ಬಿಡುಗಡೆಗೆ ಮೊದಲೇ ಬಿಗ್ ನ್ಯೂಸ್ ಕೊಟ್ಟ 'ಕೆ ಜಿ ಎಫ್' ಕುವರಿ
Recommended Video

ಈಗ ಎಲ್ಲಿ ನೋಡಿದರು 'ಕೆ ಜಿ ಎಫ್' ಸಿನಿಮಾ ಬಗ್ಗೆಯೇ ಸುದ್ದಿ. ಕೋಲಾರದ ಸಣ್ಣ ಹಳ್ಳಿಯಿಂದ ಹಿಡಿದು, ಬಾಂಬೆಯ ಬೀದಿಯವರೆಗೆ 'ಕೆ ಜಿ ಎಫ್' ಸಿನಿಮಾದ ಬಗ್ಗೆಯೇ ಮಾತು. ಹೀಗಿರುವಾಗಲೇ ಚಿತ್ರದ ನಾಯಕಿ ಒಂದು ಹೊಸ ಸುದ್ದಿ ಕೊಟ್ಟಿದ್ದಾರೆ.
'ಕೆ ಜಿ ಎಫ್' ಸಿನಿಮಾ ಬಿಡುಗಡೆಯಾದ ಮೇಲೆ ಅದು ದೊಡ್ಡ ಮಟ್ಟದಲ್ಲಿ ಗೆದ್ದರೇ ಆ ಚಿತ್ರದಲ್ಲಿ ಇರುವವರಿಗೆ ಒಳ್ಳೆಯ ಅವಕಾಶ ಸಿಗುತ್ತದೆ ಎನ್ನುವ ಲೆಕ್ಕಾಚಾರ ಇದೆ. ಆದರೆ, ನಟಿ ಶ್ರೀನಿಧಿ ಶೆಟ್ಟಿಗೆ ಸಿನಿಮಾ ರಿಲೀಸ್ ಗೆ ಮೊದಲೇ ಅವಕಾಶಗಳು ಹುಡುಕಿಕೊಂಡು ಬರುತ್ತಿದೆಯಂತೆ.
ಮಾಡಲಿಂಗ್ ಲೋಕದ ಮಿಂಚು ಶ್ರೀನಿಧಿ ಶೆಟ್ಟಿ 'ಕೆ ಜಿ ಎಫ್' ಸಿನಿಮಾದ ಮೂಲಕ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುವ ಅವಕಾಶ ಪಡೆದರು. ಕನ್ನಡ ಚಿತ್ರದಿಂದ ತಮ್ಮ ಚಿತ್ರ ಬದುಕು ಶುರು ಮಾಡಿರುವ ಈ 'ಕೆ ಜಿ ಎಫ್' ಕುವರಿಗೆ ಈಗ ಅವಕಾಶಗಳ ಮೇಲೆ ಅವಕಾಶ ಬರುತ್ತಿದೆಯಂತೆ. ಮುಂದೆ ಓದಿ...

ಶ್ರೀನಿಧಿ ಪಾಲಾಗುತ್ತಾ ಬಾಲಿವುಡ್ ಸಿನಿಮಾ?
ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತಿರುವ 'ಕೆ ಜಿ ಎಫ್' ಮೂಲಕ ಆ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿ ಹೆಸರು ಪ್ರಜ್ವಲಿಸುತ್ತಿದೆ. ಈ ಚಿತ್ರ ಬಿಡುಗಡೆಗೆ ಮುಂಚೆಯೇ ಬಾಲಿವುಡ್ ನ ಖ್ಯಾತ ನಿರ್ದೇಶಕರುಗಳು ಅವರನ್ನು ಸಂಪರ್ಕ ಮಾಡಿದ್ದಾರಂತೆ. ಆ ಸಿನಿಮಾಗಳು ಸದ್ಯ ಮಾತುಕತೆ ಹಂತದಲ್ಲಿ ಇವೆಯಂತೆ.

ಬೇರೆ ಬೇರೆ ಚಿತ್ರರಂಗದಿಂದ ಕರೆಗಳು
ಹಿಂದಿ ಮಾತ್ರವಲ್ಲದೆ ತಮಿಳು, ತೆಲುಗು ಸಿನಿಮಾಗಳಿಂದ ಕೂಡ ಶ್ರೀನಿಧಿ ಅವಕಾಶಗಳು ಬರುತ್ತಿದೆಯಂತೆ. ಸಿನಿಮಾದ ಟ್ರೇಲರ್ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಎಲ್ಲ ಭಾಷೆಯಲ್ಲಿ ಹಿಟ್ ಆಗಿದೆ. ಹೀಗಿರುವಾಗ ಸಾಮಾನ್ಯವಾಗಿಯೇ ಚಿತ್ರದ ನಾಯಕಿಯ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

ಸದ್ಯಕ್ಕೆ 'ಕೆ ಜಿ ಎಫ್' ಅಷ್ಟೇ
ಶ್ರೀನಿಧಿ ಶೆಟ್ಟಿ ಪೋರ್ಟ್ ಪೊಲೀಯೋ ಬಿ ಟೌನ್ ತಲುಪಿದೆಯಂತೆ. ಅಲ್ಲಿಂದ ಕೆರೆಗಳು ಬರುತ್ತಿದ್ದು, ಸದ್ಯಕ್ಕೆ ಬೇರೆ ಸಿನಿಮಾಗಳ ಬಗ್ಗೆ ಗಮನ ಹರಸದೆ 'ಕೆ ಜಿ ಎಫ್' ಚಿತ್ರದ ಬಗ್ಗೆಯಷ್ಟೇ ಗಮನ ನೀಡುತ್ತಿದ್ದಾರಂತೆ. ಅಲ್ಲದೆ ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎನ್ನುವ ಕಾತುರದಲ್ಲಿ ಇದ್ದಾರಂತೆ.

ಮಿಸ್ ಸುಪ್ರನ್ಯಾಷನಲ್
ಮೂಲತಃ ಮಂಗಳೂರಿನ ಹುಡುಗಿಯಾಗಿರುವ ಶ್ರೀನಿಧಿ ಶೆಟ್ಟಿ ಪೊಲೆಂಡ್ ನಲ್ಲಿ ನಡೆದ ಮಿಸ್ ಸುಪ್ರನ್ಯಾಷನಲ್-2016ರ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ಅದೇ ಸಮಯದ 'ಕೆ ಜಿ ಎಫ್' ಸಿನಿಮಾದ ಆಫರ್ ಅವರಿಗೆ ಸಿಕ್ಕಿತು. ಈ ಚಿತ್ರದ ಅವರ ಸಿನಿ ಜೀವನದ ಮೊದಲ ಸಿನಿಮಾ ಆಯ್ತು.

ಡಿಸೆಂಬರ್ 21ಕ್ಕೆ ಬಿಡುಗಡೆ
ಅಂದಹಾಗೆ, 'ಕೆ ಜಿ ಎಫ್' ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆ ಆಗುತ್ತಿದೆ. ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದ್ದು, ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿ ಮಾಡಿದೆ. ಪ್ರಶಾಂತ್ ನೀಲ್ ಚಿತ್ರದ ನಿರ್ದೇಶನ ಮಾಡಿದ್ದು, ಹೊಂಬಾಳೆ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಿದೆ.


Click it and Unblock the Notifications