'ಕೆಜಿಎಫ್' ಚಿತ್ರದ ಸಹ ನಟ ನಿಧನಕ್ಕೆ ಪ್ರಶಾಂತ್ ನೀಲ್ ಸಂತಾಪ
'ಕೆಜಿಎಫ್' ಸಿನಿಮಾ ಇಡೀ ಭಾರತದಲ್ಲಿಯೇ ದೊಡ್ಡ ಪ್ರಶಂಸೆ ಪಡೆದು ಮುನ್ನುಗುತ್ತಿದೆ. ಸಿನಿಮಾ ಕೋಟಿ ಕೋಟಿ ಗಳಿಕೆ ಮಾಡುತ್ತಿದ್ದು, ಚಿತ್ರತಂಡದ ಖುಷಿಗೆ ಕಾರಣವಾಗಿದೆ.
ಒಂದು ಕಡೆ ಖುಷಿ ಇದ್ದರೆ, ಮತ್ತೊಂದು ಕಡೆ 'ಕೆಜಿಎಫ್' ತಂಡದ ದುಃಖಕ್ಕೆ ಕಾರಣ ಆಗಿದ್ದು ಸಹ ನಟನ ಸಾವು. 'ಕೆಜಿಎಫ್' ಸಿನಿಮಾದಲ್ಲಿ ನಟಿಸಿದ್ದ ನಟ ಲಕ್ಷ್ಮಿಪತಿ ಅವರು ವಿಧಿವಶರಾಗಿದ್ದಾರೆ. ಚಿತ್ರದಲ್ಲಿ ಹುಚ್ಚನ ಪಾತ್ರ ಮಾಡಿದ್ದ ಅವರು ಒಂದು ದೃಶ್ಯದಲ್ಲಿ ಅದ್ಬುತವಾಗಿ ನಟಿಸಿದ್ದರು.

ಲಕ್ಷ್ಮಿಪತಿ ಅವರ ಆ ವಿಡಿಯೋದ ಜೊತೆಗೆ ಸಾವಿನ ವಿಷಯವನ್ನು ಸಿನಿಮಾಟೋಗ್ರಾಫರ್ ಭುವನ್ ಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ನಿರ್ದೇಶಕ ಪ್ರಶಾಂತ್ ನೀಲ್ ಸಹ ಟ್ವಿಟ್ಟರ್ ನಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಟ್ವಿಟ್ಟರ್ ನಲ್ಲಿ ಭುವನ್ ಗೌಡ ಅವರ ವಿಡಿಯೋಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. 'ಕೆಜಿಎಫ್' ಸಿನಿಮಾದ ನೋಡಿದ ಇವರ ಪಾತ್ರ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
English summary
'KGF' kannada movie actor lakshmipathi passes away.


Click it and Unblock the Notifications