾರ್ತಿಕ್ ಗೌಡ ಟ್ವೀಟ್

ಚಿತ್ರದ ಟೀಸರ್ ಯಾವಾಗ ರಿಲೀಸ್ ಆಗಿತ್ತೆ ಎಂದು ಅಭಿಮಾನಿಗಳು ಆಗಾಗ ಪ್ರಶ್ನೆ ಮಾಡುತ್ತಲ್ಲೆ ಇದ್ದಾರೆ. ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಾಕಿದ್ರು ಸಹ ಸಿನಿಮಾ ಟೀಸರ್ ಯಾವಾಗ ಎಂದು ಕೇಳುತ್ತಿದ್ದರು. ಇತ್ತೀಚಿಗೆ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಕಾರ್ತಿಕ್ ಗೌಡ ಉತ್ತರ ನೀಡಿದ್ದಾರೆ. '3 ವರ್ಷ ಆಯ್ತು ಗುರು ಬಾಸ್ ಟೀಸರ್ ನೋಡಿ' ಎಂದು ಹೇಳಿದ ಅಭಿಮಾನಿಗೆ ಪ್ರತಿಕ್ರಿಯೆ ನೀಡಿರುವ ಕಾರ್ತಿಕ್ ಗೌಡ, 'ಬರ್ತಡೇಗೆ ನೋಡ್ತಿಯಾ, ಬೇರೆ ರೇಂಜ್ ನಲ್ಲೆ ಇರುತ್ತೆ' ಎಂದು ಹೇಳಿದ್ದಾರೆ.

Recommended Video

ಸಲಾರ್, ಪ್ರಶಾಂತ್ ನೀಲ್ ಮುಂದಿನ ಚಿತ್ರ ಪ್ರಭಾಸ್ ಜೊತೆಗೆ | Filmibeat kannada
ಜನವರಿ 8ಕ್ಕೆ ಯಶ್ ಹುಟ್ಟುಹಬ್ಬ

ಜನವರಿ 8ಕ್ಕೆ ಯಶ್ ಹುಟ್ಟುಹಬ್ಬ

ಅಂದಹಾಗೆ ರಾಕಿಂಗ್ ಸ್ಟಾರ್ ಹುಟ್ಟುಹಬ್ಬ ಜನವರಿ 8. ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಕನ್ನಡ ಭಾರಿ ನಿರೀಕ್ಷೆಯ ಸಿನಿಮಾದ ಟೀಸರ್ ಅನ್ನು ಅದ್ದೂರಿಯಾಗಿ ಸ್ವಾಗತ ಮಾಡಲು ಕನ್ನಡ ಪ್ರೇಕ್ಷಕರು ಮಾತ್ರವಲ್ಲದೆ, ಭಾರತೀಯ ಸಿನಿ ಅಭಿಮಾನಿಗಳು ಕಾತರರಾಗಿದ್ದಾರೆ. ಟೀಸರ್ ಬಗ್ಗೆ ಅಪ್ ಡೇಟ್ ನೀಡಿದ್ದಕ್ಕಾಗಿ ಅಭಿಮಾನಿಗಳು ಧನ್ಯವಾದ ತಿಳಿಸುತ್ತಿದ್ದಾರೆ.

5 ದಿನಗಳ ಶೂಟಿಂಗ್ ಮುಗಿಸಿ ವಾಪಸ್ ಆಗಿರುವ ಯಶ್

5 ದಿನಗಳ ಶೂಟಿಂಗ್ ಮುಗಿಸಿ ವಾಪಸ್ ಆಗಿರುವ ಯಶ್

5 ದಿನಗಳ ಶೂಟಿಂಗ್ ಮುಗಿಸಿ ಯಶ್ ಬೆಂಗಳೂರಿಗೆ ವಾಪಸ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ನವೆಂಬರ್ 25ರಂದು ಹೈದರಾಬಾದ್ ಶೂಟಿಂಗ್ ಗೆ ತೆರಳಿದ್ದ ಯಶ್ ತನ್ನ ಭಾಗದ ಶೂಟಿಂಗ್ ಮುಗಿಸಿ ವಾಪಸ್ ಆಗಿದ್ದಾರೆ ಎನ್ನಲಾಗುತ್ತಿದೆ. ಮತ್ತೆ ಶೂಟಿಂಗ್ ನಲ್ಲಿ ಭಾಗಿಯಾಗುತ್ತಾರಾ ಅಥವಾ ಇಲ್ವಾ ಎನ್ನುವುದು ತಿಳಿದುಬಂದಿಲ್ಲ. ಆದರೆ ಕೆಜಿಎಫ್-2 ಸಿನಿಮಾದ ಶೂಟಿಂಗ್ ಈ ತಿಂಗಳಲ್ಲೇ ಮುಗಿಸುವ ನಿರ್ಧಾರ ಮಾಡಿದೆ ಸಿನಿಮಾತಂಡ

More from Filmibeat

English summary
Yash starrer KGF Chapter 2 Teaser to release on his Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X