ಶಿವಣ್ಣನ ಘೋಸ್ಟ್ ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ನಟನೆ

ಕಳೆದ ವರ್ಷದ ಅಂತ್ಯದಲ್ಲಿ ವೇದ ಚಿತ್ರದ ಮೂಲಕ ಗೆಲುವು ಸಾಧಿಸಿ ಕಮ್‌ಬ್ಯಾಕ್ ಮಾಡಿದ ಶಿವ ರಾಜ್‌ಕುಮಾರ್ ಸದ್ಯ ಘೋಸ್ಟ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಬೀರ್‌ಬಲ್ ಹಾಗೂ ಓಲ್ಡ್ ಮಾಂಕ್ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದಿದ್ದ ಯುವ ನಿರ್ದೇಶಕ ಲಾರ್ಡ್ ಎಂ ಜಿ ಶ್ರೀನಿವಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಕಳೆದ ವಾರವಷ್ಟೇ ಮೊದಲ ಶೆಡ್ಯೂಲ್‌ ಮುಕ್ತಾಯಗೊಂಡಿತ್ತು.

ಇನ್ನು ಈ ಚಿತ್ರ ತನ್ನ ಪೋಸ್ಟರ್ ಹಾಗೂ ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ದೊಡ್ಡ ಮಟ್ಟದಲ್ಲಿಯೇ ಹೈಪ್ ಹುಟ್ಟಿಸುತ್ತಿದೆ. ಇದರ ಜತೆಗೆ ಚಿತ್ರಕ್ಕೆ ಆಯ್ಕೆಯಾಗುತ್ತಿರುವ ನಟ ನಟಿಯರೂ ಸಹ ಚಿತ್ರದ ಕುರಿತು ಸುದ್ದಿ ಹರಿದಾಡಲು ಕಾರಣವಾಗಿದ್ದಾರೆ. ಹೌದು, ಮಲಯಾಳಂ ನಟ ಜಯರಾಮ್ ಹಾಗೂ ಬಾಲಿವುಡ್‌ನ ಅನಪಮ್ ಖೇರ್ ಘೋಸ್ಟ್ ಚಿತ್ರತಂಡ ಸೇರಿದ್ದು ಸಾಕಷ್ಟು ಸುದ್ದಿಯನ್ನು ಮಾಡಿತ್ತು. ಇದಾದ ಬಳಿಕ ಇದೀಗ ಕೆಜಿಎಫ್ ಚಿತ್ರ ಸರಣಿ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಘೋಸ್ಟ್ ಚಿತ್ರತಂಡ ಸೇರಿದ್ದಾರೆ.

KGF fame Archana Jois to play a major role in Ghost movie

ಹೌದು, ಕೆಜಿಎಫ್ ಚಿತ್ರ ಸರಣಿಯಲ್ಲಿ ಚಿತ್ರದ ನಾಯಕ ರಾಕಿ ಭಾಯ್‌ನ ತಾಯಿ ಪಾತ್ರವನ್ನು ನಿರ್ವಹಿಸಿದ್ದ ಅರ್ಚನಾ ಜೋಯಿಸ್ ಘೋಸ್ಟ್ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸಲಿದ್ದು, ಚಿತ್ರದುದ್ದಕ್ಕೂ ಇರಲಿರುವ ಪಾತ್ರ ಇದಾಗಿದೆ ಹಾಗೂ ಈ ಪಾತ್ರಗಳಿಂದ ಹಲವು ಟ್ವಿಸ್ಟ್‌ಗಳು ನಿರ್ಮಾಣವಾಗಲಿವೆ. ಸದ್ಯ ಘೋಸ್ಟ್ ಚಿತ್ರಕ್ಕೆ ಆಯ್ಕೆಯಾಗಿರುವ ಅರ್ಚನಾ ಜೋಯಿಸ್ ಹೊಂದಿಸಿ ಬರೆಯಿರಿ ಚಿತ್ರದಲ್ಲೂ ನಟಿಸಿದ್ದಾರೆ.

ಇತ್ತ ಘೋಸ್ಟ್ ಚಿತ್ರ ಇತ್ತೀಚಿಗಷ್ಟೆ ತನ್ನ ಥೀಮ್ ಬಿಜಿಎಂ ಅನ್ನು ಬಿಡುಗಡೆ ಮಾಡುವ ಮೂಲಕ ಕನ್ನಡ ಸಿನಿ ರಸಿಕರ ಗಮನವನ್ನು ಸೆಳೆದಿತ್ತು. ಅರ್ಜುನ್ ಜನ್ಯಾ ಮ್ಯೂಸಿಕ್ ಕೇಳಿದ ಸಿನಿ ರಸಿಕರು ಈ ಚಿತ್ರದ ಹಾಡುಗಳು ಹಾಗೂ ಬಿಜಿಎಂ ಮೇಲೆ ಮತ್ತಷ್ಟು ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದುಕೊಂಡಿದ್ದರು. ಇನ್ನು ನಿರ್ದೇಶಕ ಶ್ರೀನಿ ಹೇಳಿರುವ ಪ್ರಕಾರ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಆಗಿರಲಿದ್ದು, ಹಲವು ವರ್ಷಗಳ ಬಳಿಕ ಶಿವಣ್ಣ ಥ್ರಿಲ್ಲರ್ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ.

More from Filmibeat

English summary
KGF fame Archana Jois to play a major role in Ghost movie. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X