KGF 2 Trailer Launch Event : ಕೆಜಿಎಫ್ 2 ಟ್ರೈಲರ್‌ ಲಾಂಚ್ ಸಂಪೂರ್ಣ ಮಾಹಿತಿ; ಸಮಯ, ಸ್ಥಳ, ಅತಿಥಿಗಳ ವಿವರ ಇಲ್ಲಿದೆ!

ಮಾರ್ಚ್ ಮುಗಿಯುತ್ತಾ ಬಂತು, ಏಪ್ರಿಲ್ ತಿಂಗಳಿಗೆ ಕೆಲವು ದಿನಗಳು ಮಾತ್ರವೇ ಬಾಕಿ ಇದೆ. ಏಪ್ರಿಲ್ ಮಾತನಾಡಲು ಸದ್ಯ 'ಕೆಜಿಎಫ್ 2' ಮುಖ್ಯ ಕಾರಣ ಆಗಿದೆ. ಏಪ್ರಿಲ್ ತಿಂಗಳಿನಲ್ಲಿ 'ಕೆಜಿಎಫ್ 2' ಚಿತ್ರದ ಹವಾ ಜೋರಾಗಿ ಇರಲಿದೆ. ಏಪ್ರಿಲ್ 14ಕ್ಕೆ 'ಕೆಜಿಎಫ್ 2' ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಚಿತ್ರದ ಟ್ರೈಲರನ್ನು ರಿಲೀಸ್ ಮಾಡಲು ಚಿತ್ರತಂಡ ಸಂಪೂರ್ಣ ತಯಾರಿ ಮಾಡಿಕೊಂಡಿದೆ.

ಬೆಂಗಳೂರಿನಲ್ಲಿ 'ಕೆಜಿಎಫ್ 2' ಟ್ರೈಲರ್‌ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಇದಕ್ಕಾಗಿ ಈಗಾಗಲೆ ಸ್ಥಳ, ಸಮಯ ಎಲ್ಲವೂ ನಿಗದಿ ಆಗಿದೆ. ಈ ಅದ್ಧೂರಿ ಕಾರ್ಯಕ್ರಮಕ್ಕೆ ಇಡೀ ಚಿತ್ರತಂಡ ಸಾಕ್ಷಿ ಆಗಲಿದೆ. 5 ಭಾಷೆಗಳ ಟ್ರೈಲರ್ ಒಟ್ಟಿಗೆ ರಿಲೀಸ್ ಆಗುತ್ತಿದೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಕಲಾವಿದರ ದಂಡೇ ಇರಲಿದೆ.

'ಕೆಜಿಎಫ್ 2' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಅಂದರೆ ಅದು ನಟ ಶಿವರಾಜ್‌ಕುಮಾರ್ ಮತ್ತು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್. ಕಾರ್ಯಕ್ರಮ ಹೇಗೆ ಇರಲಿದೆ? ಇದರ ರೂಪುರೇಷೆ ಏನು ಎನ್ನುವ ಬಗ್ಗೆ ಮುಂದೆ ಓದಿ.

ನಟ ಶಿವರಾಜ್ ಕುಮಾರ್ ಮುಖ್ಯ ಅಥಿತಿ!

ನಟ ಶಿವರಾಜ್ ಕುಮಾರ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬರಲಿದ್ದಾರೆ. ಶಿವಣ್ಣ ಯಾವುದೇ ಕಾರ್ಯಕ್ರಮ ಆದರೂ ಹೋಗಿ ಚಿತ್ರಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಅಂತೆಯೇ ಈಗ 'ಕೆಜಿಎಫ್ 2' ಚಿತ್ರದ ಬಳಗವನ್ನೂ ಸೇರಲಿದ್ದಾರೆ. ಅಪ್ಪು ಇಲ್ಲ ಎನ್ನುವ ನೋವನ್ನು ನುಂಗಿ, ಅವರನ್ನು ಎಲ್ಲರ ಮನಸಲ್ಲಿ ಜೀವಂತವಾಗಿ ಕಾಣುತ್ತಾ ಮುಂದೆ ಸಾಗುತ್ತಾ ಇದ್ದಾರೆ. ಈಗ 'ಕೆಜಿಎಫ್ 2' ಕಾರ್ಯಕ್ರಮದಲ್ಲಿ ಶಿವಣ್ಣ ಭಾಗಿಯಾಗುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿ ಮಾಹಿತಿ ನೀಡಿದೆ.

ಮಾಲ್‌ನಲ್ಲಿ ಅದ್ಧೂರಿ ಕಾರ್ಯಕ್ರಮ!

ಮಾಲ್‌ನಲ್ಲಿ ಅದ್ಧೂರಿ ಕಾರ್ಯಕ್ರಮ!

ಯಶ್ ನಟನೆಯ 'ಕೆಜಿಎಫ್ 2' ಸಿನಿಮಾದ ಟ್ರೈಲರ್ ಇದೇ ಭಾನುವಾರ ಮಾರ್ಚ್ 27ರಂದು ಸಂಜೆ 6.45ಕ್ಕೆ ಟ್ರೈಲರ್ ಬಿಡುಗಡೆ ಆಗಲಿದೆ. ಚಿತ್ರತಂಡದ ಪ್ರಮುಖ ಕಲಾವಿದರು, ತಂತ್ರಜ್ಞರು ಮತ್ತು ಕನ್ನಡದ ಹೆಸರಾಂತ ನಟರು ಹಾಗೂ ಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ. ಮುಖ್ಯ ಅತಿಥಿಯಾಗಿ ಸಚಿವ ಅಶ್ವತ್ಥ್ ನಾರಾಯಣ್ ಮತ್ತು ಶಿವರಾಜ್ ಕುಮಾರ್ ಆಗಮಿಸುತ್ತಿದ್ದಾರೆ. ಜೊತೆಗೆ ಕಲಾವಿದರಾದ ಸಂಜಯ್ ದತ್, ಪೃಥ್ವಿರಾಜ್, ರವೀನಾ ಟಂಡನ್, ಯಶ್, ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ಮಾಪಕ ವಿಜಯ ಕಿರಗಂದೂರು ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ವೇದಿಕೆಯ ಮೇಲೆ ಇರಲಿದ್ದಾರೆ.

Recommended Video

KGF 2 vs Beast | KGF 2 ಎದುರು ಕರ್ನಾಟಕದಲ್ಲಿ ತೊಡೆತಟ್ಟಲು ಮುಂದಾದ ಬೀಸ್ಟ್ | Yash | Sanjay Dutt
5 ಭಾಷೆಯ 180ಕ್ಕೂ ಹೆಚ್ಚು ಪತ್ರಕರ್ತರು ಭಾಗಿ!

5 ಭಾಷೆಯ 180ಕ್ಕೂ ಹೆಚ್ಚು ಪತ್ರಕರ್ತರು ಭಾಗಿ!

ಯಶ್ ನಟನೆಯ 'ಕೆಜಿಎಫ್ 2' ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ 5 ಭಾಷೆಗಳಲ್ಲಿ ವಿಶ್ವದಾದ್ಯಂತ ಒಟ್ಟಿಗೆ ಸಿನಿಮಾ ಬಿಡುಗಡೆ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳ ಮತ್ತು ಹಿಂದಿಯಲ್ಲಿ ಈ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಹಾಗಾಗಿ ಮಾ.27ರಂದು ನಡೆಯಲಿರುವ ಚಿತ್ರದ ಟ್ರೈಲರ್ ಬಿಡುಗಡೆಗೆ 5 ಭಾಷೆಯ ಪತ್ರಕರ್ತರನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 180ಕ್ಕೂ ಹೆಚ್ಚು ಬೇರೆ ಭಾಷೆಯ ಪತ್ರಕರ್ತರು ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

'ಕೆಜಿಎಫ್ 2' ಕಾರ್ಯಕ್ರಮಕ್ಕೆ ಕರಣ್ ನಿರೂಪಣೆ!

ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹಾರ್ 'ಕೆಜಿಎಫ್ 2' ಚಿತ್ರಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಭಾನುವಾರದಂದು ನಡೆಯಲಿರುವ ಅದ್ಧೂರಿ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದು ಇಳಿಯಲಿದ್ದಾರೆ. 'ಕೆಜಿಎಫ್ 2' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಕರಣ್ ಜೋಹರ್ ನಡೆಸಿಕೊಡಲಿದ್ದಾರೆ. ಇದೇ ಮೊದಲ ಬಾರಿಗೆ ಅವರು ಕನ್ನಡ ಸಿನಿಮಾವೊಂದರ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.

More from Filmibeat

English summary
KGF Chapter 2 Trailer Launch Event Date, Time, Guests List and Other Details Is Here, karan johar Hosting The Show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X