ಶಾರೂಖ್, ರಜನಿಯನ್ನ ಹಿಂದಿಕ್ಕಿದ 'ಕೆಜಿಎಫ್' ಭಾರತದ ನಂ.1 ಸಿನಿಮಾ

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಅವರನ್ನ ಹಿಂದಿಕ್ಕಿರುವ 'ಕೆಜಿಎಫ್' ಈಗ ದೇಶದ ನಂಬರ್ ಸಿನಿಮಾ ಆಗಿ ಹೊರಹೊಮ್ಮಿದೆ.

ಐಎಂಡಿಬಿಯ ಮೋಸ್ಟ್ ಆಂಟಿಸಿಪೇಟೆಡ್ ಇಂಡಿಯನ್ ಮೂವಿಸ್ ಪಟ್ಟಿಯಲ್ಲಿ ಕನ್ನಡದ ಕೆಜಿಎಫ್ ಮೊದಲ ಸ್ಥಾನ ಪಡೆದುಕೊಂಡಿದೆ. ಆರಂಭದಲ್ಲಿ 'ಕೆಜಿಎಫ್' ಟಾಪ್ ಐದನೇ ಸ್ಥಾನದಲ್ಲಿತ್ತು. ಮೊದಲೆರಡು ಸ್ಥಾನಗಳಲ್ಲಿ ಜೀರೋ ಮತ್ತು 2.0 ಚಿತ್ರಗಳು ಆವರಿಸಿಕೊಂಡಿತ್ತು. ಆದ್ರೆ, ಮೊದಲ ಸ್ಥಾನಕ್ಕೆ ಹೋಗುತ್ತೆ ಎಂಬ ನಿರೀಕ್ಷೆ ಇರಲಿಲ್ಲ.

ಇದೀಗ, ನಿರೀಕ್ಷೆಯನ್ನ ಮೀರಿ ಯಶ್ ಸಿನಿಮಾ ಟಾಪ್ ಸ್ಥಾನದಲ್ಲಿದೆ. ಶೇಕಡಾ 59 ಅಂಕ ಪಡೆದಿರುವ ಕೆಜಿಎಫ್ ಮೊದಲ ಸ್ಥಾನದಲ್ಲಿದ್ರೆ, ಎರಡನೇ ಸ್ಥಾನದಲ್ಲಿರುವ ಜೀರೋ ಕೇವಲ ಶೇಕಡಾ 10 ಹಾಗೂ ಮೂರನೇ ಸ್ಥಾನದಲ್ಲಿರುವ 2.0 ಸಿನಿಮಾ ಶೇಕಡಾ 8 ಅಂಕ ಸಿಕ್ಕಿದೆ.

Kgf is most anticipated indian movies

ಶಾರೂಖ್ ಅಭಿನಯದ ಜೀರೋ ಮತ್ತು ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಡಿಸೆಂಬರ್ 21ಕ್ಕೆ ಒಟ್ಟಿಗೆ ಬರ್ತಿದೆ. ರಜನಿಕಾಂತ್ ಅಭಿನಯದ '2.0' ಸಿನಿಮಾ ನವೆಂಬರ್ 29 ರಂದು ಬಿಡುಗಡೆಯಾಗುತ್ತಿದೆ.

Kgf is most anticipated indian movies

ಕೆಜಿಎಫ್ ಸಿನಿಮಾ ಇಷ್ಟು ದೊಡ್ಡ ಮಟ್ಟಿಗೆ ಸದ್ದು ಮಾಡಲು ಕಾರಣ ಐದು ಭಾಷೆಯಲ್ಲಿ ಬಿಡುಗಡೆಯಾಗ್ತಿರುವುದು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ತೆರೆಕಾಣುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.

More from Filmibeat

English summary
Rocking star yash starrer kgf movie is number 1 in imdb Most anticipated indian movies list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X