4ನೇ ದಿನವೂ 'ಕೆಜಿಎಫ್' ಅಬ್ಬರ: ಹಿಂದಿ ಕಲೆಕ್ಷನ್ ಕಂಡು ದಂಗಾದ ಬಾಲಿವುಡ್.!
Recommended Video

ಕೆಜಿಎಫ್ ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಈಗಾಗಲೇ ಒಟ್ಟಾರೆ ಕಲೆಕ್ಷನ್ 50 ಕೋಟಿ ದಾಟಿದೆ ಎಂದು ನಿರ್ಮಾಪಕರು ಬಹಿರಂಗಪಡಿಸಿದ್ದರು. ಇದೀಗ, ನೂರು ಕೋಟಿ ಕ್ಲಬ್ ಕಡೆ ಯಶ್ ಸಿನಿಮಾ ಹೆಜ್ಜೆ ಇಟ್ಟಿದೆ.
ಮತ್ತೊಂದೆಡೆ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ಅಬ್ಬರಿಸುತ್ತಿದೆ. ಶಾರೂಖ್ ಖಾನ್ ಅಭಿನಯದ 'ಜೀರೋ' ಚಿತ್ರದ ಮುಂದೆ ಕೆಜಿಎಫ್ ಆಟ ನಡೆಯಲ್ಲ ಎಂದು ಹೇಳಿದ್ದವರಿಗೆ ಈಗ ಅಚ್ಚರಿಯಾಗಿದೆ. ಯಾಕಂದ್ರೆ, ಜೀರೋ ಸಿನಿಮಾಗಿಂತ ಕೆಜಿಎಫ್ ಚೆನ್ನಾಗಿದೆ ಎಂಬ ವಿಮರ್ಶೆ ಬಾಲಿವುಡ್ ನಲ್ಲಿಯೂ ಬಂದಿದೆ.
ಹೀಗಾಗಿ, ಕೆಜಿಎಫ್ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಿದ್ರೆ, ಕೆಜಿಎಫ್ ಹಿಂದಿ ವರ್ಷನ್ ನಾಲ್ಕು ದಿನದಲ್ಲಿ ಒಟ್ಟು ಗಳಿಸಿದ್ದೆಷ್ಟು? ಸೋಮವಾರ ಎಷ್ಟು ಗಳಿಕೆ ಕಂಡಿದೆ? ಮುಂದೆ ಓದಿ.....

ನಾಲ್ಕು ದಿನಕ್ಕೆ ಒಟ್ಟು ಕಲೆಕ್ಷನ್?
ಕೆಜಿಎಫ್ ಹಿಂದಿ ವರ್ಷನ್ ಗೆ ಭಾರಿ ಮೆಚ್ಚುಗೆ ಸಿಕ್ಕಿದ್ದು, ನಾಲ್ಕು ದಿನಗಳಲ್ಲಿ ಒಟ್ಟು 12.01 ಕೋಟಿ ಗಳಿಕೆ ಕಂಡಿದೆ ಎಂದು ಖ್ಯಾತ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

ಸೋಮವಾರದ ಗಳಿಕೆ?
ಮೊದಲ ಮೂರು ದಿನ ಒಳ್ಳೆಯ ಬಿಸಿನೆಸ್ ಮಾಡಿದ್ದ ಕೆಜಿಎಫ್ ಸೋಮವಾರವೂ ಉತ್ತಮ ಗಳಿಕೆ ಕಂಡಿದೆ. ತರಣ್ ಆದರ್ಶ್ ಹೇಳಿರುವ ಪ್ರಕಾರ, ಸೋಮವಾರ 2.90 ಕೋಟಿ ಬಾಚಿಕೊಂಡಿದೆ.

ಮೊದಲ ಮೂರು ದಿನ ಹೇಗಿತ್ತು?
ಅಂದ್ಹಾಗೆ, ಮೊದಲ ದಿನ ಕೆಜಿಎಫ್ ಹಿಂದಿ ವರ್ಷನ್ 2.10 ಕೋಟಿ, ಎರಡನೇ ದಿನ 3 ಕೋಟಿ, ಮೂರನೇ ದಿನ 4.10 ಕಲೆಕ್ಷನ್ ಮಾಡಿತ್ತು. ಹಾಗ್ನೋಡಿದ್ರೆ, ಮೊದಲ ಮೂರು ದಿನದಲ್ಲಿ ಕೆಜಿಎಫ್ ಸಿನಿಮಾ ಅತ್ಯುತ್ತಮ ಗಳಿಕೆಯನ್ನೇ ಕಂಡಿದೆ.

1500 ಸ್ಕ್ರೀನ್ ನಲ್ಲಿ ಕೆಜಿಎಫ್
ಕೆಜಿಎಫ್ ಹಿಂದಿ ವರ್ಷನ್ ಸಿನಿಮಾ 1500 ಸ್ಕ್ರೀನ್ ನಲ್ಲಿ ಬಿಡುಗಡೆಯಾಗಿತ್ತು. ಕನ್ನಡ ಸಿನಿಮಾವೊಂದು ಬಾಲಿವುಡ್ ನಲ್ಲಿ ಇಷ್ಟು ದೊಡ್ಡ ಮಟ್ಟದ ರಿಲೀಸ್ ಕಂಡಿದ್ದು ಇದೇ ಮೊದಲು. ಅದರಲ್ಲೂ ಶಾರೂಖ್ ಸಿನಿಮಾ ಎದುರು ಕೆಜಿಎಫ್ ದಿಟ್ಟೆದೆಯಿಂದ ನಿಂತಿರುವುದು ನಿಜಕ್ಕೂ ಅಚ್ಚರಿ ಮತ್ತು ಒಳ್ಳೆಯ ಬೆಳವಣಿಗೆ.


Click it and Unblock the Notifications











