Don't Miss!
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಕರ್ಕ, ಕುಂಭ, ಮೀನ ರಾಶಿಯ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ
- News
ಉದ್ಧವ್ ಠಾಕ್ರೆ ರಾಜೀನಾಮೆ; ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ
- Sports
IND vs ENG: ಮೊದಲ ಟಿ20 ಕಳೆದುಕೊಳ್ಳಲಿದ್ದಾರೆ ಕೊಹ್ಲಿ, ಪಂತ್, ಜಸ್ಪ್ರೀತ್ ಬುಮ್ರಾ; ಕಾರಣ?
- Education
CBSE Result 2022 : 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ ಯಾವಾಗ ?
- Finance
ಜೂ.29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
'ಕೆಜಿಎಫ್ 2' ಕಲೆಕ್ಷನ್ ಬಿತ್ತು: 42ನೇ ದಿನಕ್ಕೆ ಗಳಿಸಿದ್ದೆಷ್ಟು?
ಕನ್ನಡದ ಒಂದು ಸಿನಿಮಾ ಇಡೀ ಜಗ್ಗತ್ತಿನ ಗಮನ ಸೆಳೆದಿದೆ. ಚಿತ್ರ ರಿಲೀಸ್ ಆದ ಮೂರೇ ದಿನದಲ್ಲಿ ಭವಿಷ್ಯ ಬರೆಯುವ ಕಾಲ ಇದು. ಆದರೆ ಕೆಜಿಎಫ್ 2 ಚಿತ್ರಕ್ಕೆ ಮಾತ್ರ ಇದು ಅನ್ವಯ ಅಗುದಿಲ್ಲ. ಯಾಕೆಂದರೆ ಕೆಜಿಎಫಪ್ 2 ವಿಶ್ವದಾದ್ಯಂತ ತೆರೆಕಂಡು 40 ದಿನಗಳು ಯಶಸ್ವಿ ಪ್ರದರ್ಶನ ಕಂಡಿದೆ.
ದಿನದಿಂದ ದಿನಕ್ಕೆ ಕೆಜಿಎಫ್ 2 ಸಿನಿಮಾದ ಗಳಿಕೆ ಹೆಚ್ಚುತ್ತಲೆ ಇದೆ. ಇನ್ನು 40 ದಿನಗಳ ಬಳಿ ಸಿನಿಮಾ ಕಲೆಕ್ಷನ್ ಹೇಗಿದೆ ಅಂತ ನೋಡಿದರೆ. ಗಳಿಕೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದೆ. ಹೌದು ಕೆಜೆಎಫ್ 2 ಬಕ್ಸಾಫೀಸ್ನಲ್ಲಿ ಇಳಿಕೆ ಕಂಡಿದೆ.
'ಯಶ್'
ಮುಂದಿನ
ಸಿನಿಮಾ
'ಹೊಂಬಾಳೆ
ಫಿಲ್ಮ್ಸ್'
ನಿರ್ಮಾಣ!?

ರಿಲೀಸ್ ಆದ ಮೊದಲ ದಿನದಿಂದಲೂ ಕೋಟಿ, ಕೋಟಿ ಲೂಟಿ ಮಾಡಿದ 'ಕೆಜಿಎಫ್ 2' ರಿಲೀಸ್ ಆಗಿ 42 ದಿನಗಳ ಕಳೆದಿವೆ. ಆದರೆ ಈಗಲೂ ಸಿನಿಮಾದ ಕಲೆಕ್ಷನ್ ಬಗ್ಗೆ ಇರುವ ನಿರೀಕ್ಷೆಗಳು ಮಾತ್ರ ಕಡಿಮೆ ಆಗಿಲ್ಲ. ಸದ್ಯ ಕೆಜಿಎಫ್ 2 ಗಳಿಕೆ ಪ್ರಮಾಣ ಹೇಗಿದೆ ಎನ್ನುವುದನ್ನು ಮುಂದೆ ಓದಿ.
ಹೊಂಬಾಳೆ
ಫಿಲ್ಮ್ಸ್
ನಿಂದ
ಮತ್ತೆರಡು
ಪ್ಯಾನ್
ಇಂಡಿಯಾ
ಚಿತ್ರಗಳು:
ಹೀರೋ
ಯಾರು?

ಕೆಜಿಎಫ್ 2 ಗಳಿಕೆಯಲ್ಲಿ ಭಾರಿ ಇಳಿಕೆ!
ಕೆಜಿಎಫ್ 2 ಸಿನಿಮಾ 40 ದಿನಗಳ ಬಳಿಕ ಗಳಿಕೆಯಲ್ಲಿ ಇಳಿಕೆ ಕಂಡಿದೆ. ನಲವತ್ತು ದಿನಗಳ ತನಕ ಉತ್ತಮವಾದ ಕಲೆಕ್ಷನ್ ಮಾಡುತ್ತಾ ಇತ್ತು. ಆದರೆ ದಿನ ಕಳೆದಂತೆ ಸಿನಿಮಾ ನೋಡುವವರ ಸಂಖ್ಯೆಯೂ ಕಡಿಮೆ ಆಗಿದೆ. ಹಾಗಾಗಿ ಈಗ ಕೆಜಿಎಫ್ 2 ಸಿನಿಮಾದ ಗಳಿಕೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದೆ. ಇನ್ನು 42ನೇ ದಿನ ಕಡಿಮೆ ಮೊತ್ತವನ್ನು ದಾಖಲಿಸಿದೆ ಕೆಜಿಎಫ್ 2.

42ನೇ ದಿನ KGF 2 ಗಳಿಕೆ: 1.46 ಕೋಟಿ!
ಕೆಜಿಎಫ್ 2 ಈಗಾಗಲೇ ದಾಖಲೆಯ ಮಳೆಯನ್ನೇ ಸುರಿಸಿದೆ. ಹಲವು ವಿಚಾರಗಳಲ್ಲಿ ಈ ಸಿನಿಮಾ ಮಾಡಿರುವ ದಾಖಲೆಗಳನ್ನು ಮುರಿಯುವುದು ಅಸಾಧ್ಯ ಎನ್ನಲಾಗುತ್ತಿದೆ. ಸಾಕಷ್ಟು ದಾಖಲೆಗಳನ್ನು ಮಾಡಿರುವ ಕೆಜಿಎಫ್ 2 ಕಲೆಕ್ಷನ್ 40 ದಿನಗಳ ಬಳಿಕೆ ಇಳಿಕೆ ಕಂಡಿದೆ. 42ನೇ ದಿನಕ್ಕೆ ಕೆಜಿಎಫ್ 2 ವಿಶ್ವಾದ್ಯಂತ ಗಳಿಕೆ 1.46 ಕೋಟಿ ರೂ. ವಿಶ್ವಾದ್ಯಂತ ಕಲೆಕ್ಷನ್ 2 ಕೋಟಿ ಕೂಟ ಮುಟ್ಟಿಲ್ಲ. ಆದರೆ 42 ದಿನ ಸಿನಿಮಾ ಚಿತ್ರಮಂದಿರದಲ್ಲಿ ಇರುವುದೇ ದೊಡ್ಡ ವಿಚಾರ.

'ಕೆಜಿಎಫ್ 2' ವಿಶ್ವದಾದ್ಯಂತ ಗಳಿಕೆಯ ಲೆಕ್ಕಾಚಾರ!
ಕೆಜಿಎಫ್ 2 ಸಿನಿಮಾ ಮೊದಲ ವಾರದಿಂದಲೂ ಎಷ್ಟೆಟ್ಟು ಗಳಿಕೆ ಮಾಡಿದೆ ಎನ್ನುವ ಲೆಕ್ಕಾಚಾರವನ್ನು ಟ್ರೇಡ್ ವಿಶ್ಲೇಷಕ ಮನೋಬಾಲ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಮಾಹಿತಿಯಂತೆ ಮೊದಲ ವಾರದಿಂದ 5ನೇ ವಾರಕ್ಕೆ- ₹ 1210.53 ಕೋಟಿ ರೂ. ಗಳಿಕೆ ಕಂಡಿದೆ ಕೆಜಿಎಫ್ 2.
6ನೇ ವಾರ
ದಿನ 1 - ₹ 3.10 ಕೋಟಿ ರೂ.
ದಿನ 2 - ₹ 3.48 ಕೋಟಿ ರೂ.
ದಿನ 3 - ₹ 4.02 ಕೋಟಿ ರೂ.
ದಿನ 4 - ₹ 4.68 ಕೋಟಿ ರೂ.
ದಿನ 5 - ₹ 1.87 ಕೋಟಿ ರೂ.
ದಿನ 6 - ₹ 1.46 ಕೋಟಿ ರೂ.
ಒಟ್ಟಾರೆ - ₹ 1229.14 ಕೋಟಿ ರೂ.

ಹಿಂದಿ ಕೆಜಿಎಫ್ 2ಗೆ ಭುಲ್ ಭುಲಯ್ಯ ಠಕ್ಕರ್!
ಕೆಜಿಎಫ್ 2 ಸಿನಿಮಾ 1229 ಕೋಟಿ ಗಳಿಕೆ ಕಂಡಿದೆ. ಈ ಸಾವಿರ ಕೋಟಿಯಲ್ಲಿ ಹೆಚ್ಚು ಗಳಿಕೆ ಕಂಡಿರುವುದು ನಾರ್ತ್ನಲ್ಲಿ. ಹಿಂದಿಯ ಕೆಜಿಎಫ್ 2 400 ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿದೆ. ಆದರೆ ಬಾಲಿವುಡ್ ಸಿನಿಮಾ ಭೂಲ್ ಭುಲಯ್ಯ ರಿಲೀಸ್ ಬಳಿಕ ಕೆಜಿಎಫ್ 2 ಕಲೆಕ್ಷನ್ ಕಡಿಮೆ ಆಗಿದೆ. ಅತ್ತ ಭುಲ್ ಭುಲಯ್ಯ ಸಿನಿಮಾ ಬಾಕ್ಸಾಫೀಸ್ನಲ್ಲಿ ದೊಡ್ಡ ಮಟ್ಟದಲ್ಲಿ ಗಳಿಕೆ ಕಾಣುತ್ತಾ ಇದೆ.