ಇವು ಕುಡುಕರ ವರ್ಷನ್ ನ 'ಕೆಜಿಎಫ್' ಡೈಲಾಗ್ ಗಳು
Recommended Video

'ಕೆಜಿಎಫ್' ಸಿನಿಮಾದ ಬಹುತೇಕ ಸಂಭಾಷಣೆಗಳು ಅಭಿಮಾನಿಗಳಿಗೆ ಇಷ್ಟ ಆಗಿವೆ. ಚಿತ್ರಮಂದಿರದಲ್ಲಿ ಇಂತಹ ಡೈಲಾಗ್ ಗಳಿಗೆ ಶಿಳ್ಳೆ ಚಪ್ಪಾಳೆ ಬೀಳುತ್ತಿವೆ. ಸಿನಿಮಾದ ಗೆಲುವಿನಲ್ಲಿ ಸಂಭಾಷಣೆ ಕೂಡ ಪ್ರಮುಖ ಪಾತ್ರ ವಹಿಸಿದೆ.
ಸಿನಿಮಾದಲ್ಲಿನ ಚಂದ್ರಮೌಳಿ ಬರವಣಿಗೆ ಕ್ಲಿಕ್ ಆಗಿತ್ತು. ಯಶ್ ತಮ್ಮ ಸ್ಟೈಲ್ ನಲ್ಲಿ ಆ ಡೈಲಾಗ್ ಗಳನ್ನು ಹೇಳಿದ್ದರು. ಆದರೆ, ಈಗ ಈ ಡೈಲಾಗ್ ಗಳು ಬೇರೆ ರೂಪ ಪಡೆದಿವೆ.
ಈ ಪಂಚಿಂಗ್ ಡೈಲಾಗ್ ಗಳನ್ನು ಇದೀಗ ಕುಡುಕರ ವರ್ಷನ್ ನಲ್ಲಿ ಮಾಡಲಾಗಿದೆ. ಸಿಕ್ಕಾಪಟ್ಟೆ ತಮಾಷೆಯ ಈ ಡೈಲಾಗ್ ಗಳನ್ನು ಯಾರು ಈ ರೀತಿ ಬರೆದರು ಅಂತ ತಿಳಿದಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಕುಡುಕರ ವರ್ಷನ್ ನ 'ಕೆಜಿಎಫ್' ಡೈಲಾಗ್ ಗಳು ಸಾಕಷ್ಟು ಮೆಚ್ಚುಗೆ ಪಡೆಯುತ್ತಿವೆ. ಆ ಡೈಲಾಗ್ ಗಳು ಮುಂದಿವೆ ಓದಿ...

MONSTER
ಗ್ಯಾಂಗ್ ಕಟ್ಕೊಂಡು ಎಣ್ಣೆ ಹೊಡೆಯೋನು
ಗ್ಯಾಂಗ್ ಸ್ಟರ್
ಅವನು ಒಬ್ನೇ ಕುಡೀತಿದ್ದ
MONSTER.

ನೀನು ಇದ್ದೀಯ ಎಂಬ ಧೈರ್ಯ
ನಿನ್ ಹಿಂದೆ ಬಿಲ್ ಕಟ್ಟೋರು ನೂರು ಜನ ಇದ್ದಾರೆ ಅನ್ನೋ ನಂಬಿಕೆ ನಿನಗಿದ್ರೆ..
ಬರೀ ಒಂದು ಬಾರ್ ನುಗ್ಗಬಹುದು.
ಅದೇ ಬಿಲ್ ಕೊಡೋಕೆ ನೀನು ರೆಡಿ ಇದೀಯ ಅಂತ ಹಿಂದೆ ಇರೋ ನೂರು ಜನಕ್ಕೆ ಧೈರ್ಯ ಬಂದ್ರೆ..
ಊರಲ್ಲಿರೋ ಬಾರಿಗೆಲ್ಲ ನುಗ್ಗಬಹುದು.

ಭಯಂಕರ ಉಸಿರು
ಮೊದಲನೇ ಪೆಗ್ಗಿಗೇ ಟೈಟಾಗಿ ಚಿತ್ತಾದೋನ ಉಸಿರು..
ಫುಲ್ ಬಾಟಲ್ ಖಾಲಿ ಮಾಡಿದೋನ ಬ್ರೋಕನ್ ಇಂಗ್ಲೀಷಿಗಿಂತ ಭಯಂಕರವಾಗಿರುತ್ತೆ.

ವಿಧಿಯ ಕೈವಾಡ
ವಿಧಿಯ ಕೈವಾಡ..
ಆವತ್ತು ಅಲ್ಲಿ ಎರಡು ಘಟನೆ ನಡೀತು..
ಆ ಬಾರ್ & ರೆಸ್ಟೋರೆಂಟೂ ಹುಟ್ತು..
ಈ ಪೀವೋಟೂ ಹುಟ್ದ.

ಫುಲ್ ಬಾಟ್ಲು ಲೆಕ್ಕ
ಎಣ್ಣೆ ಪಾರ್ಟೀಲಿ ಯಾರು ಫುಲ್ ಬಾಟ್ಲು ಖಾಲಿ ಮಾಡ್ದ ಅನ್ನೋದು ಲೆಕ್ಕಕ್ ಬರಲ್ಲ..
ಯಾವನು ಮೊದಲು ವಾಮಿಟ್ ಮಾಡ್ದ ಅನ್ನೋದೆ ಲೆಕ್ಕಕ್ ಬರೋದು..


Click it and Unblock the Notifications











