ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್‌ಗೆ ಆಕ್ಷನ್-ಕಟ್ ಹೇಳಿದ ಪುಟ್ಟ ಬಾಲಕಿ!
ಕೆಜಿಎಫ್ ಸಿನಿಮಾ ಮೂಲಕ ದೇಶದ ಗಮನ ಸೆಳೆದಿರುವ, ಪ್ರತಿಭಾನ್ವಿತ ನಿರ್ದೇಶಕ ಎನಿಸಿಕೊಂಡಿರುವ ಪ್ರಶಾಂತ್ ನೀಲ್ ಗೆ ಪುಟಾಣಿ ಹುಡುಗಿಯೊಂದು ಆಕ್ಷನ್ ಕಟ್ ಹೇಳಿದ್ದಾಳೆ!
Recommended Video
ಹೌದು, ಸೌಥ್ ಇಂಡಿಯಾದ ಸ್ಟಾರ್ ನಿರ್ದೇಶಕರಲ್ಲೊಬ್ಬರಾದ ಪ್ರಶಾಂತ್ ನೀಲ್‌ಗೆ ಪುಟ್ಟ ಹುಡುಗಿ ಆಕ್ಷನ್, ಕಟ್ ಹೇಳಿದ್ದಾಳೆ. ಆ ಪುಟ್ಟ ಹುಡುಗಿ ಮತ್ಯಾರೂ ಅಲ್ಲ ಪ್ರಶಾಂತ್ ನೀಲ್ ಮಗಳು.
ಲಾಕ್‌ಡೌನ್ ನಿಂದಾಗಿ ಮನೆಯಲ್ಲಿಯೇ ಉಳಿದಿರುವ ಪ್ರಶಾಂತ್ ನೀಲ್ , ಮಕ್ಕಳೊಂದಿಗೆ ಸಂತಸದಿಂದ ಸಮಯ ಕಳೆಯುತ್ತಿದ್ದಾರೆ. ಅದರ ವಿಡಿಯೋ ಒಂದನ್ನು ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ಹಂಚಿಕೊಂಡಿರುವ ಪ್ರಶಾಂತ್ ನೀಲ್
ಪ್ರಶಾಂತ್ ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರಶಾಂತ್ ನೀಲ್ ಮಗಳು ಸ್ಲೇಟ್ ಹಿಡಿದು ಆಕ್ಷನ್ ಹೇಳುತ್ತಾಳೆ. ಪ್ರಶಾಂತ್ ತಮ್ಮ ಮಗನಿಗೆ ಮೆತ್ತಗೆ ಕೋಲಿನಿಂದ ಹೊಡೆಯುತ್ತಾರೆ, ಮಗನು ದೊಡ್ಡ ಪೆಟ್ಟುಬಿದ್ದವನಂತೆ ನಟಿಸುತ್ತಾ ಉರುಳಿ ಬೀಳುತ್ತಾನೆ. ಇದು ಪ್ರಶಾಂತ್ ಮಕ್ಕಳೊಂದಿಗೆ ಆಡುತ್ತಿರುವ ಮಕ್ಕಳಾಟ.

ತಮಾಷೆ ವ್ಯಕ್ತಿತ್ವದ ತಂದೆಯಾಗಿ ಪ್ರಶಾಂತ್
ಪ್ರಶಾಂತ್ ನೀಲ್ ಗೂ ಮಗ ಹೊಡೆಯುತ್ತಾನೆ, ದೊಡ್ಡ ಪೆಟ್ಟು ಬಿದ್ದವರಂತೆ ಪ್ರಶಾಂತ್ ಅಭಿನಯಿಸುತ್ತಾರೆ. ಪ್ರಶಾಂತ್ ಮಡದಿ ಚಿತ್ರೀಕರಿಸಿರುವ ಈ ವಿಡಿಯೋ ಬಹಳ ಮುದ್ದಾಗಿದೆ. ಸದಾ ಗಂಭೀರವಾಗಿ ಕಾಣಿಸಿಕೊಳ್ಳುವ ಪ್ರಶಾಂತ್ ವಿಡಿಯೋದಲ್ಲಿ ತಮಾಷೆ ವ್ಯಕ್ತಿತ್ವದ ತಂದೆಯಾಗಿ ಕಾಣುತ್ತಾರೆ.

ಕೆಜಿಎಫ್ 2 ಚಿತ್ರೀಕರಣ ಬಹುತೇಕ ಮುಗಿದಿದೆಸ
ಕೆಜಿಎಫ್ 2 ಸಿನಿಮಾ ಇನ್ನೇನು ಚಿತ್ರೀಕರಣ ಮುಗಿದಿದೆ. ಕೆಲವು ಟಚ್‌ಅಪ್ ಸೀನ್‌ಗಳಷ್ಟೆ ಬಾಕಿ ಇದೆ ಎನ್ನಲಾಗುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಸಿನಿಮಾ ಇದ್ದು, ಅಕ್ಟೋಬರ್ 23 ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಿಸಿದೆ.


Click it and Unblock the Notifications











