For Quick Alerts
  ALLOW NOTIFICATIONS  
  For Daily Alerts

  ಹೊಸ ನಿರ್ದೇಶಕನ ಕಥೆ ಮೆಚ್ಚಿದ 'ಕೆಜಿಎಫ್' ಡೈರೆಕ್ಟರ್

  |
  KGF Movie: ಈ ನಿರ್ದೇಶಕನ ಬಗ್ಗೆ ಹೀಗೆ ಮಾತನಾಡಿದ್ರಾ ಕೆಜಿಎಫ್ ನಿರ್ದೇಶಕ

  'ಒಂದ್ ಕಥೆ ಹೇಳ್ಲಾ' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿನಿಮಾಗೆ ಸಿಕ್ಕಿದೆ. ಇತ್ತ ಪ್ರೇಕ್ಷಕರು ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಅತ್ತ ವಿಮರ್ಶಕರು ಕೂಡ ಒಳ್ಳೆಯ ವಿಮರ್ಶೆ ನೀಡಿದ್ದಾರೆ.

  Ondh Kathe Hella Review : ಹಾರರ್ ಪ್ರಿಯರಿಗೆ ಆಪ್ತವಾಗುವ ಸಿನಿಮಾ

  ಪ್ರೇಕ್ಷಕ ಹಾಗೂ ವಿಮರ್ಶಕರನ್ನು ಗೆದ್ದ ಈ ಸಿನಿಮಾ ಈಗ ಚಿತ್ರರಂಗದವರ ಗಮನ ಸೆಳೆಯುತ್ತಿದೆ. 'ಕೆಜಿಎಫ್' ಸಿನಿಮಾದ ಮೂಲಕ ಭಾರತದಾದ್ಯಂತ ಹೆಸರು ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ಈ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

  'ಒಂದ್ ಕಥೆ ಹೇಳ್ಲಾ' ಚಿತ್ರ ನೋಡಿ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು.?

  ಸಿನಿಮಾದ ಮೇಕಿಂಗ್ ಗೆ ಫಿದಾ ಆಗಿರುವ ಅವರು ಹೊಸ ನಿರ್ದೇಶಕನ ಕಥೆಯನ್ನು ನೋಡಿ ಇಷ್ಟಪಟ್ಟಿದ್ದಾರೆ. ಪ್ರಶಾಂತ್ ನೀಲ್ ಅವರ ಮಾತುಗಳಿಂದ ನಿರ್ದೇಶಕ ಗಿರೀಶ್ ಅಂಡ್ ಟೀಮ್ ಖುಷಿಯಾಗಿದೆ. ಪ್ರಶಾಂತ್ ನೀಲ್ ಮಾತ್ರವಲ್ಲದೆ. ನಟಿ ಕೃಷಿ ತಾಪಂಡ ಹಾಗೂ ನಟ ಡಾಲಿ ಧನಂಜಯ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

  ಎಲ್ಲ ಕಡೆಯಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಚಿತ್ರ ನೋಡುವವರ ಸಂಖ್ಯೆ ಸಹ ಏರಿಕೆ ಆಗುತ್ತಿದೆ. ಸಿನಿಮಾ ನೋಡದೆ ಇರುವವರು ಆದಷ್ಟು ಬೇಗ ನೋಡಿದರೆ, ಚಿತ್ರತಂಡದ ಶ್ರಮಕ್ಕೆ ಸರಿಯಾದ ಬೆಲೆ ಸಿಗಲಿದೆ.

  'ಒಂದ್ ಕಥೆ ಹೇಳ್ಲಾ' ಸಿನಿಮಾ ಹೇಗಿದೆ?

  ಕನ್ನಡದಲ್ಲಿ ಹಾರರ್ ಸಿನಿಮಾಗಳ ಟ್ರೆಂಡ್ ಕಡಿಮೆಯಾಗಿರುವ ಈ ಸಮಯದಲ್ಲಿ ಒಂದೊಳ್ಳೆ ಹಾರರ್ ಚಿತ್ರ ಬಂದಿದೆ ಅದೇ 'ಒಂದ್ ಕಥೆ ಹೇಳ್ಲಾ' ಸಿನಿಮಾ. ಒಂದು ಕಥೆಯಿಂದ ಶುರುವಾಗುವ ಈ ಸಿನಿಮಾದಲ್ಲಿ ಐದು ಕಥೆಗಳು ಬರುತ್ತದೆ. ಎಲ್ಲ ಕಥೆಗಳು ಥ್ರಿಲ್ಲಿಂಗ್ ಆಗಿವೆ. ಚಿತ್ರಮಂದಿರಕ್ಕೆ ಹೋದವರಿಗೆ ನಿರಾಸೆ ಮಾಡದೆ ಕಳುಹಿಸುವ ಈ ಚಿತ್ರ ಒಂದು ಭರವಸೆಯ ಸಿನಿಮಾ.

  English summary
  'KGF' fame director Prashanth Neel liked 'Ondu Kathe Hella' kannada movie. The movie is a horror anthology. camera work and background score was highlight. 'Ondu Kathe Hella' is directed by Girish G.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X