twitter
    For Quick Alerts
    ALLOW NOTIFICATIONS  
    For Daily Alerts

    ಕೆಜಿಎಫ್ to ವಿಕ್ರಾಂತ್ ರೋಣ: 2022ರಲ್ಲಿ ಅತಿಹೆಚ್ಚು ಗೂಗಲ್ ಸರ್ಚ್ ಆದ 5 ಕನ್ನಡ ಚಿತ್ರಗಳ ಪಟ್ಟಿ

    |

    2022 ಸಿನಿಮಾ ಕ್ಷೇತ್ರಕ್ಕೆ ಗೋಲ್ಡನ್ ಇಯರ್ ಎಂದೇ ಹೇಳಬಹುದು. ಏಕೆಂದರೆ ಕಳೆದೆರಡು ವರ್ಷಗಳಿಂದ ಕೊರೊನಾ ಲಾಕ್ ಡೌನ್‌ಗೆ ಸಿಲುಕಿ ನಲುಗಿದ್ದ ಚಿತ್ರರಂಗಗಳು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಇದೇ ವರ್ಷದಲ್ಲಿ. ಜನವರಿಯಿಂದ ಡಿಸೆಂಬರ್‌ವರೆಗೆ ಒಮ್ಮೆಯೂ ಸಹ ಲಾಕ್‌ಡೌನ್ ಎಂಬ ತಲೆ ನೋವು ಚಿತ್ರರರಂಗಗಳನ್ನು ಕಾಡಲೇ ಇಲ್ಲ.

    ಹೀಗೆ ಚಿತ್ರರಂಗಕ್ಕೆ ಮರುಜನ್ಮ ನೀಡಿದ 2022ರಲ್ಲಿ ಹಲವಾರು ಚಿತ್ರಗಳು ಬಿಡುಗಡೆಗೊಂಡಿದ್ದು, ದೊಡ್ಡಮಟ್ಟದ ಯಶಸ್ಸು ಸಾಧಿಸಿವೆ. ವರ್ಷವೊಂದರಲ್ಲಿ ಇಷ್ಟು ಸಂಖ್ಯೆಯ ಚಿತ್ರಗಳು ಯಶಸ್ಸು ಕಂಡು ಸಾಕಷ್ಟು ಸಮಯವಾಗಿತ್ತು ಎಂದೇ ಹೇಳಬಹುದು. ಹೌದು, ಈ ವರ್ಷ ಸುಮಾರು ಮೂವತ್ತು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದ್ದು, ಈ ಪೈಕಿ ಕನ್ನಡ ಚಿತ್ರರಂಗದಲ್ಲೇ ಐದು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿವೆ.

    ಹೌದು, ಜೇಮ್ಸ್, ಕೆಜಿಎಫ್ ಚಾಪ್ಟರ್ 2, 777 ಚಾರ್ಲಿ, ವಿಕ್ರಾಂತ್ ರೋಣ ಹಾಗೂ ಕಾಂತಾರ ಈ ಐದು ಚಿತ್ರಗಳು ಈ ವರ್ಷ ನೂರಕ್ಕೂ ಹೆಚ್ಚು ಕೋಟಿ ಗಳಿಸಿದವು. ಇನ್ನು ವರ್ಷದ ಅಂತ್ಯದಲ್ಲಿ ಗೂಗಲ್ 2022ರಲ್ಲಿ ವಿಶ್ವದಾದ್ಯಂತ ಹಾಗೂ ಭಾರತದಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಚಿತ್ರಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಈ ಪಟ್ಟಿ ವೈರಲ್ ಆಗಿತ್ತು. ಈಗ 2022ರಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಕನ್ನಡ ಚಿತ್ರಗಳ ಪ್ರತ್ಯೇಕ ಪಟ್ಟಿ ಬಿಡುಗಡೆಗೊಂಡಿದ್ದು, ಈ ಪಟ್ಟಿಯಲ್ಲಿ ಯಾವ ಐದು ಚಿತ್ರಗಳು ಸ್ಥಾನ ಗಿಟ್ಟಿಸಿಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

    ಅತಿಹೆಚ್ಚು ಸರ್ಚ್ ಆದ ಕನ್ನಡ ಚಿತ್ರಗಳು

    ಅತಿಹೆಚ್ಚು ಸರ್ಚ್ ಆದ ಕನ್ನಡ ಚಿತ್ರಗಳು

    2022ರಲ್ಲಿ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಟಾಪ್ 5 ಕನ್ನಡ ಚಿತ್ರಗಳ ಪಟ್ಟಿ ಇಲ್ಲಿದೆ..


    1. ಕೆಜಿಎಫ್ ಚಾಪ್ಟರ್ 2


    2. ಕಾಂತಾರ


    3. ವಿಕ್ರಾಂತ್ ರೋಣ


    4. 777 ಚಾರ್ಲಿ


    5. ಕೆಜಿಎಫ್ ಚಾಪ್ಟರ್ 1

    2022ರಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಭಾರತದ ಚಿತ್ರಗಳು

    2022ರಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಭಾರತದ ಚಿತ್ರಗಳು

    1. ಬ್ರಹ್ಮಾಸ್ತ್ರ - ಪಾರ್ಟ್ 1 ಶಿವ

    2. ಕೆಜಿಎಫ್ ಚಾಪ್ಟರ್ 2

    3. ದಿ ಕಾಶ್ಮೀರ್ ಫೈಲ್ಸ್

    4. ಆರ್ ಆರ್ ಆರ್

    5. ಕಾಂತಾರ

    6. ಪುಷ್ಪ - ದಿ ರೈಸ್

    7. ವಿಕ್ರಮ್

    8. ಲಾಲ್ ಸಿಂಗ್ ಛಡ್ಡಾ

    9. ದೃಶ್ಯಂ 2

    10. ಥೋರ್: ಲವ್ ಅಂಡ್ ಥಂಡರ್

    2022ರಲ್ಲಿ ವಿಶ್ವದಾದ್ಯಂತ ಅತಿಹೆಚ್ಚು ಹುಡುಕಲ್ಪಟ್ಟ ಚಿತ್ರಗಳ ಟಾಪ್ 10 ಪಟ್ಟಿ

    2022ರಲ್ಲಿ ವಿಶ್ವದಾದ್ಯಂತ ಅತಿಹೆಚ್ಚು ಹುಡುಕಲ್ಪಟ್ಟ ಚಿತ್ರಗಳ ಟಾಪ್ 10 ಪಟ್ಟಿ

    1. ಥಾರ್: ಲವ್ ಅಂಡ್ ಥಂಡರ್

    2. ಬ್ಲಾಕ್ ಆಡಂ

    3. ಟಾಪ್ ಗನ್: ಮ್ಯಾವೆರಿಕ್

    4. ದಿ ಬ್ಯಾಟ್‌ಮನ್

    5. ಎನ್‌ಕ್ಯಾಂಟೊ

    6. ಬ್ರಹ್ಮಾಸ್ತ್ರ

    7. ಜುರಾಸಿಕ್ ವರ್ಲ್ಡ್ ಡೊಮಿನಿಯನ್

    8. ಕೆಜಿಎಫ್ ಚಾಪ್ಟರ್ 2

    9. ಅನ್‌ಚಾರ್ಟೆಡ್

    10. ಮೊರ್ಬಿಯಸ್

    ಕಾಂತಾರ ಈ ಪಟ್ಟಿಗಳಲ್ಲಿ ಇರುವುದು ವಿಶೇಷ

    ಕಾಂತಾರ ಈ ಪಟ್ಟಿಗಳಲ್ಲಿ ಇರುವುದು ವಿಶೇಷ

    ಇನ್ನು ಈ ಮೇಲಿನ ಮೂರು ಪಟ್ಟಿಗಳಲ್ಲೂ ಕಾಂತಾರ ಸ್ಥಾನ ಪಡೆದುಕೊಂಡಿರುವುದು ವಿಶೇಷ. ಏಕೆಂದರೆ ಇನ್ನುಳಿದ ಚಿತ್ರಗಳಿಗೆ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಹೀಗಾಗಿ ಚಿತ್ರದ ಬಗ್ಗೆ ಹುಡುಕಾಟವೂ ಹೆಚ್ಚಿತ್ತು. ಆದ್ರೆ ಕಾಂತಾರ ವಿಷಯದಲ್ಲಿ ಹೀಗಿರಲಿಲ್ಲ. ಅದರಲ್ಲಿಯೂ ಸೆಪ್ಟೆಂಬರ್ 30ಕ್ಕೆ ಕಾಂತಾರ ಚಿತ್ರ ತೆರೆಕಂಡಿದ್ದು, ಅಕ್ಟೋಬರ್ ಹಾಗೂ ನವೆಂಬರ್ ಎರಡೇ ತಿಂಗಳಿನಲ್ಲಿ ಚಿತ್ರದ ಬಗ್ಗೆ ಇಷ್ಟು ದೊಡ್ಡ ಮಟ್ಟಕ್ಕೆ ಜನರು ಹುಡುಕಾಟ ನಡೆಸಿದ್ದರು ಎಂಬುದನ್ನು ಅರಿಯಬಹುದಾಗಿದೆ..

    English summary
    KGF Chapter 2 to Vikrant Rona: List of Top 5 Most Googled Kannada Movies in2022. Take a look
    Saturday, December 10, 2022, 13:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X