For Quick Alerts
  ALLOW NOTIFICATIONS  
  For Daily Alerts

  ವಿಡಿಯೋ : ಹೊಸ ಟೀಸರ್ ನಿಂದ 'ಕೆಜಿಎಫ್' ಕೌಂಟ್ ಡೌನ್ ಶುರು

  |
  KGF Kannada Movie: ಕೆಜಿಎಫ್' ಹೊಸ ಟೀಸರ್ ನಿಂದ ಕೌಂಟ್ ಡೌನ್ ಶುರು

  'ಕೆಜಿಎಫ್' ಸಿನಿಮಾ ಬಿಡುಗಡೆಯಾಗಲು ಕೇವಲ 9 ದಿನ ಬಾಕಿ ಇದೆ. ಈ ವಿಶೇಷವಾಗಿ ಸಿನಿಮಾದ ಹೊಸ ಟೀಸರ್ ಬಿಡುಗಡೆಯಾಗಿದ್ದು, ಕೌಂಟ್ ಡೌನ್ ಶುರು ಮಾಡಿದೆ.

  ಹಿಂದಿ ಭಾಷೆಯಲ್ಲಿ ಟೀಸರ್ ರಿಲೀಸ್ ಆಗಿದೆ. 30 ಸೆಕೆಂಡ್ ನ ಈ ಟೀಸರ್ ಮತ್ತಷ್ಟು ಕುತೂಹಲ ಮೂಡಿಸುತ್ತದೆ. ಈ ಹಿಂದೆ ಎರಡನೇ ಟ್ರೇಲರ್ ನಲ್ಲಿ ಬಂದ ಡೈಲಾಗ್ ಗಳೆ ಇಲ್ಲಿಯೂ ಇದೆ.

  ಯಶ್ ರನ್ನ ರಜನಿಗೆ ಹೋಲಿಕೆ ಮಾಡಿದ ತಮಿಳು ಪತ್ರಕರ್ತರಿಗೆ ರಾಖಿ ಉತ್ತರ!

  ಈ ಟೀಸರ್ ಗೆ ಸಹ ದೊಡ್ಡ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯೂಟ್ಯೂಬ್ ನಲ್ಲಿ ಟೀಸರ್ ಧೂಳೆಬಿಸುತ್ತಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ 2 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದಿದೆ.

  'ಕೆಜಿಎಫ್' ಕನ್ನಡದ ಹೆಮ್ಮೆಯ ಸಿನಿಮಾ. ಬಾಲಿವುಡ್ ನಲ್ಲಿಯೂ ಚಿತ್ರಕ್ಕೆ ದೊಡ್ಡ ಕ್ರೇಜ್ ಸೃಷ್ಟಿಯಾಗಿದೆ. ಫರಾನ್ ಅಕ್ತರ್ ಚಿತ್ರವನ್ನು ಹಂಚಿಕೆ ಮಾಡುತ್ತಿದ್ದಾರೆ. ಡಿಸೆಂಬರ್ 21 ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅದೇ ದಿನ ಶಾರೂಖ್ ಖಾನ್ ಅವರ 'ಜೀರೋ' ಸಹ ರಿಲೀಸ್ ಆಗುತ್ತಿದೆ.

  'ಕೆಜಿಎಫ್' ಬೆನ್ನಿಗೆ ವಿಶಾಲ್ ನಿಲ್ಲಲು ಕಾರಣ ಯಶ್ ಮಾಡಿದ್ದ 'ಆ' ದೊಡ್ಡ ಸಹಾಯ.!

  ರಾಕಿಂಗ್ ಸ್ಟಾರ್ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದೆ.

  English summary
  Rocking star Yash starrer 'KGF' hindi movie new teaser released. The movie will be releasing on December 21st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X