'ಕೆಜಿಎಫ್'ನಲ್ಲಿ ದೊಡ್ಡ ಬದಲಾವಣೆ: ಇದ್ದಕ್ಕಿದ್ದಂತೆ 'ಆ ವ್ಯಕ್ತಿ' ದೂರವಾಗಿದ್ದೇಕೆ?
Recommended Video

ಕನ್ನಡ ಚಿತ್ರರಂಗದ ಕಡೆ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್. ಕನ್ನಡ ಚಿತ್ರರಂಗವನ್ನು ಮತ್ತೊಂದು ಲೆವೆಲ್ ಗೆ ಕರೆದುಕೊಂಡು ಹೋದ ಚಿತ್ರ. ಸಿನಿರಂಗದ ಸಾಧನೆಯಲ್ಲಿ ಕನ್ನಡಿಗರು ಏನು ಕಮ್ಮಿ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ ಚಿತ್ರ. ಈ ಚಿತ್ರದ ಬಳಿಕ ಯಶ್, ಪ್ರಶಾಂತ್ ನೀಲ್ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಸದ್ಯ, ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ನಡೆಯುತ್ತಿದೆ.
ಭಾರಿ ನಿರೀಕ್ಷೆ, ಕುತೂಹಲ ಮೂಡಿಸಿರುವ ಚಿತ್ರದ ಬಗ್ಗೆ ದೊಡ್ಡ ಸುದ್ದಿ ಹೊರ ಬಿದ್ದಿದೆ. ಕೆಜಿಎಫ್-2 ಚಿತ್ರದಲ್ಲಿ ದೊಡ್ಡದೊಂದು ಬದಲಾವಣೆ ಆಗಿದೆ. ಕೆಜಿಎಫ್ ಮೊದಲ ಭಾಗದಲ್ಲಿದ್ದ ಸಂಕಲನಕಾರ ಚಾಪ್ಟರ್ 2 ಚಿತ್ರದಿಂದ ಹೊರನಡೆದಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಉಗ್ರಂ, ಕೆಜಿಎಫ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಎಡಿಟರ್ ಈಗ ದಿಢೀರನೆ ಹೊರಬಂದಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮುಂದೆ ಓದಿ...

ಚಿತ್ರದಿಂದ ಎಡಿಟರ್ ಶ್ರೀಕಾಂತ್ ಔಟ್!
ಕೆಜಿಎಫ್-2 ಚಿತ್ರದಿಂದ ಅನುಭವಿ ಎಡಿಟರ್ ಶ್ರೀಕಾಂತ್ ಹೊರಬಂದಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಉಗ್ರಂ, ಕೆಜಿಎಫ್ ಎಂಬ ಎರಡು ಸೂಪರ್ ಹಿಟ್ ಸಿನಿಮಾ ಮಾಡಿದ್ದ ಶ್ರೀಕಾಂತ್, ಚಾಪ್ಟರ್-2 ಚಿತ್ರದಿಂದ ಹೊರನಡೆದಿದ್ದು ಅಚ್ಚರಿ ಮೂಡಿಸಿದೆ. ಹೀಗೆ, ದಿಢೀರನೆ ಚಿತ್ರತಂಡದಿಂದ ಹೊರಬಂದಿದ್ದು ಒಂದಿಷ್ಟು ಅನುಮಾನಕ್ಕೆ ಕಾರಣವಾಗಿದೆ.

ಶ್ರೀಕಾಂತ್ ಜಾಗಕ್ಕೆ ಹೊಸಬರ ಎಂಟ್ರಿ
ಎಡಿಟರ್ ಶ್ರೀಕಾಂತ್ ಹೊರ ಬಂದಮೇಲೆ ಆ ಜಾಗಕ್ಕೆ ಉಜ್ವಲ್ ಎನ್ನುವ ಯುವ ಪ್ರತಿಭೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಮಾಹಿತಿ ಫಿಲ್ಮಿಬೀಟ್ ಗೆ ಲಭ್ಯವಾಗಿದೆ. ಎಡಿಟಿಂಗ್ ಗಾಗಿ ಪ್ರಶಾಂತ್ ನೀಲ್ ಸಾಕಷ್ಟು ಜನರಿಗೆ ಹುಡುಕಾಟ ನಡೆಸಿದ್ದಾರಂತೆ. ಆ ನಂತರ ಉಜ್ವಲ್ ಗೌಡ ಕೆಲಸ ಇಷ್ಟವಾಗಿ ಕೆಜಿಎಫ್-2 ಟೀಂ ಸೇರಿಸಿಕೊಂಡಿದ್ದಾರೆ.

ಶ್ರೀಕಾಂತ್ ಜೊತೆ ಇದ್ದ ಉಜ್ವಲ್ ಗೌಡ
ಕೆಜಿಎಫ್-2 ಚಿತ್ರದ ಹೊಸ ಎಡಿಟರ್ ಉಜ್ವಲ್ ಗೌಡ ಎಡಿಟರ್ ಶ್ರೀಕಾಂತ್ ಶಿಷ್ಯ. ಕೆಜಿಎಫ್ ಮೊದಲ ಭಾಗದಲ್ಲಿ ಎಡಿಟರ್ ಆಗಿ ಕೆಲಸ ಮಾಡಿದ್ದ ಶ್ರೀಕಾಂತ್ ಅವರ ಶಿಷ್ಯನನ್ನೆ ಪಾರ್ಟ್-2 ಗೆ ಎಡಿಟರ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಉಜ್ವಲ್ ಸಾಕಷ್ಟು ಸಮಯದಿಂದ ಶ್ರೀಕಾಂತ್ ಜೊತೆ ಕೆಲಸ ಮಾಡುತ್ತಿದ್ದರು. ಈಗ ಮೊದಲ ಬಾರಿಗೆ ದೊಡ್ಡ ಸಿನಿಮಾ ಎಡಿಟರ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

ಎಡಿಟಿಂಗ್ ನಲ್ಲಿ ಪ್ರಶಾಂತ್ ನೀಲ್ ಎಕ್ಸ್ ಪರ್ಟ್
ಪ್ರಶಾಂತ್ ನೀಲ್ ಗೂ ಉತ್ತಮ ಎಡಿಟಿಂಗ್ ಸೆನ್ಸ್ ಇದೆ. ಚಿತ್ರದ ಸಾಕಷ್ಟು ಎಡಿಟಿಂಗ್ ಖುದ್ದು ಪ್ರಶಾಂತ್ ಅವರೇ ಮಾಡುತ್ತಾರೆ. ಈ ಹಿಂದಿನ ಚಿತ್ರಗಳಲ್ಲು ಮಾಡಿದ್ದಾರೆ. ನಿರ್ದೇಶನ ಮಾತ್ರವಲ್ಲದೆ ಎಡಿಟಿಂಗ್ ನಲ್ಲಿಯೂ ಪಂಟರ್ ಆಗಿರುವ ಪ್ರಶಾಂತ್ ನೀಲ್ ಗೆ ಹೊಸ ಪ್ರತಿಭೆಯ ಜೊತೆ ಕಲಸ ಮಾಡುವುದು ಕಷ್ಟವೆನಿಸುವುದಿಲ್ಲ. ತಮಗೆ ಬೇಕಾದ ಹಾಗೆ, ಹೇಗೆ ಕೆಲಸ ತೆಗೆಸಿಕೊಳ್ಳಬೇಕು ಎನ್ನುವುದು ಪ್ರಶಾಂತ್ ನೀಲ್ ಗೆ ಚೆನ್ನಾಗಿ ಗೊತ್ತಿದೆ.

ಚರ್ಚೆಗೆ ಕಾರಣವಾದ ಎಡಿಟರ್ ಬದಲಾವಣೆ
ನಿರ್ದೇಶಕರು ಮತ್ತು ಎಡಿಟರ್ ನಡುವೆ ಒಂದೊಳ್ಳೆ ಬಾಂಧವ್ಯವಿತ್ತು. ಪ್ರಶಾಂತ್ ನೀಲ್ ಯಾವ ರೀತಿಯ ಕೆಲಸ ಎನ್ನುವುದು ಎಡಿಟರ್ ಗೆ ತುಂಬ ಚೆನ್ನಾಗಿ ತಿಳಿದಿತ್ತು. ಹಾಗಾಗಿ ಇಬ್ಬರ ಕಾಂಬಿನೇಷನ್ ನಲ್ಲಿ ಉತ್ತಮ ಕೆಲಸ ಹೊರಬರುತ್ತಿತ್ತು. ಆದ್ರೀಗ, ಅನುಭವಿ ತಂತ್ರಜ್ಞನನ್ನು ಬಿಟ್ಟು ಯುವ ಪ್ರತಿಭೆಗೆ ಮಣೆ ಹಾಕಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ


Click it and Unblock the Notifications











