ತಮಿಳು ಸ್ಟಾರ್ ನಟನ ಚಿತ್ರದಲ್ಲಿ ಕೆಜಿಎಫ್ ಡೈಲಾಗ್ ಬಂತು.!
Recommended Video

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಈಗ ಬರಿ ಕನ್ನಡ ಚಿತ್ರವಲ್ಲ. ಇದು ಪಂಚಭಾಷೆಯಲ್ಲಿ ಬರ್ತಿರುವ ಬಹುಭಾಷಾ ಸಿನಿಮಾ. ಕನ್ನಡ ಸಿನಿಮಾ ಆಗಿದ್ರು, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಭಾರಿ ಹವಾ ಮಾಡ್ತಿದೆ.
ಕೆಜಿಎಫ್ ಚಿತ್ರದ ಡೈಲಾಗ್ ಗಳು ಕೂಡ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಟ್ರೈಲರ್ ನಲ್ಲಿ ಅಷ್ಟೊಂದು ಡೈಲಾಗ್ ಕಾಣಿಸಿದಿದ್ದರೂ, ಕಾರ್ಯಕ್ರಮದ ವೇದಿಕೆಗಳಲ್ಲಿ ಯಶ್ ಡೈಲಾಗ್ ಹೊಡೆದು ಕಿಕ್ ನೀಡಿದ್ದರು.
ಇದೀಗ, ಯಶ್ ಹೇಳಿದ್ದ ಕೆಜಿಎಫ್ ಡೈಲಾಗ್ ವೊಂದು ತಮಿಳು ಸ್ಟಾರ್ ನಟ ಧನುಶ್ ಸಿನಿಮಾದಲ್ಲಿ ಬಳಸಲಾಗಿದೆ. ಸದ್ಯ, ಆ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಆ ಡೈಲಾಗ್ ಕೂಡ ವೈರಲ್ ಆಗುತ್ತಿದೆ. ವಿಪರ್ಯಾಸ ಅಂದ್ರೆ, ಆ ಡೈಲಾಗ್ ಯಶ್ ಕೆಜಿಎಫ್ ನಲ್ಲೂ ಇದೆ. ಸ್ವತಃ ಯಶ್ ಇದನ್ನ ಹೇಳಿದ್ದರು. ಅಷ್ಟಕ್ಕೂ, ಯಾವುದು ಆ ಡೈಲಾಗ್.? ಮುಂದೆ ಓದಿ.....

ಯಶ್ ಹೇಳಿದ್ದ ಆ ಡೈಲಾಗ್ ಯಾವುದು?
ಕೆಜಿಎಫ್ ಟ್ರೈಲರ್ ನಲ್ಲಿ ಅಷ್ಟಾಗಿ ಡೈಲಾಗ್ ಗಳನ್ನ ಬಿಟ್ಟುಕೊಟ್ಟಿಲ್ಲ. ಆದ್ರೆ, ಖಾಸಗಿ ಕಾರ್ಯಕ್ರಮಗಳಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಡೈಲಾಗ್ ಹೊಡೆದಿದ್ದರು ಯಶ್. ಅದರಲ್ಲಿ ಒಂದು ಇದು. 'ಇಫ್ ಯೂ ಆರ್ ಬ್ಯಾಡ್, ಐ ಯಾಮ್ ಯುವರ್ ಡ್ಯಾಡ್'.

ಧನುಶ್ ಬಾಯಲ್ಲೂ ಇದೇ ಡೈಲಾಗ್
ಇದೀಗ, ತಮಿಳು ನಟ ಧನುಶ್ ಬಾಯಲ್ಲೂ ಈ ಡೈಲಾಗ್ ಬಂದಿದೆ. ಧನುಶ್ ಅಭಿನಯಿಸಿರುವ 'ಮಾರಿ-2' ಚಿತ್ರದಲ್ಲಿ ಧನುಶ್ ಈ ಡೈಲಾಗ್ ಹೇಳಿದ್ದಾರೆ. 'ಇಫ್ ಯೂ ಆರ್ ಬ್ಯಾಡ್, ಐ ಯಾಮ್ ಯುವರ್ ಡ್ಯಾಡ್' ಎಂದು ವಿಲನ್ ಗೆ ಧನುಶ್ ಅವಾಜ್ ಹಾಕಿದ್ದಾರೆ.

ಇದು ಕಾಕತಾಳೀಯ ಅಷ್ಟೇ
ಕೆಜಿಎಫ್ ಡೈಲಾಗ್ ಅವರು ಕದ್ದರು ಅಥವಾ 'ಮಾರಿ' ಡೈಲಾಗ್ ಇವರು ಕದ್ದರು ಎನ್ನುವಂತಿಲ್ಲ. ಯಾಕಂದ್ರೆ, ಇದು ಕಾಕತಾಳೀಯ ಅಷ್ಟೇ. ಕೆಜಿಎಫ್ ಚಿತ್ರದಲ್ಲಿ ಈ ಡೈಲಾಗ್ ಇದೆ ಎನ್ನುವುದು ಬಿಟ್ಟರೇ, ಈ ಡೈಲಾಗ್ ದೃಶ್ಯ ಬಹಿರಂಗವಾಗಿರಲಿಲ್ಲ. ಆದ್ರೆ, 'ಮಾರಿ-2' ಚಿತ್ರದ ಟ್ರೈಲರ್ ನಲ್ಲಿ ಈ ಡೈಲಾಗ್ ಬಹಿರಂಗವಾಗಿದೆ.

ಇನ್ನೊಂದು ವಿಶೇಷ ಏನ್ ಗೊತ್ತಾ?
ಯಶ್ ಅಭಿನಯದ ಕೆಜಿಎಫ್ ಸಿನಿಮಾ ಡಿಸೆಂಬರ್ 21 ರಂದು ರಿಲೀಸ್ ಆಗ್ತಿದೆ. ವಿಪರ್ಯಾಸ ಅಂದ್ರೆ, ಅದೇ ದಿನ ಧನುಶ್ ಅಭಿನಯದ 'ಮಾರಿ-2' ಚಿತ್ರವೂ ತೆರೆಕಾಣುತ್ತಿದೆ. ಈ ಮೂಲಕ ಕೆಜಿಎಫ್ ತಮಿಳು ಸಿನಿಮಾ ಧನುಶ್ 'ಮಾರಿ-2' ಎದುರು ಕಾದಾಡಲಿದೆ.

ಕೆಜಿಎಫ್ ಚಿತ್ರದ ಪ್ರಮುಖ ಡೈಲಾಗ್ ಗಳು
ಇದೊಂದೇ ಅಲ್ಲ, ಕೆಜಿಎಫ್ ಚಿತ್ರದಲ್ಲಿ ಇನ್ನು ಹಲವು ಖಡಕ್ ಡೈಲಾಗ್ ಗಳಿವೆ.
ಡೈಲಾಗ್ 1
''ಇನ್ಮೇಲೆ ಅವರಪ್ಪ ನನ್ನ ಮಾವ. ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ''
ಡೈಲಾಗ್ 2
''ರಕ್ತದ ವಾಸನೆ ಕಂಡು ಬೇಜಾನ್ ಮೀನುಗಳು ಒಟ್ಟಿಗೆ ಬಂದ್ ಬಿಡ್ತವೆ, ಆದರೆ ಆ ಮೀನುಗಳಿಗೆ ಗೊತ್ತಿಲ್ಲ, ಆ ರಕ್ತ ಮೀನುಗಳನ್ನ ಬೇಟೆ ಆಡುವ ತಿಮಿಂಗಲದ್ದು ಅಂತ"

ಸೌಂಡ್ ಮಾಡಿರೋ ಯಶ್
ಡೈಲಾಗ್ 3
ಅನಾಮಿಕ: ಬಾಂಬೆ ಏನು ನಿಮ್ಮಪ್ಪಂದಾ.?
ಯಶ್: ಇಲ್ಲ ಕಣೋ, ಬಾಂಬೆ ನಿಮ್ಮಪ್ಪಂದೆ, ಆದ್ರೆ, ನಿಮ್ಮ ಅಪ್ಪ ನಾನೇ....
ಡೈಲಾಗ್ 4
ಅಮ್ಮ : ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ಬರಿ ಒಂದು ಯುದ್ಧ ಗೆಲ್ಬಹುದು... ಅದೇ ನೀನು ಮುಂದೆ ನಿಂತಿದ್ದೀಯಾ ಅಂತ ಹಿಂದೆ ಇರೋ ಸಾವಿರ ಜನಕ್ಕೆ ಧೈರ್ಯ ಬಂದ್ರೆ ಪ್ರಪಂಚನೇ ಗೆಲ್ಬಹುದು....


Click it and Unblock the Notifications











