twitter
    For Quick Alerts
    ALLOW NOTIFICATIONS  
    For Daily Alerts

    ಹಿಂದಿಯಲ್ಲಿ ಇತಿಹಾಸ ನಿರ್ಮಿಸಿದ ಯಶ್ 'ಕೆಜಿಎಫ್'.!

    |

    Recommended Video

    KGF Kannada Movie: ಹಿಂದಿಯಲ್ಲಿ ಇತಿಹಾಸ ನಿರ್ಮಿಸಿದ ಯಶ್ 'ಕೆಜಿಎಫ್'.! | FILMIBEAT KANNADA

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಎಲ್ಲೆಡೆ ಭಾರಿ ಮೆಚ್ಚುಗೆ ಗಳಿಸಿಕೊಂಡಿದೆ. ಐದು ಭಾಷೆಯಲ್ಲಿ ತೆರೆಕಂಡಿದ್ದ ಸಿನಿಮಾ, ಸುಮಾರು 2 ಸಾವಿರ ಸ್ಕ್ರೀನ್ ನಲ್ಲಿ ರಿಲೀಸ್ ಆಗಿದೆ ಎನ್ನಲಾಗಿತ್ತು. ಆದ್ರೆ, ನಿಖರವಾದ ಮಾಹಿತಿ ಸಿಕ್ಕಿರಲಿಲ್ಲ.

    ಇದೀಗ, ಕೆಜಿಎಫ್ ಚಿತ್ರಮಂದಿರಗಳ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಬಾಲಿವುಡ್ ಖ್ಯಾತ ವಿಮರ್ಶಕ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಹಿಂದಿಯಲ್ಲಿ ಮಾತ್ರ 1500 ಸ್ಕ್ರೀನ್ ಲ್ಲಿ ಕೆಜಿಎಫ್ ರಿಲೀಸ್ ಆಗಿದೆಯಂತೆ.

    ಕೆ.ಜಿ.ಎಫ್ ಚೆನ್ನಾಗಿದ್ಯಾ? : ಫಿಲ್ಮಿಬೀಟ್ ಪೋಲ್ ನಲ್ಲಿ ಪ್ರೇಕ್ಷಕ ಹೇಳಿದ್ದೇನು? ಕೆ.ಜಿ.ಎಫ್ ಚೆನ್ನಾಗಿದ್ಯಾ? : ಫಿಲ್ಮಿಬೀಟ್ ಪೋಲ್ ನಲ್ಲಿ ಪ್ರೇಕ್ಷಕ ಹೇಳಿದ್ದೇನು?

    ಅಲ್ಲಿಗೆ, ಕೆಜಿಎಫ್ ಸಿನಿಮಾ ಹಿಂದಿಯಲ್ಲೇ ದಾಖಲೆ ಬರೆದಿದೆ. ಇದರ ಜೊತೆಗೆ ಕನ್ನಡದಲ್ಲಿ 400, ತೆಲುಗಿನಲ್ಲಿ 400, ತಮಿಳಿನಲ್ಲಿ 100 ಹಾಗೂ ಮಲಯಾಳಂ ಭಾಷೆಯಲ್ಲಿ 60 ಸ್ಕ್ರೀನ್ ಗಳಲ್ಲಿ ಸೇರಿದಂತೆ ಒಟ್ಟು 2460 ಸ್ಕ್ರೀನ್ ಗಳಲ್ಲಿ ಕೆಜಿಎಫ್ ಸಿನಿಮಾ ತೆರೆಗೆ ಬಂದಿದೆಯಂತೆ.

    ಹಿಂದಿಯಲ್ಲಿ ಎಷ್ಟು ಗಳಿಸಬಹುದು?

    ಹಿಂದಿಯಲ್ಲಿ ಎಷ್ಟು ಗಳಿಸಬಹುದು?

    ಇಷ್ಟು ದೊಡ್ಡ ರಿಲೀಸ್ ಕಂಡಿರುವ ಕೆಜಿಎಫ್ ಮೊದಲ ದಿನದ ಕಲೆಕ್ಷನ್ ನಲ್ಲಿ ಭಾರಿ ದಾಖಲೆ ನಿರ್ಮಿಸುವ ಸಾಧ್ಯತೆ ಇದೆಯಂತೆ. ಹೆಚ್ಚು ಚಿತ್ರಮಂದಿರದಲ್ಲಿ ತೆರೆಕಾಣುತ್ತಿರುವುದರಿಂದ ಮೊದಲ ದಿನ ದೊಡ್ಡ ಮಟ್ಟದ ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆ ಇದೆ.

    'ಝೀರೋ' ಟ್ವಿಟ್ಟರ್ ವಿಮರ್ಶೆ: ನಿರೀಕ್ಷೆ ಹುಸಿಗೊಳಿಸುವ ಸಿನಿಮಾ.!'ಝೀರೋ' ಟ್ವಿಟ್ಟರ್ ವಿಮರ್ಶೆ: ನಿರೀಕ್ಷೆ ಹುಸಿಗೊಳಿಸುವ ಸಿನಿಮಾ.!

    ವಾರಾಂತ್ಯಕ್ಕೆ ಎಷ್ಟಿರಬಹುದು?

    ವಾರಾಂತ್ಯಕ್ಕೆ ಎಷ್ಟಿರಬಹುದು?

    ಮೊದಲ ವಾರಾಂತ್ಯಕ್ಕೆ ಕೆಜಿಎಫ್ ಹಿಂದಿ ವರ್ಷನ್ ಸಿನಿಮಾ 10 ಕೋಟಿಗೂ ಅಧಿಕ ಕೆಲಕ್ಷನ್ ಮಾಡುವ ಸಾಧ್ಯತೆ ಇದೆಯಂತೆ. ಜೀರೋ ಚಿತ್ರದ ರಿವ್ಯೂ ಕಳಪೆಯಾಗಿರುವುದರಿಂದ ಕೆಜಿಎಫ್ ಗೆ ಸಹಾಯವಾಗಬಹುದು ಎಂಬ ಮಾತಿದೆ.

    ಕೆಜಿಎಫ್ 'ಕನ್ನಡದ ಗೋಲ್ಡನ್ ಫಿಲಂ' ಎನ್ನುತ್ತಿದ್ದಾರೆ ಪ್ರೇಕ್ಷಕ ಪ್ರಭುಗಳು.! ಕೆಜಿಎಫ್ 'ಕನ್ನಡದ ಗೋಲ್ಡನ್ ಫಿಲಂ' ಎನ್ನುತ್ತಿದ್ದಾರೆ ಪ್ರೇಕ್ಷಕ ಪ್ರಭುಗಳು.!

    ಕರ್ನಾಟಕದಲ್ಲೇ ಕೆಜಿಎಫ್ ರೆಕಾರ್ಡ್

    ಕರ್ನಾಟಕದಲ್ಲೇ ಕೆಜಿಎಫ್ ರೆಕಾರ್ಡ್

    ಹಾಗ್ನೋಡಿದ್ರೆ, ಕರ್ನಾಟಕದಲ್ಲೇ ಕೆಜಿಎಫ್ ಸಿನಿಮಾದ ಗಳಿಕೆ ಹೆಚ್ಚು ಬರಲಿದೆ ಎಂಬ ಮಾತು ಕೇಳಿಬರುತ್ತಿದೆ. ಹೆಚ್ಚು ಕಡಿಮೆ ಕರ್ನಾಟಕದಲ್ಲಿ 20 ಕೋಟಿವರೆಗೂ ಮೊದಲ ದಿನ ಗಳಿಕೆ ಕಾಣಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ.

    ವಿಮರ್ಶೆ-2: 'ಕೆಜಿಎಫ್' ಇಷ್ಟವಾಗೋದು ಈ ಎರಡೇ ಕಾರಣಕ್ಕೆ.! ವಿಮರ್ಶೆ-2: 'ಕೆಜಿಎಫ್' ಇಷ್ಟವಾಗೋದು ಈ ಎರಡೇ ಕಾರಣಕ್ಕೆ.!

    ಎಲ್ಲಾ ಭಾಷೆಗಳಲ್ಲೂ ಪ್ರಶಂಸೆ

    ಎಲ್ಲಾ ಭಾಷೆಗಳಲ್ಲೂ ಪ್ರಶಂಸೆ

    ಕೆಜಿಎಫ್ ಚಿತ್ರಕ್ಕೆ ಎಲ್ಲಾ ಭಾಷೆಯಲ್ಲೂ ಒಳ್ಳೆಯ ರಿವ್ಯೂ ಬಂದಿದೆ. ಕನ್ನಡ ನಟ ಹಾಗೂ ಕನ್ನಡ ಸಿನಿಮಾವನ್ನ ಎರಡು ಕೈಗಳಿಂದ ಅಪ್ಪಿಕೊಂಡಿದ್ದಾರೆ. ಕನ್ನಡದಲ್ಲೂ ಈ ರೀತಿ ಸಿನಿಮಾ ಬರುತ್ತೆ ಎಂದು ಪರಭಾಷಿಗರು ಅಚ್ಚರಿಯಾಗಿದ್ದಾರೆ. ಕನ್ನಡ್ ಕನ್ನಡ್ ಎನ್ನುತ್ತಿದ್ದ ಮಂದಿ ಈಗ ಕನ್ನಡ ಎನ್ನುವಂತಾಗಿದೆ.

    English summary
    Kannada movie Yash starrer Kgf movie has released in 1500 screens in hindi version.
    Friday, December 21, 2018, 18:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X