'ಕೆ ಜಿ ಎಫ್' ಬಗ್ಗೆ ನಟಿ ತಮನ್ನಾ ಹೀಗೆ ಹೇಳಿದ್ರು
Recommended Video

ಸೌತ್ ಬ್ಯೂಟಿ ತಮನ್ನಾ ಮತ್ತೆ ಇದೀಗ ಕನ್ನಡಕ್ಕೆ ಬಂದಿದ್ದಾರೆ. ಈ ಹಿಂದೆ 'ಜಾಗ್ವರ್' ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ್ದ ಈ ನಟಿ ಈ ಬಾರಿ 'ಕೆ ಜಿ ಎಫ್' ಅಡ್ಡದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ನಟಿ ತಮನ್ನಾ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಹಾಡಿನ ಒಂದು ಪೋಸ್ಟರ್ ಸದ್ಯ ಬಿಡುಗಡೆಯಾಗಿದ್ದು, ಅಭಿಮಾನಿಗಳು ಕಣ್ಣು ಕುಕ್ಕುತ್ತಿದೆ. ಕಪ್ಪು ಡ್ರೆಸ್ ನಲ್ಲಿ ಮಿಲ್ಕಿ ಬ್ಯೂಟಿ ಹೊಳೆಯುತ್ತಿದ್ದಾರೆ. ನಟ ಯಶ್ ಜೊತೆಗೆ ಇರುವ ತಮ್ಮ ಪೋಸ್ಟರ್ ಅನ್ನು ತಮನ್ನಾ ಕೂಡ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಿನಿಮಾದ ಬಗ್ಗೆ ಬರೆದುಕೊಂಡಿರುವ ಅವರು ''ನಟ ಯಶ್ ಅವರ ಜೊತೆಗೆ 'ಜೋಕೆ...' ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ತುಂಬ ಒಳ್ಳೆಯ ಸಮಯವನ್ನು ಅವರ ಜೊತೆಗೆ ಕಳೆಯುತ್ತಿದ್ದೇನೆ. ಇಡೀ ಚಿತ್ರತಂಡ ಮನೆಯವರ ರೀತಿ ನನ್ನನ್ನು ನೋಡಿಕೊಂಡಿದೆ. ಅವರಿಗೆ ಧನ್ಯವಾದ. ಶೀಘ್ರದಲ್ಲೇ ನೀವು 'ಕೆ ಜಿ ಎಫ್' ಸಿನಿಮಾವನ್ನು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನೋಡಿ.'' ಎಂದು ತಮನ್ನಾ ಟ್ವೀಟ್ ಮಾಡಿದ್ದಾರೆ.
ಅಂದಹಾಗೆ, 'ಕೆ ಜಿ ಎಫ್' ಸಿನಿಮಾದ ಒಂದು ಹಾಡಿನ ಚಿತ್ರೀಕರಣ ಬಾಕಿ ಇದ್ದು, ಆ ಹಾಡಿನ ಶೂಟಿಂಗ್ ಈಗ ನಡೆಯುತ್ತಿದೆ. 'ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾ ಡಿಸೆಂಬರ್ ವೇಳೆ ಬಿಡುಗಡೆ ಆಗುವ ಸಾಧ್ಯತೆ ಇದೆ.


Click it and Unblock the Notifications











