ಮಹಾಕುಂಭ ಮೇಳದಲ್ಲಿ ಕನ್ನಡ ಚಿತ್ರರಂಗದ ಮಹಾರಾಣಿ, ಮಾಸ್ಕ್‌ನಲ್ಲಿಯೇ ಮಿಂದೆದ್ದ ಈ ಚೆಲುವೆ ಯಾರು ?
ಸನಾತನ ಧರ್ಮದ ಅತ್ಯಂತ ಪ್ರಸಿದ್ಧ ಮಹಾಪರ್ವ ಮತ್ತು ಧಾರ್ಮಿಕ ಮೇಳವಾದ ಮಹಾಕುಂಭ ಮೇಳಕ್ಕೆ ಪ್ರಪಂಚದಾದ್ಯಂತದಿಂದ ಅನೇಕ ಜನರು ಬರುತ್ತಿದ್ದಾರೆ. ಗಂಗಾ, ಯಮುನಾ, ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಪಾಪ ಎಲ್ಲ ನಾಶ ಮಾಡಿಕೊಂಡು ಮೋಕ್ಷ ಸಿಗುತ್ತೆ ಎನ್ನುವ ನಂಬಿಕೆಯಲ್ಲಿ ಮರಳಿ ಮನೆ ಕಡೆ ಬರುತ್ತಿದ್ದಾರೆ.
ವಿಶೇಷ ಅಂದರೆ ಹೀಗೆ ಹೋಗುತ್ತಿರುವವರಲ್ಲಿ ಕೇವಲ ಜನಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿ ಸ್ಟೇಟಸ್ ಹೊಂದಿರುವರು ಕೂಡ ಇದ್ದಾರೆ. ಆ ವುಡ್ ಈ ವುಡ್ ಎನ್ನದೇ ಎಲ್ಲ ಭಾಷೆಯ ತಾರೆಯರು ಕೂಡ ಶಾಹಿ ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ತಮ್ಮ ಈ ಆಧ್ಯಾತ್ಮಿಕ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಶ್ರೀನಿಧಿ ಶೆಟ್ಟಿ ಇದಕ್ಕೆ ಸದ್ಯದ ಉದಾಹರಣೆ.

ಹೌದು, ಕೆಜಿಎಫ್ ಎಂಬ ಒಂದೇ ಒಂದು ಚಿತ್ರದ ಮೂಲಕ ನ್ಯಾಷನಲ್ ಲೆವಲ್‌ನಲ್ಲಿ ನಾಯಕಿಯಾಗಿ ಮಿಂಚಿದ ಶ್ರೀನಿಧಿ ಶೆಟ್ಟಿ ಮಹಾಕುಂಭ ಮೇಳಕ್ಕೆ ತೆರಳಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ತಮ್ಮ ಬದುಕಿನ ಈ ಅದ್ಭುತ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಶ್ರೀನಿಧಿ ಶೆಟ್ಟಿ ಮೌನಿ ಅಮವಾಸ್ಯೆಯಂದು ಮಹಾಕುಂಭ ಮೇಳದಲ್ಲಿನ ತ್ರಿವೇಣಿ ಸಂಗಮದಲ್ಲಿ ನಾನು ಪವಿತ್ರವಾದ ಸ್ನಾನ ಮಾಡುತ್ತೇನೆ ಎಂದು ಕನಸು ಮನಸಿನಲ್ಲಿಯೂ ಕೂಡ ಅಂದುಕೊಂಡಿರಲಿಲ್ಲ ಈ ಅದ್ಭುತವಾದ ಅನುಭವವನ್ನು ನಾನು ಸಂಪೂರ್ಣವಾಗಿ ಅನುಭವಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಬದುಕು ಅಚ್ಚರಿಯ ಸಂತೆ ಈ ದೈವಿಕ ಅನುಗ್ರಹ ಮತ್ತು ಆಶೀರ್ವಾದದಿಂದ ನನ್ನ ಹೃದಯ ತುಂಬಿದೆ ಎಂದು ಹೇಳಿದ್ದಾರೆ.
ಇನ್ನೂ ಕೆಜಿಎಫ್ ಚಿತ್ರದ ಮೂಲಕ ಶ್ರೀನಿಧಿ ಕೇವಲ ಕನ್ನಡಿಗರ ಹೃದಯವನ್ನು ಗೆದ್ದಿಲ್ಲ. ಭಾರತದ ಅಸಂಖ್ಯಾತ ಜನರ ಹೃದಯವನ್ನು ಗೆದ್ದಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಶ್ರೀನಿಧಿ ಹೋದಲ್ಲಿ ಬಂದಲ್ಲಿ ಜನ ಸೆಲ್ಫಿಗಾಗಿ ಇವರನ್ನು ಮುತ್ತಿಕೊಳ್ಳುವುದು ಇದೆ. ಪೀಡಿಸುವುದು ಇದೆ. ಹೀಗಾಗಿಯೇ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಶ್ರೀನಿಧಿ ಶೆಟ್ಟಿ ಮಹಾಕುಂಭ ಮೇಳದಲ್ಲಿ ಭಾಗಿಯಾಗಿದ್ದರಾ.? ಮಾಸ್ಕ್ ಹಾಕಿಕೊಂಡೆ ನೀರಿನಲ್ಲಿ ಮುಳುಗೇಳಲು ಇದೇ ಕಾರಣನಾ ? ಉತ್ತರ ಶ್ರೀನಿಧಿ ಶೆಟ್ಟಿ ಅವರೇ ಕೊಡಬೇಕಾದರೂ ಆರೋಗ್ಯದ ದೃಷ್ಟಿಯಿಂದ ಕೂಡ ಶ್ರೀನಿಧಿ ಶೆಟ್ಟಿ ಮಾಸ್ಕ್ ಹಾಕಿಕೊಂಡಿದ್ದರು ಹಾಕಿಕೊಂಡಿರಬಹುದು ಎನ್ನುವ ವಾದವನ್ನು ಸದ್ಯ ಅನೇಕರು ಮಾಡುತ್ತಿದ್ದಾರೆ.
ಅಂದ್ಹಾಗೇ ಮೊನ್ನೆ ಮೊನ್ನೆಯಷ್ಟೇ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಕೂಡ ತೆರಳಿದ್ದರು. ತಮ್ಮ ಸ್ನೇಹಿತರಾದ ಚಾರ್ಲಿ 777 ಚಿತ್ರದ ನಿರ್ದೇಶಕ ಕಿರಣ್ ರಾಜ್, ನಿರ್ದೇಶಕ ರಾಜ್ ಬಿ ಶೆಟ್ಟಿ ಜೊತೆ ಪವಿತ್ರವಾದ ಸ್ನಾನ ಮಾಡಿದ್ದರು. ಈಗ ಈ ಸಾಲಿಗೆ ಶ್ರೀನಿಧಿ ಶೆಟ್ಟಿ ಸೇರಿಕೊಂಡಿದ್ದಾರೆ.
ಇನ್ನುಳಿದಂತೆ ಪ್ರಯಾಗ್ ರಾಜ್‌ನ ಮಹಾಕುಂಭಮೇಳಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಮೌನಿ ಅಮವಾಸ್ಯೆಯ ದಿನದಂದೇ 7.6 ಕೋಟಿ ಜನ ಅಮೃತ ಸ್ನಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೌನಿ ಅಮವಾಸ್ಯೆಯಂದು ಕಾಲ್ತುಳಿತ ಸಂಭವಿಸಿದರು ಕೂಡ ಮಹಾಕುಂಭ ಮೇಳಕ್ಕೆ ಬರುತ್ತಿರುವ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ.
ಇನ್ನು ಶ್ರೀನಿಧಿ ಶೆಟ್ಟಿ ಅವರ ಚಿತ್ರಗಳ ವಿಚಾರಕ್ಕೆ ಬರುವುದಾದರೆ, ಕೆಜಿಎಫ್ 1 ಮತ್ತು 2ರ ನಂತರ ತಮಿಳಿನಲ್ಲಿ ವಿಕ್ರಮ್ ಜೊತೆ ಕೋಬ್ರಾ ಚಿತ್ರದಲ್ಲಿ ನಟಿಸಿದ್ದರು. ಆದರೆ ಈ ಚಿತ್ರ ಶ್ರೀನಿಧಿ ಶೆಟ್ಟಿ ಕೈ ಹಿಡಿಯಲಿಲ್ಲ. ಸದ್ಯ ಶ್ರೀನಿಧಿ ಶೆಟ್ಟಿ 'ತೆಲಸು ಕದಾ', 'ಹಿಟ್' ಚಿತ್ರದ ಮೂರನೇ ಭಾಗದಲ್ಲಿ ಅಭಿನಯಿಸುತ್ತಿದ್ದಾರೆ. ಚೇರನ್ ನಿರ್ದೇಶನದ ಸುದೀಪ್ ಅಭಿನಯದ ಕನ್ನಡ ಚಿತ್ರಕ್ಕೂ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ಈ ಚಿತ್ರ ಶುರುವಾಗುವುದು ಯಾವಾಗ ಎನ್ನುವದಕ್ಕೆ ಉತ್ತರ ಇಲ್ಲ.


Click it and Unblock the Notifications











