For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ರಿಲೀಸ್ ಬಗ್ಗೆ ನಿರಾಸೆ ಮೂಡಿಸಿದ ತರಣ್ ಆದರ್ಶ್ ಟ್ವೀಟ್

  |

  ಜುಲೈ 16, 2021ರಂದು ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾಗಬೇಕಿದೆ. ಆದರೆ, ಪ್ರಕಟಿಸಿದ ದಿನದಂದು ಯಶ್ ಸಿನಿಮಾ ತೆರೆಗೆ ಬರಲ್ಲ ಎಂದು ಬಹುತೇಕ ಖಚಿತವಾದಂತಿದೆ. ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಶೂಟಿಂಗ್ ಮುಗಿಸಿ ಪ್ರೇಕ್ಷಕರೆದುರು ಬರಲು ತಯಾರಾಗಿದೆ.

  ಸದ್ಯದ ಮಾಹಿತಿ ಪ್ರಕಾರ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸ ಸಹ ಮುಗಿದಿದ್ದು, ರಿಲೀಸ್ ಯೋಜನೆ ನಡೆಯುತ್ತಿದೆ. ಈ ನಡುವೆ ದೇಶದಲ್ಲಿರುವ ಕೋವಿಡ್ ಪರಿಸ್ಥಿತಿ ಗಮನಿಸಿದರೆ ಜುಲೈ 16ಕ್ಕೆ ಕೆಜಿಎಫ್ ಥಿಯೇಟರ್‌ಗೆ ಬರುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬಾಲಿವುಡ್‌ನ ಖ್ಯಾತ ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಕೆಜಿಎಫ್ ರಿಲೀಸ್ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಮುಂದೆ ಓದಿ...

  ಜುಲೈ 16ಕ್ಕೆ ಕೆಜಿಎಫ್ ಬರಲ್ಲ

  ಜುಲೈ 16ಕ್ಕೆ ಕೆಜಿಎಫ್ ಬರಲ್ಲ

  ದೇಶಾದ್ಯಂತ ಚಿತ್ರಮಂದಿರಗಳ ಪರಿಸ್ಥಿತಿ ಸಹಜ ಸ್ಥಿತಿಯತ್ತ ಬರುವವರೆಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾ ತೆರೆಗೆ ಬರಲ್ಲ ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದ್ದು, ಈ ಮೊದಲು ಪ್ರಕಟಿಸಿದ ದಿನಾಂಕದಿಂದ ಚಿತ್ರತಂಡ ಹಿಂದೆ ಸರಿದಿದೆ ಎಂದು ಹೇಳಿದ್ದಾರೆ.

  ಕೆಜಿಎಫ್ 2 ಹೊಸ ದಾಖಲೆ: ಭಾರತೀಯ ಚಿತ್ರರಂಗದಲ್ಲೇ ಇದು ಮೊದಲುಕೆಜಿಎಫ್ 2 ಹೊಸ ದಾಖಲೆ: ಭಾರತೀಯ ಚಿತ್ರರಂಗದಲ್ಲೇ ಇದು ಮೊದಲು

  100 ಪರ್ಸೆಂಟ್ ಅವಕಾಶಕ್ಕೆ ಸಮಯ ಬೇಕು

  100 ಪರ್ಸೆಂಟ್ ಅವಕಾಶಕ್ಕೆ ಸಮಯ ಬೇಕು

  ಈಗಿನವರೆಗೂ ಯಾವ ರಾಜ್ಯದಲ್ಲೂ ಕೋವಿಡ್ ನಿಯಂತ್ರಣಕ್ಕೆ ಬಂದಿಲ್ಲ. ಚಿತ್ರೀಕರಣ ಹಾಗೂ ಚಿತ್ರಪ್ರದರ್ಶನಕ್ಕೆ ಸಂಪೂರ್ಣವಾಗಿ ಅನುಮತಿ ನೀಡಿಲ್ಲ. ಸದ್ಯ ಪರಿಸ್ಥಿತಿ ಅವಲೋಕಿಸಿದರೆ ತಕ್ಷಣಕ್ಕೆ 100 ಪರ್ಸೆಂಟ್ ಅವಕಾಶ ಕೊಡುವುದು ಸಾಧ್ಯತೆ ಬಹುತೇಕ ಕಡಿಮೆ.

  ಮೂರನೇ ಅಲೆಯ ಭೀತಿ?

  ಮೂರನೇ ಅಲೆಯ ಭೀತಿ?

  ಎರಡನೇ ಅಲೆ ಭೀಕರತೆ ಬಳಿಕ ನಿಧಾನವಾಗಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಎಲ್ಲಾ ರಾಜ್ಯಗಳು ಲಾಕ್‌ಡೌನ್‌ನಿಂದ ಅನ್‌ಲಾಕ್‌ ಕಡೆ ಹೆಜ್ಜೆಯಿಡುತ್ತಿದೆ. ಆದರೆ ತಜ್ಞರ ಪ್ರಕಾರ ಆಗಸ್ಟ್ ಕೊನೆಯಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ಕೊಡ್ತಿದ್ದಾರೆ. ಈ ನಿಟ್ಟಿನಲ್ಲಿ ಮತ್ತೆ ಲಾಕ್‌ಡೌನ್ ಮಾಡಬೇಕಾದ ಪರಿಸ್ಥಿತಿ ಬರುತ್ತಾ ಎಂಬ ಆತಂಕವೂ ಇದೆ.

  'ಪುಷ್ಪ' ಸಿನಿಮಾ ಹತ್ತು 'ಕೆಜಿಎಫ್‌'ಗೆ ಸಮ ಎಂದ ನಿರ್ದೇಶಕ: ಯಶ್ ಅಭಿಮಾನಿಗಳು ಗರಂ'ಪುಷ್ಪ' ಸಿನಿಮಾ ಹತ್ತು 'ಕೆಜಿಎಫ್‌'ಗೆ ಸಮ ಎಂದ ನಿರ್ದೇಶಕ: ಯಶ್ ಅಭಿಮಾನಿಗಳು ಗರಂ

  ಹೊಸ ದಿನಾಂಕದ ಬಗ್ಗೆ ಗೊಂದಲ

  ಹೊಸ ದಿನಾಂಕದ ಬಗ್ಗೆ ಗೊಂದಲ

  ಕೆಜಿಎಫ್ ಬಿಡುಗಡೆ ದಿನಾಂಕ ಮುಂದೂಡುವ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಒಂದು ವೇಳೆ ಪೋಸ್ಟ್ ಪೋನ್ ಮಾಡುವ ವಿಷಯ ಖಚಿತ ಪಡಿಸಿದರೂ ಹೊಸ ದಿನಾಂಕವನ್ನು ಸದ್ಯಕ್ಕೆ ಘೋಷಣೆ ಮಾಡಲ್ಲ. ಕೊರೊನಾ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದು ಚಿತ್ರಮಂದಿರಗಳು ಮೊದಲಿನಂತೆ ಆದರೆ ಮಾತ್ರ ರಿಲೀಸ್ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ.

  ಸಂಚಾರಿ ವಿಜಯ್ ಹೆಸರಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಚಕ್ರವರ್ತಿ ಚಂದ್ರಚೂಡ್ | Filmibeat Kannada
  ಸಲಾರ್ ಆರಂಭಿಸಿದ ಪ್ರಶಾಂತ್

  ಸಲಾರ್ ಆರಂಭಿಸಿದ ಪ್ರಶಾಂತ್

  ಕೆಜಿಎಫ್ ಕೆಲಸ ಸಂಪೂರ್ಣವಾಗಿ ಮುಗಿಸಿರುವ ನಿರ್ದೇಶಕ ಪ್ರಶಾಂತ್ ನೀಲ್, ಪ್ರಭಾಸ್ ಜೊತೆಗಿನ ಸಲಾರ್ ಚಿತ್ರದ ಕೆಲಸದಲ್ಲಿ ನಿರತರಾಗಿದ್ದಾರೆ. ಯಶ್ ಮುಂದಿನ ಚಿತ್ರ ಘೋಷಣೆ ಮಾಡಿಲ್ಲ. ಸಲಾರ್ ಚಿತ್ರಕ್ಕೆ ಹೊಂಬಾಳೆ ಫಿಲಂಸ್ ಬಂಡವಾಳ ಹಾಕಿದೆ.

  English summary
  Rocking star Yash starrer KGF Chapter 2 movie wont to release on july 16th due to Covid19 crisis said Taran Adarsh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X