ವಿಜಯ್ 'ಮಾಸ್ಟರ್' ಸಿನಿಮಾ ಲೀಕ್; 'KGF' ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದೇನು?
ತಮಿಳು ಸ್ಟಾರ್ ನಟ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷೆಯ ಮಾಸ್ಟ್ರ ಸಿನಿಮಾ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಅನೇಕ ವಿಘ್ನಗಳ ನಡುವೆಯೂ ಮಾಸ್ಟರ್ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಶೇ.50 ಆಸದಲ್ಲೇ ಪ್ರೇಕ್ಷಕರಿಗೆ ಸಿನಿಮಾ ತೋರಿಸಲು ಮಾಸ್ಟರ್ ತಂಡ ಮುಂದಾಗಿದೆ. ಸಂಕಷ್ಟಗಳ ನಡುವೆಯೂ ಸಿನಿಮಾ ರಿಲೀಸ್ ಮಾಡುತ್ತಿರುವ ಚಿತ್ರತಂಡಕ್ಕೆ ಹ್ಯಾಕರ್ಸ್ ಗಳ ಕಾಟ ಶುರುವಾಗಿದೆ.
Recommended Video
ಮಾಸ್ಟರ್ ಸಿನಿಮಾದ ಪ್ರಮುಖ ದೃಶ್ಯಗಳನ್ನು ಹ್ಯಾಕರ್ಸ್ ಲೀಕ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ದೃಶ್ಯಗಳು ಲೀಕ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಿನಿಮಾತಂಡ ವಿಡಿಯೋ ಶೇರ್ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಲೀಕ್ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಮಾಸ್ಟರ್ ನಿರ್ದೇಶಕರ ಪ್ರತಿಕ್ರಿಯೆ
ಮಾಸ್ಟರ್ ನಿರ್ದೇಶಕ ಲೋಕೇಶ್ ಕನಗರಾಜ್ ಬಗ್ಗೆ ಪ್ರತಿಕ್ರಿಯೆ ನೀಡಿ, ಮಾಸ್ಚರ್ ಸಿನಿಮಾ 1.5 ವರ್ಷದಿಂದ ಕಷ್ಟಪಟ್ಟು ಸಿನಿಮಾ ಮಾಡಿದೆ. ನೀವೆಲ್ಲರೂ ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡುತ್ತೀರಿ ಎಂದು ಭಾವಿಸುತ್ತೇನೆ. ಲೀಕ್ ಆದ ವಿಡಿಯೋವನ್ನು ಶೇರ್ ಮಾಡಬೇಡಿ. ಇನ್ನೊಂದು ದಿನ ಕಾಯಿರಿ. ಮಾಸ್ಟರ್ ನಿಮ್ಮ ಮುಂದೆ ಬರಲಿದೆ' ಎಂದು ಹೇಳಿದ್ದಾರೆ.

ಕಿಲ್ ಪೈರಸಿ ಎಂದ ಪ್ರಶಾಂತ್ ನೀಲ್
ಲೋಕೇಶ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್, ಮಾಸ್ಟರ್ ಪೊಂಗಲ್ ಗೆ ರಿಲೀಸ್ ಆಗುತ್ತಿದೆ. ನಾವೆಲ್ಲರೂ ಸಿನಿಮಾವನ್ನು ಚಿತ್ರಮಂದಿರಗಳಲ್ಲೇ ನೋಡಬೇಕು. ಕಿಲ್ ಪೈರಸಿ' ಎಂದು ಹೇಳಿದ್ದಾರೆ.

ಪ್ರಶಾಂತ್ ನೀಲ್ ವಿರುದ್ಧ ರೊಚ್ಚಿಗೆದ್ದ ಕನ್ನಡ ಅಭಿಮಾನಿಗಳು
ಪ್ರಶಾಂತ್ ನೀಲ್ ಮಾಸ್ಟರ್ ಸಿನಿಮಾ ಪರ ಮಾತಾಡುತ್ತಿದ್ದಂತೆ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಕನ್ನಡ ಸಿನಿಮಾಗಳು ಪೈರಸಿ ಆದಾಗ ಯಾರು ಮಾತನಾಲ್ಲ. ಬೇರೆ ಭಾಷೆಯ ಸಿನಿಮಾಗಳಿಗೆ ತೊಂದರೆ ಆದರೆ ಪ್ರತಿಕ್ರಿಯೆ ನೀಡುತ್ತೀರಿ, ಬೆಂಬಲಕ್ಕೆ ನಿಲ್ಲುತ್ತೀರಿ, ಕನ್ನಡದಲ್ಲಿ ಪೈಲ್ವಾನ್ ಸಿನಿಮಾ ಲೀಕ್ ಆಗಿ ವೈರಲ್ ಆದಾಗ ಯಾರು ಮಾತನಾಡಿಲ್ಲ ಎಂದು ನೆಟ್ಟಿಗರು ರೊಚ್ಚಿಗೆದಿದ್ದಾರೆ.

ಜನವರಿ 13ಕ್ಕೆ ಮಾಸ್ಟರ್ ರಿಲೀಸ್
ಮಾಸ್ಟರ್ ಪೊಂಗಲ್ ಹಬ್ಬದ ಪ್ರಯುಕ್ತ ನಾಳೆ (ಜನವರಿ 13) ರಿಲೀಸ್ ಆಗುತ್ತಿದೆ. ತಮಿಳು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ಸಿನಿಮಾ ರಿಲೀಸ್ ಆಗುತ್ತಿದ್ದೆ. ಚಿತ್ರದಲ್ಲಿ ದಳಪತಿ ವಿಜಯ್ ಎದುರು ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.


Click it and Unblock the Notifications











