For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್' ನೋಡೋರಿಗೆ ಲಾಡು, ಅದೃಷ್ಟಶಾಲಿಗಳಿಗೆ ಚಿನ್ನ.!

  |
  'ಕೆಜಿಎಫ್' ನೋಡೋರಿಗೆ ಲಾಡು, ಅದೃಷ್ಟಶಾಲಿಗಳಿಗೆ ಚಿನ್ನ.! | FILMIBEAT KANNADA

  ಕೆಜಿಎಫ್ ಸಿನಿಮಾ ನೋಡ್ಬೇಕು ಎಂದು ಕಾಯುತ್ತಿರುವ ಪ್ರೇಕ್ಷಕರಿಗೆ ಇಲ್ಲೊಂದು ಆಫರ್ ಇದೆ. ದುಡ್ಡು ಕೊಟ್ಟು ಚಿತ್ರ ನೋಡುವ ಅಭಿಮಾನಿಗಳು ಚಿನ್ನ ಗೆಲ್ಲಬಹುದಾದ ಅವಕಾಶ ಇದೆ.

  ಹೌದು, ಬೆಂಗಳೂರಿನ ರಾಜಾಜಿನಗರದಲ್ಲಿರುವ ನವರಂಗ್ ಚಿತ್ರಮಂದಿರದಲ್ಲಿ ಕೆಜಿಎಫ್ ಚಿತ್ರದ ವಿಶೇಷ ಪ್ರದರ್ಶನವನ್ನ ಆಯೋಜಿಸಲಾಗಿದೆ. ಅಭಿಮಾನಿಗಳಿಗೆ ಒಂದು ಸ್ಪೆಷಲ್ ಶೋ ಬೇಕು ಎಂದು ನಿರ್ಧರಿಸಿ ನಿಗದಿ ಮಾಡಿರುವ ಈ ಶೋನಲ್ಲಿ ಭರ್ಜರಿ ಬಂಪರ್ ನೀಡಲಾಗಿದೆ.

  ಯಶ್ ಗೆ 'ಗುಡ್ ಲಕ್' ಹೇಳಿದ ಶಾರೂಖ್ ಕೆಜಿಎಫ್ ಬಗ್ಗೆ ಏನಂದ್ರು?

  ಬೆಳಿಗ್ಗೆ 6 ಗಂಟೆಗೆ ಮೊದಲ ಶೋ ಆರಂಭವಾಗಲಿದೆ. ಈ ಶೋನಲ್ಲಿ ಭಾಗವಹಿಸುವ ಎಲ್ಲ ಪ್ರೇಕ್ಷಕರಿಗೆ ಉಚಿತವಾಗಿ ಲಾಡು ವಿತರಣೆ ಮಾಡಲಾಗುತ್ತಿದೆ. ಜೊತೆಗೆ ಒಬ್ಬ ಅದೃಷ್ಟಶಾಲಿಗೆ 916 ಹಾಲ್ ಮಾರ್ಕ್ 2 ಗ್ರಾಂ ಚಿನ್ನ ನೀಡಲಾಗುತ್ತಿದೆ. ಬೆಳಿಗ್ಗೆ ಶೋನ ಎಲ್ಲ ಟಿಕೆಟ್ ಗಳನ್ನ ಸೇರಿಸಿ ಲಕ್ಕಿ ಡ್ರಾ ಮೂಲಕ ಒಬ್ಬ ವಿಜಯಶಾಲಿಯನ್ನ ಆಯ್ಕೆ ಮಾಡಲಾಗುವುದು.

  'ಕೆಜಿಎಫ್'ಗೆ ಸಿಕ್ಕ ಮೈನ್ ಥಿಯೇಟರ್ ಯಾವುದು?

  ಇದು ಕೇವಲ ನವರಂಗ್ ಚಿತ್ರದಲ್ಲಿ ಅಭಿಮಾನಿಗಳಿಂದ ಏರ್ಪಡಿಸಲಾಗಿರುವ ವಿಶೇಷ ಪ್ರದರ್ಶನ. ಇಂತಹ ಅನೇಕ ಪ್ರದರ್ಶನಗಳು ರಾಜ್ಯದ ಹಲವು ಚಿತ್ರಮಂದಿಗಳಲ್ಲಿ ನಿಗದಿಯಾಗಿದೆ.

  ಇನ್ನುಳಿದಂತೆ ಡಿಸೆಂಬರ್ 21 ರಂದು ಕೆಜಿಎಫ್ ಐದು ಭಾಷೆಗಳಲ್ಲಿ ತೆರೆಕಾಣುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.

  English summary
  Rocking star yash starrer Kgf movie first show start at morning 6 am at navrang theatre.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X