'ಕೆಜಿಎಫ್' ಸಿನಿಮಾ ಗರುಡ ರಾಮ್ ಸಹೋದರ ಈಗ ಡಾನ್:'ಡಾಲರ್ಸ್ ಪೇಟೆ'ಯಲ್ಲಿ ಡವಡವ

By ಫಿಲ್ಮಿಬೀಟ್ ಡೆಸ್ಕ್

ಕೆಜಿಎಫ್ ಸಿನಿಮಾ ನೋಡಿದವರಿಗೆ ಗರುಡ ರಾಮ್ ಯಾರು ಅಂತ ಹೇಳಬೇಕಿಲ್ಲ. ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ನಟ ದಕ್ಷಿಣ ಭಾರತದಲ್ಲಿ ವಿಲನ್ ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಸಹೋದರನ ಅದೇ ವಿಲನ್ ಲುಕ್ ಕೊಟ್ಟು ಕೂತಿದ್ದಾರೆ.

ಮೋಹನ್ ಎನ್ ಮುನಿನಾರಾಯಣಪ್ಪ ಆಕ್ಷನ್ ಕಟ್ ಹೇಳುತ್ತಿರುವ ಮೊದಲ ಸಿನಿಮಾದಲ್ಲಿ ಗರುಡ ರಾಮ್ ಸಹೋದರ ನಟಿಸುತ್ತಿದ್ದಾರೆ. ಅಂದ್ಹಾಗೆ ಇವರ ಹೆಸರು ವೆಂಕಟ್ ರಾಜ್. 'ಡಾಲರ್ಸ್ ಪೇಟೆ' ಅನ್ನೋ ಸಿನಿಮಾದಲ್ಲಿ ಖಡಕ್ ಲುಕ್ ಕೊಟ್ಟಿದ್ದಾರೆ.

KGF Fame Garuda Ram Brother Venkat Raj Will Seen In Dollars Pete Movie As Don

'ಡಾಲರ್ಸ್ ಪೇಟೆ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್, ಕ್ಯಾರೆಕ್ಟರ್ ಪೋಸ್ಟರ್ ಮೂಲಕ ಚಿತ್ರತಂಡ ಗಮನ ಸೆಳೆಯುತ್ತಿದೆ. ಅಂದ್ಹಾಗೆ, 'ಡಾಲರ್ಸ್ ಪೇಟೆ' ಸಿನಿಮಾದಲ್ಲಿ ಡಾನ್ ಪಳನಿ ಅವತಾರದಲ್ಲಿ ವೆಂಕಟ್ ರಾಜ್ ಕಾಣಿಸಿಕೊಂಡಿದ್ದಾರೆ. ಡಾನ್ ಪಳನಿಯ ಇದೇ ಲುಕ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.

'ಡಾಲರ್ಸ್ ಪೇಟೆ' ಸಿನಿಮಾತಂಡ ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿ ರೀ-ರೆಕಾರ್ಡಿಂಗ್‌ನಲ್ಲಿ ಬ್ಯುಸಿಯಾಗಿದೆ. ಈ ಹಿಂದೆ ಸೌಮ್ಯ ಜಗನ್ ಮೂರ್ತಿ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ಡಾನ್ ಪಳನಿ ಲುಕ್ ರಿವೀಲ್ ಮಾಡಿದೆ. ನಿರ್ದೇಶಕ ಮೋಹನ್ ಈ ಹಿಂದೆ 'ಮಾರ್ಫಿ', 'ಮದಗಜ' ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

KGF Fame Garuda Ram Brother Venkat Raj Will Seen In Dollars Pete Movie As Don

'ಡಾಲರ್ಸ್ ಪೇಟೆ' ಸಿನಿಮಾದಲ್ಲಿ ಸೌಮ್ಯ ಜಗನ್ ಮೂರ್ತಿ, ಆಕರ್ಷ್ ಕಮಲ, ವೆಂಕಟ್ ರಾಜ್, ಕುಶಾಲ್. ಎಸ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದು, ಪೃಥ್ವಿ ಅಂಬರ್ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
KGF Fame Garuda Ram Brother Venkat Raj Will Seen In Dollars Pete Movie As Don, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X