ಡಿಸೆಂಬರ್ 21ಕ್ಕೆ 'ಕೆಜಿಎಫ್' ಅಭಿಮಾನಿಗಳಿಗೆ 'ಬಿಗ್' ನ್ಯೂಸ್

Recommended Video

Untitled

ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ 2020ನೇ ವರ್ಷದ ಅತಿ ದೊಡ್ಡ ಸಿನಿಮಾ. ಈ ಚಿತ್ರದ ಮೇಲೆ ಇಡೀ ಭಾರತದ ಕಣ್ಣಿದೆ. ಚಾಪ್ಟರ್ 1 ನೋಡಿದ್ಮೇಲೆ ಅಂತೂ ಪಾರ್ಟ್ 2 ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.

ಈಗಾಗಲೇ ಚಾಪ್ಟರ್ 2 ಶೂಟಿಂಗ್ ನಡೆಯುತ್ತಿದ್ದು, ಯಶ್ ಜೊತೆ ಸಂಜಯ್ ದತ್, ರವೀನಾ ಟಂಡನ್ ಕೂಡ ಭಾಗಿಯಾಗುತ್ತಿದ್ದಾರೆ. ಈ ನಡುವೆ ಚಾಪ್ಟರ್ 2 ಬಗ್ಗೆ ಅಪ್ಡೇಟ್ ಕೊಡಿ ಎಂದು ಚಿತ್ರತಂಡಕ್ಕೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇದೀಗ, ಅಭಿಮಾನಿಗಳ ಬೇಡಿಕೆ ಪುರಸ್ಕರಿಸಿ ಚಿತ್ರತಂಡ ದೊಡ್ಡ ಸುದ್ದಿಯೊಂದನ್ನು ಬಹಿರಂಗಪಡಿಸಿದೆ. ಏನದು?

ಡಿಸೆಂಬರ್ 21ಕ್ಕೆ ಫಸ್ಟ್ ಲುಕ್

ಡಿಸೆಂಬರ್ 21ಕ್ಕೆ ಫಸ್ಟ್ ಲುಕ್

ಕೆಜಿಎಫ್ ಚಾಪ್ಟರ್ 2 ಚಿತ್ರದ ಫಸ್ಟ್ ಲುಕ್ ಅಥವಾ ಯಶ್ ಅವರ ಗೆಟಪ್ ಹೇಗಿರುತ್ತೆ ಎಂಬ ಪೋಸ್ಟರ್ ರಿಲೀಸ್ ಮಾಡಿ ಎಂದು ಅಭಿಮಾನಿಗಳು ಬೇಡಿಕೆಯಿಟ್ಟಿದ್ದರು. ಇದೀಗ, ಅಭಿಮಾನಿಗಳಿಗೆ ಖುಷಿ ಪಡಿಸಲು ಕೆಜಿಎಫ್ ಚಾಪ್ಟರ್ 2 ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗುತ್ತಿದೆ. ಡಿಸೆಂಬರ್ 21ಕ್ಕೆ ಅಧಿಕೃತವಾಗಿ ಪಾರ್ಟ್ 2 ಫಸ್ಟ್ ಲುಕ್ ಬರ್ತಿದೆ.

ಐದು ಭಾಷೆಯಲ್ಲೂ ಫಸ್ಟ್ ಲುಕ್

ಐದು ಭಾಷೆಯಲ್ಲೂ ಫಸ್ಟ್ ಲುಕ್

ಕೆಜಿಎಫ್ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ದಾಖಲೆ ನಿರ್ಮಿಸಿತ್ತು. ಅಷ್ಟೇ ಕ್ರೇಜ್ ಸೃಷ್ಟಿಸಿತ್ತು. ಮೊದಲ ಭಾಗದಂತೆ ಈಗ ಎರಡನೇ ಚಾಪ್ಟರ್ ಕೂಡ ಎಲ್ಲ ಭಾಷೆಯಲ್ಲಿ ಬರ್ತಿದ್ದು, ಈಗ ಡಿಸೆಂಬರ್ 21ಕ್ಕೆ ಐದು ಭಾಷೆಯಲ್ಲಿ ಫಸ್ಟ್ ಲುಕ್ ರಿಲೀಸ್ ಆಗ್ತಿದೆ.

ಡಿಸೆಂಬರ್ 21 ಯಾಕೆ?

ಡಿಸೆಂಬರ್ 21 ಯಾಕೆ?

ಡಿಸೆಂಬರ್ 21ಕ್ಕೆ ಫಸ್ಟ್ ಲುಕ್ ಯಾಕೆ ಎಂದು ಗಮನಿಸಿದಾಗ, ಅದೇ ದಿನದಲ್ಲಿ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿತ್ತು. ಡಿಸೆಂಬರ್ 21, 2018 ರಂದು ಕೆಜಿಎಫ್ ಐದು ಭಾಷೆಯಲ್ಲಿ ಬಿಡುಗಡೆಯಾಗಿ, ಸಕ್ಸಸ್ ಕಂಡಿತ್ತು. ಈಗ ಅದೇ ಸೆಂಟಿಮೆಂಟ್ ಮೊರೆ ಹೋಗಿರುವ ಚಿತ್ರತಂಡ ಅದೇ ದಿನಕ್ಕೆ ಚಾಪ್ಟರ್ 2 ಅಪ್ಡೇಟ್ ನೀಡಲು ನಿರ್ಧರಿಸಿದ್ದಾರೆ.

ಸಿನಿಮಾನೂ ಡಿಸೆಂಬರ್ ಗೆ ಬರಬಹುದು

ಸಿನಿಮಾನೂ ಡಿಸೆಂಬರ್ ಗೆ ಬರಬಹುದು

ಚಿತ್ರತಂಡದ ನಿರ್ಧಾರಗಳನ್ನು ನೋಡಿದ್ರೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಕೂಡ ಡಿಸೆಂಬರ್ ತಿಂಗಳಲ್ಲಿ ಬರಬಹುದು. ಸದ್ಯದ ಮಾಹಿತಿ ಪ್ರಕಾರ, 2020ರ ಮಧ್ಯದಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಮಾಡಲಾಗಿದೆ. ಆದರೆ, ಡಿಸೆಂಬರ್ ಸೆಂಟಿಮೆಂಟ್, ಶೂಟಿಂಗ್ ಗೆ ಸಮಯ ಬೇಕು, ಪ್ರಚಾರಕ್ಕೆ ಸಮಯ ಬೇಕು ಅಂತ ಡಿಸೈಡ್ ಆದ್ರೆ 2020ರ ಡಿಸೆಂಬರ್ ಗೆ ಪಾರ್ಟ್ 2 ಸಿನಿಮಾವನ್ನ ತೆರೆಮೇಲೆ ತರಬಹುದು.

More from Filmibeat

English summary
Rocking star yash starrer KGF Chapter 2 is the biggest movie in india. fans are eagerly waiting this movie. now, film team has give surprise.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X