For Quick Alerts
  ALLOW NOTIFICATIONS  
  For Daily Alerts

  ಹೀರೋ ಘೋಷಣೆ ಮಾಡಿದ ಹೊಂಬಾಳೆ; 'ರಿಚರ್ಡ್ ಆಂಟನಿ'ಯಾಗಿ ಬರ್ತಿದ್ದಾರೆ ಸಿಂಪಲ್ ಸ್ಟಾರ್

  |

  ಸ್ಯಾಂಡಲ್ ವುಡ್ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಮ್ಸ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಘೋಷಣೆ ಮಾಡುತ್ತಿದೆ. ಬಹುನಿರೀಕ್ಷೆಯ 'ಕೆಜಿಎಫ್ ಚಾಪ್ಟರ್ 2' ಬಿಡುಗಡೆಗೆ ಸಜ್ಜಾಗುತ್ತಿರುವ ಹೊಂಬಾಳೆ, ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ ನಲ್ಲಿ 'ಸಲಾರ್' ಸಿನಿಮಾವನ್ನು ನಿರ್ಮಾಣ ಮಾಡಿತ್ತಿದೆ. ಪುನೀತ್ ರಾಜ್ ಕುಮಾರ್ ಮತ್ತು ಪವನ್ ಕುಮಾರ್ ಜೋಡಿಯ 'ದ್ವಿತ್ವ' ಟೈಟಲ್ ಪೋಸ್ಟರ್ ಅನ್ನು ಇತ್ತೀಚಿಗಷ್ಟೆ ಪ್ರಕಟಿಸಿದೆ.

  ಇದರ ಬೆನ್ನಲ್ಲೇ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಅಂದಹಾಗೆ ಸಿನಿಮಾದ ನಾಯಕ ಟೈಟಲ್ ಮತ್ತು ನಾಯಕ ಯಾರೆಂದು ಜುಲೈ 11ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿತ್ತು. ಹೊಂಬಾಳೆ ಫಿಲಂಮ್ಸ್ ನಲ್ಲಿ ಸಿನಿಮಾ ಬರ್ತಿದೆ ಎಂದರೆ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿರುತ್ತೆ. ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಹೊಂಬಾಳೆ ಸಖತ್ ಸುದ್ದಿ ನೀಡಿದೆ.

  ಬಹುಜನರ ನಿರೀಕ್ಷೆಯಂತೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹೊಂಬಾಳೆ ಬ್ಯಾನರ್ ನ ಮುಂದಿನ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ 'ರಿಚರ್ಡ್ ಆಂಟನಿ' ಎಂದು ಶೀರ್ಷಿಕೆ ಇಡಲಾಗಿದೆ. ಇನ್ನು ವಿಶೇಷ ಎಂದರೆ ರಕ್ಷಿತ್ ನಾಯಕನಾಗಿ ಕಾಣಿಸಿಕೊಳ್ಳುವ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

  12.51ಕ್ಕೆ ಸಿನಿಮಾದ ಟೈಟಲ್ ಮತ್ತು ನಾಯಕನನ್ನು ಬಹಿರಂಗ ಪಡಿಸುವ ಮೂಲಕ ಹೊಂಬಾಳೆ ಫಿಲಂಮ್ಸ್ ಕುತೂಹಲಕ್ಕೆ ತೆರೆ ಎಳೆದಿದೆ. ಅಂದಹಾಗೆ ರಕ್ಷಿತ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಅದರಂತೆ ಸಿಂಪಲ್ ಸ್ಟಾರ್ ಹೊೆಂಬಾಳೆ ಬ್ಯಾನರ್ ನಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ.

   KGF fame Hombale films reveals new movie Richard Anthony with Rakshit Shetty
  ಕೆಲವರು ಮಾಡಿದ ನೀಚ ಕೆಲಸಕ್ಕೆ ಬೇಸರಗೊಂಡ ವಿನೋದ್ ಪ್ರಭಾಕರ್ | Filmibeat Kannada

  ಖಾಸಗಿ ಸುದ್ದಿವಾಹಿನಿಯೊಂದು ರಕ್ಷಿತ್ ತೇಜೋವಧೆ ಮಾಡಿದ ಆರೋಪಕ್ಕೆ ರಕ್ಷಿತ್ ಶೆಟ್ಟಿ ಜುಲೈ 11ಕ್ಕೆ ಉತ್ತರ ಕೊಡುವುದಾಗಿ ಸವಾಲು ಹಾಕಿದ್ದರು. ಅದರಂತೆ ರಕ್ಷಿತ್ 11ಕ್ಕೆ ಹೊಂಬಾಳೆ ಬ್ಯಾನರ್ ನಲ್ಲಿ ನಾಯತನಾಗಿ , ನಿರ್ದೇಶಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾಂಬಿನೇಷನ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದ್ದು, 'ರಿಚರ್ಡ್ ಆಂಟನಿ'ಯಾಗಿ ರಕ್ಷಿತ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾದುನೋಡಬೇಕು.

  Read more about: hombale films sandalwood
  English summary
  KGF fame Hombale films reveals new movie title Richard Anthony with Rakshit Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X