For Quick Alerts
  ALLOW NOTIFICATIONS  
  For Daily Alerts

  'ಜೋಕೆ' ಹಾಡು ನೋಡೋದಕ್ಕೆ ಮಿಸ್ ಮಾಡ್ಕೋಬೇಡಿ.!

  |
  KGF Kannada Movie: ಜೋಕೆ' ಹಾಡು ನೋಡೋದಕ್ಕೆ ಮಿಸ್ ಮಾಡ್ಕೋಬೇಡಿ.!

  ಕೆಜಿಎಫ್ ಚಿತ್ರದ ಹಾಡುಗಳು ಸಖತ್ ಸದ್ದು ಮಾಡ್ತಿದೆ. ಲೇಟೆಸ್ಟ್ ಆಗಿ ಬಿಡುಗಡೆಯಾಗಿದ್ದ ಕೆಜಿಎಫ್ ಹಿಂದಿಯ 'ಗಲಿ ಗಲಿ' ಹಾಡು ಯೂಟ್ಯೂಬ್ ದಾಖಲೆಗಳನ್ನ ಧೂಳಿಪಟ ಮಾಡಿದೆ.

  ಆ ಹಾಡಿನ ಕನ್ನಡ ವರ್ಷನ್ ನಲ್ಲಿ ಇಂದು ಸಂಜೆ 7 ಗಂಟೆಗೆ ಬಿಡುಗಡೆಯಾಗಲಿದೆ. ಕೆಜಿಎಫ್ ಚಿತ್ರದ ಹಾಡುಗಳ ಪೈಕಿ ಈ ಹಾಡು ಭಾರಿ ನಿರೀಕ್ಷೆ ಮೂಡಿಸಿದೆ. ಯಾಕಂದ್ರೆ, ಇದು ''ಜೋಕೆ ನಾನು ಬಳ್ಳಿಯ ಮಿಂಚು'' ಹಾಡಿನ ಹೊಸ ವರ್ಷನ್.

  ಹೌದು, 1970 ರಲ್ಲಿ ತೆರೆಕಂಡ ಡಾ.ರಾಜ್ ಕುಮಾರ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ 'ಪರೋಪಕಾರಿ' ಚಿತ್ರದ ಹಾಡು 'ಜೋಕೆ ನಾನು ಬಳ್ಳಿಯ ಮಿಂಚು....' ಈ ಹಾಡನ್ನ 'ಕೆ.ಜಿ.ಎಫ್' ಸಿನಿಮಾದಲ್ಲಿ ಬಳಸಲಾಗಿದೆ. ಅಂದು ವಿಜಯಲಲಿತಾ ಹೆಜ್ಜೆ ಹಾಕಿದ್ದರು. ಇಂದು ತಮನ್ನಾ ಕುಣಿದಿದ್ದಾರೆ.

  ವಿಶ್ವ ದಾಖಲೆ ಮಾಡಿದ 'ಕೆಜಿಎಫ್' ಹಿಂದಿ ಹಾಡು

  ಮೂಲ ಹಾಡಿಗೆ ಚಿ ಉದಯ ಶಂಕರ್ ಮತ್ತು ಆರ್ ಎನ್ ಜಯಗೋಪಾಲ್ ಸಾಹಿತ್ಯ ಬರೆದಿದ್ದು, ಉಪೇಂದ್ರ ಕುಮಾರ್ ಸಂಗೀತ ನೀಡಿದ್ದಾರೆ. ಈಗ ಕೆಜಿಎಫ್ ನಲ್ಲಿ ರವಿಬಸ್ರೂರು ರೀ-ಕ್ರಿಯೇಟ್ ಮಾಡಿದ್ದಾರೆ.

  ತಮನ್ನಾಗೆ ಕೋಕ್, ಹೊಸ ನಟಿ ಜೊತೆ ಮತ್ತೆ 'ಕೆಜಿಎಫ್' ಸಾಂಗ್ ಶೂಟಿಂಗ್.!

  ಡಿಸೆಂಬರ್ 21 ರಂದು ಕೆಜಿಎಫ್ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಕಾಣುತ್ತಿದೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ನಿರ್ಮಾಣ ಮಾಡಿದೆ.

  English summary
  'Jokae nanu balliya minchu.....' kgf new version song will be releasing today evening at 7pm in lahari music.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X