ಪಾಕಿಸ್ತಾನಿಯರಿಗೂ ಗೊತ್ತು 'KGF' ರಾಕಿ ಗತ್ತು.. ಇಲ್ನೋಡಿ ಪಾಕ್ ಹಳ್ಳಿಗಳಲ್ಲಿದ್ದಾರೆ ಯಶ್ ಫ್ಯಾನ್ಸ್!

ರಾಕಿಂಗ್ ಸ್ಟಾರ್ ಯಶ್ ನಟನೆಯ 'KGF' ಸರಣಿ ಸಿನಿಮಾ ದೇಶ ವಿದೇಶಗಳಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ಚಿತ್ರಮಂದಿರಗಳಲ್ಲಿ ಮಾತ್ರವಲ್ಲ ಓಟಿಟಿ ಬಂದಮೇಲೆ ಸಿನಿಮಾ ಪ್ರಪಂಚದ ಮೂಲೆಮೂಲೆಗೆ ತಲುಪಿತ್ತು. ರಾಕಿಭಾಯ್ ಖದರ್ ನೋಡಿ ವಿದೇಶಿಗರು ಫಿದಾ ಆಗಿದ್ದರು. ಮಲೇಷಿಯಾದಲ್ಲಿ ನಟ ಯಶ್ ಅಭಿಮಾನಿಗಳ ಸಂಘ ಹುಟ್ಟಿಕೊಂಡಿದೆ. ಅಲ್ಲಿನ ಅಭಿಮಾನಿಗಳು ಕೂಡ ರಾಕಿ ಹೆಸರಿನಲ್ಲಿ ಸಾಮಾಜಮುಖಿ ಕೆಲಸ ಮಾಡ್ತಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ 'KGF' ಸಿನಿಮಾ ಮಾಡಿದ್ದ ಮ್ಯಾಜಿಕ್‌ ಅಂಥಾದ್ದು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದ್ದ ಚಿತ್ರವನ್ನು ಪರಭಾಷಿಕರು ಅಪ್ಪಿಕೊಂಡಿದ್ದರು. ಗಲ್ಫ್‌ ರಾಷ್ಟ್ರಗಳಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನದಂತಹ ದೇಶಗಳಲ್ಲಿ ಕೂಡ 'KGF' ಸಿನಿಮಾ ಸದ್ದು ಮಾಡಿತ್ತು. ದುಬೈ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಯಶ್ ಕ್ರೇಜ್ ಹೇಗಿದೆ ಎಂದು ಕೆಲವರು ಹೇಳಿರುವುದನ್ನು ಕೇಳಿದ್ದೇವೆ.

KGF Film Craze Knows No Borders Yash s Stardom Reaches Pakistan villages and More

ಇತ್ತೀಚೆಗೆ ಮಾಳವಿಕಾ ಅವಿನಾಶ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ವಿದೇಶಗಳಲ್ಲಿ ತಮ್ಮನ್ನು ಜನ 'KGF' ಚಿತ್ರದಿಂದ ಗುರ್ತಿಸುವಂತಾಗಿದೆ ಎಂದಿದ್ದರು. ಲಂಡನ್‌ಗೆ ಹೋಗಿದ್ದಾಗ ಎಸ್ಟೋನಿಯಾ ದೇಶದ ಯುವತಿ ನನ್ನನ್ನು 'KGF' ಚಿತ್ರದಲ್ಲಿ ನೋಡಿದ್ದಾಗಿ ಹೇಳಿದ್ದಳು ಎಂದು ನೆನಪಿಸಿಕೊಂಡಿದ್ದರು. ತಮಿಳು ಸಿನಿಮಾ ಚಿತ್ರೀಕರಣಕ್ಕಾಗಿ ದುಬೈಗೆ ಹೋಗಿದ್ದೆ. ನನ್ನ ಜೊತೆ ತಮಿಳು ನಟರಾದ ವಿಶಾಲ್ ಹಾಗೂ ಆರ್ಯ ಇದ್ದರು. ಆದರೆ ಪಾಕಿಸ್ತಾನಿ ಜೂನಿಯರ್ ಆರ್ಟಿಸ್ಟ್‌ಗಳು ನನ್ನ ಬಳಿ ಬಂದು ಫೋಟೋ ಕೇಳಿದ್ದರು ಎಂದು ಹೇಳಿದ್ದರು.

ನಿಜಕ್ಕೂ ಪಾಕಿಸ್ತಾನದಲ್ಲಿ ಕೂಡ 'KGF' ಕ್ರೇಜ್ ಹುಟ್ಟು ಹಾಕಿದೆ. ಪಾಕಿಸ್ತಾನದಲ್ಲಿ ದಕ್ಷಿಣ ಭಾರತ ಸಿನಿಮಾಗಳು ಸದ್ದು ಮಾಡುತ್ತವೆ. ಇತ್ತೀಚೆಗೆ ಕೆಲ ಸಿನಿಮಾಗಳು ಹಿಂದಿಗೆ ಡಬ್ ಆಗುವುದರಿಂದ ಬಹಳ ಸುಲಭವಾಗಿ ನೆರೆರಾಷ್ಟ್ರದ ಜನರನ್ನು ತಲುಪುತ್ತಿವೆ. ಪಾಕಿಸ್ತಾನದ ಹಳ್ಳಿಗಳಲ್ಲಿರುವ ಮಕ್ಕಳು ಕೂಡ 'KGF' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ನಟ ಯಶ್ ಅಭಿಮಾನಿಗಳಾಗಿದ್ದಾರೆ.

ಕನ್ನಡದ ಖ್ಯಾತ ಯೂಟ್ಯೂಬರ್ ಮಹಾಬಲರಾಮ್ ದೇಶ ವಿದೇಶಗಳನ್ನು ಸುತ್ತಾಡಿ ಅಲ್ಲಿನ ಇತಿಹಾಸ, ಸಾಂಸ್ಕೃತಿಕ ಮಹತ್ವದ ಬಗ್ಗೆ ಮಾಹಿತಿ ನೀಡುತ್ತಾರೆ. ತಮ್ಮ ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಚಾನಲ್ ಮೂಲಕ ಸಾಕಷ್ಟು ಜನರ ಮನಗೆದ್ದಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ಸೈದ್ಪುರ್ ಎಂಬ ಹಳ್ಳಿಗೆ ರಾಮ್ ಭೇಟಿ ನೀಡಿದ್ದರು. ಆ ಹಳ್ಳಿಯ ಜನ, ಅವರ ಆಚಾರ ವಿಚಾರ, ಪ್ರಕೃತಿ ಸೌಂದರ್ಯ ಎಲ್ಲವನ್ನು ಪರಿಚಯಿಸಿದ್ದಾರೆ. ಒಂದು ಮಂದಿರ, ಒಂದು ಗುರುದ್ವಾರ ಹಾಗೂ ಒಂದು ಮಸೀದಿ ಒಟ್ಟಿಗೆ ಇರುವುದು ಆ ಹಳ್ಳಿಯ ವಿಶೇಷ.

ಶರ್ಟು, ಪಂಚೆ ತೊಟ್ಟು ರಾಮ್, ಕನ್ನಡ ಬಾವುಟದ ಬ್ಯಾಡ್ಜ್ ಧರಿಸಿ ಸೈದ್ಪುರ್ ಹಳ್ಳಿಯಲ್ಲಿ ಸುತ್ತಾಡಿದ್ದಾರೆ. ಅಲ್ಲಿನ ಜನರನ್ನು ಮಾತನಾಡಿಸಿ ಹಳ್ಳಿಯ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇನ್ನು ಆ ಹಳ್ಳಿಯ ಮಕ್ಕಳ ಜೊತೆ ಮಾತನಾಡಿದ್ದಾರೆ. ಅವರ ಸಿನಿಮಾ ಪ್ರೀತಿ, ಭಾರತದ ಯಾವ ಯಾವ ಸಿನಿಮಾಗಳನ್ನು ನೋಡುತ್ತಾರೆ ಎನ್ನುವುದನ್ನು ಕೇಳಿ ತಿಳಿಸಿದ್ದಾರೆ. 'KGF' ಚಿತ್ರವನ್ನು ಪಾಕಿಸ್ತಾನದ ಸೈದ್ಪುರ್ ಹಳ್ಳಿ ಮಕ್ಕಳು ನೋಡಿ ಮೆಚ್ಚಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಾಗಿಬಿಟ್ಟಿದ್ದಾರೆ. ಅದನ್ನು ಅವರಿಂದಲೇ ಕೇಳಿ ರಾಮ್ ವಿವರಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'KGF' ಚಾಪ್ಟರ್-1 7 ವರ್ಷಗಳ ಹಿಂದೆ ತೆರೆಗೆ ಬಂದಿತ್ತು. ಅಂದಾಜು 250 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. 3 ವರ್ಷಗಳ ಹಿಂದೆ ಬಂದಿದ್ದ ಚಾಪ್ಟರ್-2 ಬರೋಬ್ಬರಿ 1,150 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಚಾಪ್ಟರ್- 3 ಮಾಡೋದಾಗಿಯೂ ಚಿತ್ರತಂಡ ಹೇಳಿದೆ. ಮತ್ತೆ ರಾಕಿ ಆರ್ಭಟ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ.

More from Filmibeat

English summary
'KGF' Goes International: Yash’s Stardom Shines Bright in Pakistan and Worldwide;
Read more about: yash kgf toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X