ರಿವೀಲ್ ಆಯ್ತು ಕೆಜಿಎಫ್ ಚಿತ್ರದ ಬಿಗ್ ನ್ಯೂಸ್ : ಜುಲೈ 29ಕ್ಕೆ ನಿರೀಕ್ಷಿಸಿ ಸರ್ಪ್ರೈಸ್

Recommended Video

KGF 2 Movie: ಕೆಜಿಎಫ್ 2ದಲ್ಲಿ ಸರ್ಪ್ರೈಸ್ ನೀಡ್ತಾರಂತೆ ನಿರ್ದೇಶಕರು | FILMIBEAT KANNADA

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ 'ಕೆಜಿಎಫ್' ಚಿತ್ರದ ಎರಡನೆ ಭಾಗದ ಚಿತ್ರೀಕರಣ ಭರ್ಜರಿಯಾಗಿ ನಡೆಯತ್ತಿದೆ. ಈಗಾಗಲೆ ಮೈಸೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ, ಇಂದು ಬಿಗ್ ಕೊಡುವುದಾಗಿ ನಿನ್ನೆ(ಜುಲೈ 25) ಹೇಳಿದ್ದರು.

ಚಿತ್ರತಂಡ ನೀಡುವ ಬಿಗ್ ಸರ್ಪ್ರೈಸ್ ಏನಾಗಿರಲಿದೆ ಎಂದು ಕಾದುಕೊಳುತಿದ್ದ ಅಭಿಮಾನಿಗಳ ಕುತೂಹಲಕ್ಕೆ ಇಂದು ತೆರೆ ಎಳೆದಿದೆ ಚಿತ್ರತಂಡ. 'ಕೆಜಿಎಫ್ ಚಾಪ್ಟರ-2' ಚಿತ್ರದಿಂದ ಪೋಸ್ಟರ್ ಒಂದನ್ನು ರಿಲೀಸ್ ಮಾಡಿ ಮತ್ತೊಂದು ಬಿಗ್ ನ್ಯೂಸ್ ಗೆ ಕಾಯುವಂತೆ ಹೇಳಿದೆ. ಜುಲೈ 29ಕ್ಕೆ ಮತ್ತೊಂದು ಸರ್ಪ್ರೈಸ್ ಕೊಡಲು ಮುಂದಾಗಿದೆ ಚಿತ್ರತಂಡ.

ಅಂದ್ಮೇಲೆ ಅಭಿಮಾನಿಗಳು ಮತ್ತೆ ಹುಸಿರು ಬಿಗಿಹಿಡಿದು ಕಾಯುವಂತಾಗಿದೆ. ಚಿತ್ರಾಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ ಚಿತ್ರತಂಡ. ಜುಲೈ 29ಕ್ಕೆ ಚಿತ್ರದ ಪ್ರಮುಖ ಪಾತ್ರಧಾರಿ ಅಧೀರನ ಪೋಸ್ಟರ್ ರಿಲೀಸ್ ಆಗಲಿದೆ. ಹಾಗಾದ್ರೆ ಯಾರು ಆ ಆಧೀರ? ಜುಲೈ 29ರ ವಿಶೇಷತೆ ಏನು? ಮುಂದೆ ಓದಿ..

ಜುಲೈ 29ಕ್ಕೆ ಅಧೀರ ಪೋಸ್ಟರ್ ರಿಲೀಸ್

ಜುಲೈ 29ಕ್ಕೆ ಅಧೀರ ಪೋಸ್ಟರ್ ರಿಲೀಸ್

ಕೆಜಿಎಫ್ ಚಾಪ್ಟರ್ ಒಂದರಲ್ಲಿ ಸೂರ್ಯವರ್ಧನ್ ನ ತಮ್ಮ ಅಧೀರ. ಆದ್ರೆ ಮೊದಲ ಭಾಗದಲ್ಲಿ ಅಧೀರನ ಪಾತ್ರ ಕೆಲವೆ ನಿಮಿಷಕ್ಕೆ ಮಾತ್ರ ಸೀಮಿತವಾಗಿತ್ತು. ಸೂರ್ಯವರ್ಧನ್ ಸಾವಿನ ನಂತರ ಗರುಡ ಅಧಿಕಾರಕ್ಕೆ ಬರುತ್ತಾನೆ. ಆದ್ರೆ ರಾಕಿ ಭಾಯ್ ಕೈಯಿಂದ ಗರುಡ ಸಾವನಪ್ಪಿದ ನಂತರ ಮತ್ತೆ ಅಧೀರ ಕೆಜಿಎಪ್ ಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ. ಈ ಅಧೀರನಾ ಪಾತ್ರದಾರಿಯ ಪೋಸ್ಟರ್ ಅನ್ನು ಜುಲೈ 29ಕ್ಕೆ ರಿಲೀಸ್ ಮಾಡಲಿದೆ ಚಿತ್ರತಂಡ.

ಅಧೀರನ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ

ಅಧೀರನ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ

'ಕೆಜಿಎಫ್ ಚಾಪ್ಟರ್-2' ನ ಪ್ರಮುಖ ಪಾತ್ರ ಅಂದ್ರೆ ಅಧೀರ. ಅಧೀರನ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಆದ್ರೆ ಮೂಲಗಳ ಪ್ರಕಾರ ಅಧೀರನ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೆ ಸಂಜಯ್ ದತ್ ಕೆಜಿಎಫ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ಸಂಜಯ್ ದತ್ ಅಧೀರನ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಜುಲೈ 29 ಸಂಜಯ್ ದತ್ ಹುಟ್ಟುಹಬ್ಬ

ಜುಲೈ 29 ಸಂಜಯ್ ದತ್ ಹುಟ್ಟುಹಬ್ಬ

ಕೆಜಿಎಫ್ ಚಿತ್ರತಂಡ ಜುಲೈ 29ಕ್ಕೆ ಅಧೀರನ ಪೋಸ್ಟರ್ ರಿಲೀಸ್ ಮಾಡುವುದಾಗಿ ಬಗ್ಗೆ ಬಹಿರಂಗ ಪಡಿಸಿದೆ. ಜುಲೈ 29ಕ್ಕೆ ಯಾಕೆ ರಿಲೀಸ್ ಮಾಡುತ್ತಿದೆ ಎನ್ನುವ ಸೀಕ್ರೆಟ್ ಕೂಡ ರಿವೀಲ್ ಆಗಿದೆ. ಯಾಕಂದ್ರೆ ಜುಲೈ 29 ಸಂಜಯ್ ದತ್ ಹುಟ್ಟುಹಬ್ಬ. ದತ್ ಹುಟ್ಟುಹಬ್ಬದ ಪ್ರಯುಪ್ತ ಅಭಿಮಾನಿಗಳಿಗೆ ಕೆಜಿಎಫ್ ನೀಡುತ್ತಿದೆ ಬಿಗ್ ಗಿಫ್ಟ್.

ಮೈಸೂರು, ಬೆಂಗಳೂರಿನಲ್ಲಿ ಚಿತ್ರೀಕರಣ

ಮೈಸೂರು, ಬೆಂಗಳೂರಿನಲ್ಲಿ ಚಿತ್ರೀಕರಣ

ಈಗಾಗಲೆ ಕೆಜಿಎಫ್ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಮೈಸೂರಿನಿಂದ ಚಿತ್ರೀಕರಣ ಆರಂಭಿಸಿದ ಚಿತ್ರತಂಡ, ಈಗ ಬೆಂಗಳೂರಿನಲ್ಲಿ ಅದ್ಧೂರಿ ಸೆಟ್ ಕೂಡ ನಿರ್ಮಾಣ ಮಾಡಿದೆ. ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ಕಾರ್ಮಿಕರ ದೃಶ್ಯಕ್ಕಾಗಿ ನರಾಚಿ ಸೆಟ್ ಅನ್ನು ನಿರ್ಮಿಸಲಾಗಿದೆ. ನೂರಾರು ಕಾರ್ಮಿಕರು ನರಾಚಿ ಸೆಟ್ ಅನ್ನು ನಿರ್ಮಿಸುವಲ್ಲಿ ತೊಡಗಿದ್ದಾರೆ.

More from Filmibeat

English summary
Kannada most expected film KGF Chapter-2 will release Adheera poster on July 29th. KGF Chapter-2 revealed bigg news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X