ನಾಲ್ಕು ಭಾಷೆಯಲ್ಲಿ ಫಸ್ಟ್ ಕ್ಲಾಸ್ ಪಡೆದ 'ರಾಕಿ' ಒಂದರಲ್ಲಿ ಜಸ್ಟ್ ಪಾಸ್.!
Recommended Video

'ಕೆಜಿಎಫ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. 21ನೇ ತಾರೀಖು 'ರಾಕಿ' ಹವಾ ದೇಶಾದ್ಯಂತ ಆರಂಭವಾಗಲಿದೆ. ಕನ್ನಡ ಬಾಕ್ಸ್ ಆಫೀಸ್ ಗೆ ಹೊಸ ಅಧಿಪತಿಯಾಗುವ ಪಣ ತೊಟ್ಟಿರುವ ಯಶ್, ಸ್ಯಾಂಡಲ್ ವುಡ್ ಚರಿತ್ರೆಯನ್ನ ಬದಲಿಸಿದ್ದಾರೆ ಎನ್ನಲಾಗಿದೆ.
ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ 'ಕೆಜಿಎಫ್' ಚಿತ್ರದ ಮೊದಲ ಹಾಡು ಇಂದು ಸಂಜೆ ಬರ್ತಿದೆ. ಸದ್ಯ, ಕೆಜಿಎಫ್ ಟ್ರೈಲರ್ ರಿಲೀಸ್ ಆಗಿ ಸುಮಾರು 25 ದಿನ ಕಳೆದಿದೆ. ಇಲ್ಲಿಯವರೆಗೂ ಗಮನಿಸಿದ್ರೆ, ನಾಲ್ಕು ಭಾಷೆಯಲ್ಲಿ ಫಸ್ಟ್ ಕ್ಲಾಸ್ ಪಡೆದ 'ರಾಕಿ' ಒಂದರಲ್ಲಿ ಜಸ್ಟ್ ಪಾಸ್ ಎನ್ನಬಹುದು.!
ಎಲ್ಲಾ ಭಾಷೆಯಲ್ಲೂ ಯಶ್ ಟ್ರೈಲರ್ ತುಂಬಾ ಚೆನ್ನಾಗಿ ಮೋಡಿ ಮಾಡಿದೆ. ಅದರಲ್ಲೂ ಕನ್ನಡ ಮತ್ತು ಹಿಂದಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ತೆಲುಗು ಮತ್ತು ತಮಿಳಿನಲ್ಲೂ ತಕ್ಕಮಟ್ಟಿಗೆ ಸದ್ದು ಮಾಡಿದೆ. ಆದ್ರೆ, ಮಲಯಾಳಂನಲ್ಲಿ ನಿರೀಕ್ಷೆಯನ್ನ ತಲುಪಲಿಲ್ಲ. ಹಾಗಿದ್ರೆ, ಕೆಜಿಎಫ್ ಚಿತ್ರದ ಯಾವ ಭಾಷೆಯ ಟ್ರೈಲರ್ ಎಷ್ಟು ವೀವ್ಸ್ ಪಡೆದುಕೊಂಡಿದೆ ಎಂದು ನೋಡೋಣ. ಮುಂದೆ ಓದಿ.....

1.6 ಕೋಟಿ ಹಿಂದಿ ಕೆಜಿಎಫ್
ಕೆಜಿಎಫ್ ಟ್ರೈಲರ್ ಗಳಲ್ಲಿಯೇ ಅತಿ ಹೆಚ್ಚು ವೀವ್ಸ್ ಪಡೆದುಕೊಂಡಿರುವುದು ಹಿಂದಿ ಭಾಷೆಯಲ್ಲಿ. ಡಿಸೆಂಬರ್ 4ಕ್ಕೆ 1.6 ಕೋಟಿ (16,503,778) ವಿಕ್ಷಕರ ಸಂಖ್ಯೆ ಹೊಂದಿದೆ. ಕನ್ನಡ ಚಿತ್ರವೊಂದಕ್ಕೆ ಬಾಲಿವುಡ್ ಸಿಕ್ಕಿರುವ ಅತಿ ದೊಡ್ಡ ಯಶಸ್ಸು ಇದಾಗಿದೆ.

ಇತಿಹಾಸ ನಿರ್ಮಿಸಿದ ಕನ್ನಡ
ಕನ್ನಡದಲ್ಲಿ ಇದುವರೆಗೂ ಯಾವ ಚಿತ್ರದ ಟೀಸರ್ ಅಥವಾ ಟ್ರೈಲರ್ ಕೂಡ ಇಷ್ಟು ದೊಡ್ಡ ಸಕ್ಸಸ್ ಕಂಡಿಲ್ಲ. ಸದ್ಯ, ಕನ್ನಡ ವರ್ಷನ್ ಟ್ರೈಲರ್ 1.07 ಕೋಟಿ (10,782,681) ವೀವ್ಸ್ ಪಡೆದುಕೊಂಡಿದೆ. ಸ್ಯಾಂಡಲ್ ವುಡ್ ಇತಿಹಾಸದಲ್ಲೇ ಕೆಜಿಎಫ್ ಮೊದಲ ಸ್ಥಾನದಲ್ಲಿದೆ. ಬಹುಶಃ ಮುಂದೆ ಈ ದಾಖಲೆಯನ್ನ ಬ್ರೇಕ್ ಮಾಡೋದಕ್ಕೆ ಕಷ್ಟವಾಗಬಹುದು.

ಟಾಲಿವುಡ್ ಕಾ ಬಾಪ್
ಪ್ರಭಾಸ್ ನಂತರ ರಾಕಿಂಗ್ ಸ್ಟಾರ್ ಸಿನಿಮಾ ಭಾರಿ ಸದ್ದು ಮಾಡ್ತಿದೆ. ಅದರಲ್ಲೂ ತೆಲುಗಿನಲ್ಲಂತೂ ಅಬ್ಬರ ಜೋರಾಗಿದೆ. ಟಾಲಿವುಡ್ ನಟರಂತೆ ಯಶ್ ಅವರನ್ನ ತೆಲುಗು ಇಂಡಸ್ಟ್ರಿ ಬರಮಾಡಿಕೊಳ್ಳಲು ಸಜ್ಜಾಗಿದೆ. ಅದರ ಪರಿಣಾಮ ತೆಲುಗು ಟ್ರೈಲರ್ 66 ಲಕ್ಷ (6,698,971) ವೀವ್ಸ್ ಪಡೆದುಕೊಂಡಿದೆ.

ತಮಿಳು-ಮಲಯಾಳಂ ಎಷ್ಟಿದೆ
ಉಳಿದ ಭಾಷೆಗಳಿಗೆ ಹೋಲಿಸಿಕೊಂಡರೇ, ತಮಿಳು ಮತ್ತು ಮಲಯಾಳಂನಲ್ಲಿ ತಕ್ಕ ಮಟ್ಟಿಗೆ ಸೌಂಡ್ ಮಾಡ್ತಿದೆ. ತಮಿಳಿನಲ್ಲಿ 35 ಲಕ್ಷ (3,539,219), ಮಲಯಾಳಂನಲ್ಲಿ ಕೇವಲ 8 ಲಕ್ಷ (853,159) ವೀಕ್ಷಕರ ಸಂಖ್ಯೆಯನ್ನ ಹೊಂದಿದೆ.


Click it and Unblock the Notifications











